ಈ ಅಸಭ್ಯ ಆಂಟಿ ತುಂಬಾನೇ ಓವರ್​ ಆ್ಯಕ್ಟಿಂಗ್​ ಎಂದ ಫ್ಯಾನ್​ಗೆ ಜೆನಿಲಿಯಾ ಡಿಸೋಜಾ ಕೊಟ್ರು ಸೈಲೆಂಟ್​ ಉತ್ತರ

ಜೆನಿಲಿಯಾಗೆ ಕೆಲವರು ಓವರ್​ ಆ್ಯಕ್ಟಿಂಗ್​ ಆಂಟಿ, ನಾಚಿಕೆ ಆಗಬೆಕು ನಿಮಗೆ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ ಎಂದು ಅವರಿಗೆ ಹೇಳಲಾಗಿತ್ತು.

ಈ ಅಸಭ್ಯ ಆಂಟಿ ತುಂಬಾನೇ ಓವರ್​ ಆ್ಯಕ್ಟಿಂಗ್​ ಎಂದ ಫ್ಯಾನ್​ಗೆ ಜೆನಿಲಿಯಾ ಡಿಸೋಜಾ ಕೊಟ್ರು ಸೈಲೆಂಟ್​ ಉತ್ತರ
ಜೆನಿಲಿಯಾ-ರಿತೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 29, 2021 | 6:00 PM

ನಟಿ ಜೆನೆಲಿಯಾ ಡಿಸೋಜಾ ಬಾಲಿವುಡ್​ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ. ಅವರು ಸದ್ಯ, ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪತಿ ರಿತೇಶ್​​ ದೇಶ್​ಮುಖ್​ ಜತೆ ಫನ್ನಿ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಾ ಇರುತ್ತಾರೆ. ಇದು ಅನೇಕರಿಗೆ ಇಷ್ಟವಾಗಿದೆ. ಆದರೆ, ಕೆಲವರಿಗೆ ಇದು ಓವರ್ ಆ್ಯಕ್ಟಿಂಗ್​ ಅನಿಸಿದೆ. ಈ ಬಗ್ಗೆ ಕೆಲವರು ಜೆನಿಲಿಯಾ ಸೋಶಿಯಲ್​ ಮೀಡಿಯಾ ಖಾತೆಯಲ್ಲೇ ಕಮೆಂಟ್​ ಹಾಕಿದ್ದಾರೆ. ಇದಕ್ಕೆ ಜೆನಿಲಿಯಾ ಉತ್ತರ ನೀಡಿದ್ದಾರೆ.

ಜೆನಿಲಿಯಾಗೆ ಕೆಲವರು ಓವರ್​ ಆ್ಯಕ್ಟಿಂಗ್​ ಆಂಟಿ, ನಾಚಿಕೆ ಆಗಬೆಕು ನಿಮಗೆ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ. ಇಬ್ಬರು ಮಕ್ಕಳಿದ್ದಾರೆ. ನಿಮ್ಮ ಅವತಾರ ನೋಡಿ ಮಕ್ಕಳು ಕೂಡ ಶಾಕ್​ ಆಗಬಹುದು. ನಾವು ಕೂಡ ಈ ರೀತಿ ಮಾಡಲ್ಲ’ ಎಂದು ಜೆನಿಲಿಯಾಗೆ ಅಭಿಮಾನಿಯೋರ್ವ ಕಮೆಂಟ್​ ಮಾಡಿದ್ದ.

ಜೆನಿಲಿಯಾ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಅವರು ಶೋ ಒಂದಕ್ಕೆ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಂದ ಬಂದ ಕಮೆಂಟ್​ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಎಲ್ಲರೂ ಜೆನಿಲಿಯಾ ಸಿಟ್ಟಾಗುತ್ತಾರೆ, ಖಡಕ್​ ಆಗಿ ಉತ್ತರಿಸುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಅವರು ಹೇಳಿದ ರೀತಿಯೇ ಬೇರೆ ರೀತಿಯಲ್ಲಿ ಇತ್ತು.

‘ಬಹುಶಃ ಕಮೆಂಟ್​ ಮಾಡಿದ ವ್ಯಕ್ತಿಯ ದಿನ ಕೆಟ್ಟದಾಗಿತ್ತು ಅನಿಸುತ್ತದೆ. ಮನೆಯಲ್ಲಿ ಏನೋ ಜಗಳವಾಗಿತ್ತು. ಈ ಕಾರಣಕ್ಕೆ ಅವರು ಆ ರೀತಿ ಕಮೆಂಟ್​ ಹಾಕಿರಬಹುದು. ಅವರ ಮನೆಯಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ’ ಎಂದು ಸೈಲೆಂಟ್​ ಆಗಿ ಉತ್ತರಿಸಿದ್ದಾರೆ ಜೆನಿಲಿಯಾ.

ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಂತರದಲ್ಲಿ ಶಿಲ್ಪಾ ಶೆಟ್ಟಿ ಅಪ್ಸೆಟ್​ ಆಗಿದ್ದರು. ಅವರು ಜಡ್ಜ್​ ಆಗಿದ್ದ ಡ್ಯಾನ್ಸ್​ ಶೋಗೆ ಗೈರಾಗಿದ್ದರು. ಈ ವೇಳೆ ಜೆನಿಲಿಯಾ ಹಾಗೂ ರಿತೇಶ್​​ ಜಡ್ಜ್​ ಆಗಿ ಶೋಗೆ ಆಗಮಿಸಿದ್ದರು.

ಇದನ್ನೂ ಓದಿ: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಈಗ ಎಲ್ಲಿದ್ದಾರೆಂದು ವಿವರಿಸುತ್ತದೆ ಈ ಫೊಟೊ ಗ್ಯಾಲರಿ!

KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ