ಬಾಲಿವುಡ್ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಿದ ಸಿನಿಮಾ ‘ಕೋಯಿ ಮಿಲ್ ಗಯಾ’. ಆ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಎರಡು ಶೇಡ್ನ ಪಾತ್ರ ಮಾಡಿದ್ದರು. ಒಂದರಲ್ಲಿ ಸೂಪರ್ ಹೀರೋ ರೀತಿ ಕಾಣಿಸಿಕೊಂಡಿದ್ದರು. ಹೃತಿಕ್ ನಿರ್ವಹಿಸಿದ್ದ ಆ ಪಾತ್ರಕ್ಕೆ ಸೂಪರ್ ಹೀರೋ ಗುಣಗಳು ಬರಲು ಕಾರಣವಾಗಿದ್ದು ಜಾದೂ ಎಂಬ ಏಲಿಯನ್. ಆ ಸಿನಿಮಾದಲ್ಲಿ ಜಾದೂ ಪಾತ್ರ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಈಗ ಮತ್ತೆ ಅದೇ ಜಾದೂ ಜೊತೆ ಹೃತಿಕ್ ನಟಿಸುತ್ತಾರೆ ಎಂಬ ಸುದ್ದಿ ಹರಡಿದೆ.
ಇತ್ತೀಚೆಗಷ್ಟೇ ‘ಕ್ರಿಶ್’ ಚಿತ್ರಕ್ಕೆ 14 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಸಿನಿಮಾದ ಒಂದು ಮಿನಿ ಟೀಸರ್ ಹಂಚಿಕೊಂಡಿದ್ದರು. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸಕ್ಕೆ ಅವರು ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ‘ಕ್ರಿಶ್ 4’ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಈ ಸಿನಿಮಾದಲ್ಲಿ ಜಾದೂ ಪಾತ್ರ ಇರಲಿದೆ ಎಂದು ಹೇಳಲಾಗುತ್ತಿದೆ.
‘ಕ್ರಿಶ್ 4’ ಸಿನಿಮಾದಲ್ಲಿ ಟೈಮ್ ಟ್ರಾವೆಲಿಂಗ್ ಕಾನ್ಸೆಪ್ಟ್ ಬಳಸಿಕೊಂಡು ಜಾದೂ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ತೀರ್ಮಾನಿಸುತ್ತಿದೆ ಎಂಬ ಬಗ್ಗೆ ವರದಿ ಆಗಿದೆ. ಆದರೆ ಈ ಕುರಿತು ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ‘ಭೂತಕಾಲ ಮುಗಿಯಿತು. ಭವಿಷ್ಯ ಕಾಲ ಏನನ್ನು ತರುತ್ತದೆ ಅಂತ ನೋಡೋಣ’ ಎಂಬ ಕ್ಯಾಪ್ಷನ್ ಜೊತೆಗೆ ಕ್ರಿಶ್ 4 ಚಿತ್ರದ ಟೀಸರ್ ಅನ್ನು ಹೃತಿಕ್ ಹಂಚಿಕೊಂಡಿದ್ದರು. ಆ ಕ್ಯಾಪ್ಷನ್ನಲ್ಲಿ ಭೂತ-ಭವಿಷ್ಯದ ಬಗ್ಗೆ ಅವರು ಪ್ರಸ್ತಾಪ ಮಾಡಿರುವುದರಿಂದ ಟೈಮ್ ಟ್ರಾವೆಲಿಂಗ್ ಬಗೆಗಿನ ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಟೀಸರ್ನಲ್ಲಿ ಹೃತಿಕ್ ರೋಷನ್ ಅವರು ಮಾಸ್ಕ್ ಕಿತ್ತು ಎಸೆಯುವ ದೃಶ್ಯ ಇದೆ. ಇಷ್ಟು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಕಪ್ಪು ಮಾಸ್ಕ್ ಬದಲಿಗೆ ನೀಲಿ ಬಣ್ಣದ ಮಾಸ್ಕ್ ಬಳಸಲಾಗಿರುವುದು ಕೂಡ ಕೌತುಕಕ್ಕೆ ಕಾರಣ ಆಗಿದೆ.
The past is done .
Let’s see what the future brings. #15YearsOfKrrish #Krrish4 pic.twitter.com/xbp5QzwObF— Hrithik Roshan (@iHrithik) June 23, 2021
2020ರಲ್ಲಿಯೇ ‘ಕ್ರಿಶ್ 4’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ನಿರ್ದೇಶಕ, ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದರಿಂದ ಚಿತ್ರದ ಕೆಲಸಗಳು ನಿಂತಿದ್ದವು. ಅಲ್ಲದೆ, ಲಾಕ್ಡೌನ್ ಮತ್ತು ಕೊರೊನಾ ವೈರಸ್ ಕಾರಣದಿಂದಾಗಿಯೂ ವಿಳಂಬ ಆಗಿತ್ತು. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ.
ಇದನ್ನೂ ಓದಿ:
ಹೃತಿಕ್ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್!
ಹೃತಿಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?
Published On - 12:53 pm, Fri, 25 June 21