
ಕ್ರಿಕೆಟರ್ ಶುಬ್ಮನ್ ಗಿಲ್ (Shubman Gill) ಕಳೆದ ಕೆಲ ಸಮಯದಿಂದ ಹುಡುಗಿಯರ ವಿಚಾರಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಬ್ಯಾಟ್ನಿಂದ ಶತಕ ಸಿಡಿದಷ್ಟೇ ವೇಗದಲ್ಲಿ ವದಂತಿಗಳು ಕೂಡ ಸಿಡಿಯುತ್ತಿವೆ. ಅವರ ಹೆಸರು ಸಾರಾ ತೆಂಡೂಲ್ಕರ್, ಸಾರಾ ಅಲಿ ಖಾನ್ ಜೊತೆ ತಳಕು ಹಾಕಿಕೊಳ್ಳುತ್ತಿದೆ. ಈಗ ಶುಬ್ಮನ್ ಗಿಲ್ ಅವರ ಹೆಸರು ರಶ್ಮಿಕಾ ಜೊತೆ ಸೇರಿಕೊಂಡಿತ್ತು. ‘ರಶ್ಮಿಕಾ ಮಂದಣ್ಣ (Rashmika Mandanna) ಮೇಲೆ ಕ್ರಶ್ ಇದೆ’ ಎಂದು ಅವರು ಹೇಳಿಕೊಂಡಿರುವುದಾಗಿ ವರದಿ ಆಗಿತ್ತು. ಆದರೆ, ಈಗ ಶುಬ್ಮನ್ ಉಲ್ಟಾ ಹೊಡೆದಿದ್ದಾರೆ. ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಯಾವುದು ನಿಜ ಯಾವುದು ಸುಳ್ಳು ಎಂಬ ಗೊಂದಲ ಮೂಡಿದೆ.
‘ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ’ ಎಂದು ಶುಬ್ಮನ್ ಗಿಲ್ ಅವರು ಹೇಳಿಕೊಂಡಿರುವುದಾಗಿ ಇತ್ತೀಚೆಗೆ ವರದಿ ಆಗಿತ್ತು. ಇದಾದ ಬೆನ್ನಲ್ಲೇ ಟ್ರೋಲ್ ಪೇಜ್ಗಳು ಹಬ್ಬ ಮಾಡಿದ್ದವು. ಶುಬ್ಮನ್ ಗಿಲ್ ಹಾಗೂ ರಶ್ಮಿಕಾ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡೋಕೆ ಆರಂಭಿಸಿದ್ದವು. ಸಾಲು ಸಾಲು ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವು. ಇದು ಶುಬ್ಮನ್ ಗಿಲ್ ಕಣ್ಣಿಗೂ ಬಿದ್ದಿದೆ. ಅವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ
ವೆಬ್ಸೈಟ್ ಒಂದು ವರದಿ ಮಾಡಿರುವ ಪೋಸ್ಟ್ಗೆ ಕಮೆಂಟ್ ಮಾಡಿರುವ ಶುಬ್ಮನ್ ಗಿಲ್, ‘ಅದು ಯಾವ ಮಾಧ್ಯಮ ಜೊತೆಗಿನ ಸಂದರ್ಶನ? ನನಗೆ ಆ ಬಗ್ಗೆ ಗೊತ್ತಿಲ್ಲ’ ಎಂದು ಗಿಲ್ ಹೇಳಿದ್ದಾರೆ. ಮೊದಲು ಹೇಳಿಕೆ ನೀಡಿ ಅದು ವೈರಲ್ ಆದ ಬಳಿಕ ಶುಬ್ಮನ್ ಈ ರೀತಿ ಹೇಳಿದರಾ ಎನ್ನುವ ಪ್ರಶ್ನೆಯೂ ಮೂಡಿದೆ.
ಇದನ್ನೂ ಓದಿ: 3 ಪಂದ್ಯದಲ್ಲಿ 205 ಬಾರಿಸಿದರೂ ಶುಭ್ಮನ್ ಗಿಲ್ಗೆ ಭಾರತದ ಬಿ ತಂಡದಲ್ಲೂ ಇಲ್ಲ ಭದ್ರ ಸ್ಥಾನ
ಶುಬ್ಮನ್ ಗಿಲ್ ಹಾಗೂ ಸಚಿನ್ ಮಗಳು ಸಾರಾ ತೆಂಡೂಲ್ಕರ್ ನಡುವೆ ಏನೋ ನಡೆಯುತ್ತಿದೆ ಎಂಬುದು ಕೆಲವರ ಅಭಿಪ್ರಾಯ. ಕೆಲವೇ ಕೆಲವು ಕಮೆಂಟ್ಗಳ ಮೂಲಕ ಈ ರೀತಿಯ ಊಹೆ ಸೃಷ್ಟಿ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ನಡೆಯುವಾಗ ಶುಬ್ಮನ್ ಗಿಲ್ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ನೆರೆದಿದ್ದ ಪ್ರೇಕ್ಷಕರು ‘ಸಾರಾ ಸಾರಾ’ ಎಂದು ಕೂಗಿದ್ದರು. ಇದನ್ನು ವಿರಾಟ್ ಕೊಹ್ಲಿ ಎಂಜಾಯ್ ಮಾಡಿದ್ದರು. ಈ ಮೊದಲು ನಟಿ ಸಾರಾ ಅಲಿ ಖಾನ್ ಜೊತೆ ಶುಬ್ಮನ್ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿ ಸಾಕಷ್ಟು ಅಚ್ಚರಿಗೆ ಕಾರಣ ಆಗಿತ್ತು.
ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 am, Wed, 8 March 23