ಐಫಾ 2024: ​ಪ್ರಶಸ್ತಿ ಗೆದ್ದ ತಮಿಳು, ತೆಲುಗು ಹಾಗೂ ಮಲಯಾಲಂ ಸಿನಿಮಾಗಳ ಪಟ್ಟಿ

|

Updated on: Sep 29, 2024 | 3:04 PM

ಐಫಾ 2024 ಪ್ರಶಸ್ತಿ ವಿತರಣೆ ಅಬುಧಾಬಿಯಲ್ಲಿ ನಡೆಯುತ್ತಿದೆ. ಭಾರತದ ಐದು ಪ್ರಮುಖ ಚಿತ್ರರಂಗಗಳ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಐಫಾ ಪ್ರಶಸ್ತಿ ಪಡೆದ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.

ಐಫಾ 2024: ​ಪ್ರಶಸ್ತಿ ಗೆದ್ದ ತಮಿಳು, ತೆಲುಗು ಹಾಗೂ ಮಲಯಾಲಂ ಸಿನಿಮಾಗಳ ಪಟ್ಟಿ
Follow us on

ಐಫಾ 2024 ಅವಾರ್ಡ್ಸ್​ ಅಬು ಧಾಬಿಯಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 27ಕ್ಕೆ ಐಫಾ 2024 ಆರಂಭವಾಗಿದ್ದು ಸೆಪ್ಟೆಂಬರ್ 29ಕ್ಕೆ ಕಾರ್ಯಕ್ರಮ ಮುಗಿಯಲಿದೆ. ಬಾಲಿವುಡ್, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ದೊಡ್ಡ ಸಂಖ್ಯೆಯ ಸ್ಟಾರ್ ನಟ-ನಟಿಯರು ಐಫಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಟ ಶಾರುಖ್ ಖಾನ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 2023 ರಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡದ ವಿಷಯದಲ್ಲಿ ಆಲಸ್ಯ ತೋರಿದಂತಿರುವ ಐಫಾದವರು, ಇರುವ ಎಲ್ಲ ಪ್ರಶಸ್ತಿಗಳನ್ನು ಕೇವಲ ಎರಡು ಸಿನಿಮಾಗಳಿಗೆ ಹಂಚಿಕೆ ಮಾಡಿದೆ. ಇದೀಗ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಈ ಬಾರಿ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ ನೋಡಿ…

ಪ್ರಶಸ್ತಿ ಪಡೆದ ತೆಲುಗು ಸಿನಿಮಾಗಳು

ಅತ್ಯುತ್ತಮ ಸಿನಿಮಾ: ದಸರಾ

ಅತ್ಯುತ್ತಮ ನಿರ್ದೇಶಕ: ಅನಿಲ್ ರವಿಪುಡಿ (ಭಗವಂತ ಕೇಸರಿ)

ಅತ್ಯುತ್ತಮ ನಟಿ: ಮೃಣಾಲ್ ಠಾಕೂರ್ (ಹೈ ನಾನ್ನ)

ಅತ್ಯುತ್ತಮ ನಟ: ನಾನಿ (ದಸರಾ)

ಅತ್ಯುತ್ತಮ ಪೋಷಕ ನಟಿ: ವರಲಕ್ಷ್ಮಿ ಶರತ್​ಕುಮಾರ್ (ವೀರ ಸಿಂಹ ರೆಡ್ಡಿ)

ಅತ್ಯುತ್ತಮ ಪೋಷಕ ನಟ: ಬ್ರಹ್ಮಾನಂದಂ (ರಂಗ ಮಾರ್ತಾಂಡ)

ಅತ್ಯುತ್ತಮ ವಿಲನ್: ಶೈನ್ ಟಾಮ್ ಚಾಕೊ (ದಸರಾ)

ಅತ್ಯುತ್ತಮ ಸಂಗೀತ: ಹಶೀಮ್ ಅಬ್ದುಲ್ ವಹಾಬ್ (ಹೈ ನಾನ್ನ)

ಅತ್ಯುತ್ತಮ ಸಾಹಿತ್ಯ: ಅನಂತ ಶ್ರೀರಾಮ್ (ಬೇಬಿ)

ಅತ್ಯುತ್ತಮ ಗಾಯಕ: ರಾಹುಲ್ ಸಿಪ್ಲಿಗಂಜ್ (ಮೇಮ್ ಫೇಮಸ್)

ಅತ್ಯುತ್ತಮ ಗಾಯಕಿ: ಮಂಗ್ಲಿ (ಬಲಗಂ)

ಇದನ್ನೂ ಓದಿ:ಐಫಾ ಅವಾರ್ಡ್ಸ್​ 2024: ಎರಡು ಸಿನಿಮಾಕ್ಕೆ ಎಲ್ಲ ಪ್ರಶಸ್ತಿ!

ಪ್ರಶಸ್ತಿ ಪಡೆದ ತಮಿಳು ಸಿನಿಮಾಗಳು

ಅತ್ಯುತ್ತಮ ಸಿನಿಮಾ: ಜೈಲರ್

ಅತ್ಯುತ್ತಮ ನಿರ್ದೇಶಕ: ಮಣಿರತ್ನಂ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ನಟಿ: ಐಶ್ವರ್ಯಾ ರೈ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ನಟ: ವಿಕ್ರಂ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ಪೋಷಕ ನಟಿ: ಸಹಸ್ರ ಶ್ರೀ (ಚಿತ್ತ)

ಅತ್ಯುತ್ತಮ ಪೋಷಕ ನಟ: ಜಯರಾಂ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ವಿಲನ್: ಎಸ್​ಜೆ ಸೂರ್ಯ (ಮಾರ್ಕ್ ಆಂಟೊನಿ)

ಅತ್ಯುತ್ತಮ ಸಂಗೀತ: ಎಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ಸಾಹಿತ್ಯ: ಸೂಪರ್ ಸುಬ್ಬು (ಜೈಲರ್-ಹುಕುಂ)

ಅತ್ಯುತ್ತಮ ಗಾಯಕ: ಹರಿಚರಣ್ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ಗಾಯಕಿ: ಶಕ್ತಿಶ್ರೀ ಗೋಪಾಲನ್ (ಪೊನ್ನಿಯಿನ್ ಸೆಲ್ವನ್ 2)

 

ಇದನ್ನೂ ಓದಿ:ಸಮಂತಾ ಋತ್ ಪ್ರಭುಗೆ ಪ್ರತಿಷ್ಠಿತ ಪ್ರಶಸ್ತಿ ಕೊಟ್ಟ ಐಫಾ

ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳು

ಅತ್ಯುತ್ತಮ ಸಿನಿಮಾ: 2018: ಎವರಿ ಒನ್ ಇಸ್ ಎ ಹೀರೋ

ಅತ್ಯುತ್ತಮ ನಿರ್ದೇಶಕ: ಜಿಯೋ ಬೇಬಿ (ಕಾತಲ್: ದಿ ಕೋರ್)

ಅತ್ಯುತ್ತಮ ನಟಿ: ಅನಸ್ವರ ರಾಜನ್ (ನೇರು)

ಅತ್ಯುತ್ತಮ ನಟ: ಟೊವಿನೊ ಥಾಮಸ್ (2018)

ಅತ್ಯುತ್ತಮ ಪೋಷಕ ನಟಿ: ಮಮತಾ ಬೈಜು (ಪ್ರಣಯ ವಿಲಾಸಂ)

ಅತ್ಯುತ್ತಮ ಪೋಷಕ ನಟ: ಸುಧಿ ಕೋಳಿಕೋಡ್ (ಕಾತಲ್)

ಅತ್ಯುತ್ತಮ ವಿಲನ್: ಅರ್ಜುನ್ ರಾಧಾಕೃಷ್ಣನ್ (ಕಣ್ಣೂರು ಸ್ಕ್ವಾಡ್)

ಅತ್ಯುತ್ತಮ ಸಂಗೀತ: ಸುಶಿನ್ ಶ್ಯಾಮ್ (ರೋಮಾಂಚನಂ)

ಅತ್ಯುತ್ತಮ ಸಾಹಿತ್ಯ: ಜಿಯೋ ಪೌಲ್ (2018)

ಅತ್ಯುತ್ತಮ ಗಾಯಕ: ಸುಶೀನ್ ಶ್ಯಾಮ್ (ರೋಮಾಂಚನಂ)

ಅತ್ಯುತ್ತಮ ಗಾಯಕಿ: ಎಜ್ಮಾ ನೋಬಿನ್ (2018)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ