AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫಾ ಅವಾರ್ಡ್ಸ್​ 2024: ಎರಡು ಸಿನಿಮಾಕ್ಕೆ ಎಲ್ಲ ಪ್ರಶಸ್ತಿ!

ಐಫಾ 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬು ಧಾಬಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಸಮಾರಂಭದಲ್ಲಿ ಕನ್ನಡದ ಸಿನಿಮಾಗಳಿಗೂ ಪ್ರಶಸ್ತಿ ನೀಡಲಾಗಿದೆ. ಆದರೆ ಐಫಾ, ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಲಸ್ಯ ತೋರಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಐಫಾ ಅವಾರ್ಡ್ಸ್​ 2024: ಎರಡು ಸಿನಿಮಾಕ್ಕೆ ಎಲ್ಲ ಪ್ರಶಸ್ತಿ!
ಮಂಜುನಾಥ ಸಿ.
|

Updated on: Sep 28, 2024 | 7:48 PM

Share

ಐಫಾ ಅವಾರ್ಡ್ಸ್​ 2024 ಅಬುಧಾಬಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 27ರಂದು ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್​ 29ರ ವರೆಗೆ ನಡೆಯಲಿದೆ. ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಐಫಾ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಲಸ್ಯ ತೋರಿದೆಯೇ ಎಂಬ ಅನುಮಾನ ಮೂಡಿದೆ. ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಕೈತೊಳೆದುಕೊಂಡಿದೆ ಐಫಾ. 2023 ರಲ್ಲಿ ಕನ್ನಡದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಐಫಾ ಕೇವಲ ಎರಡೇ ಸಿನಿಮಾಗಳಿಗೆ ಇರುವ ಎಲ್ಲ ಪ್ರಶಸ್ತಿಗಳನ್ನೂ ಕೊಟ್ಟು ಕೈತೊಳೆದುಕೊಂಡಿದೆ. ಇಲ್ಲಿದೆ ನೋಡಿ ಪಟ್ಟಿ…

ಅತ್ಯುತ್ತಮ ಸಿನಿಮಾ: ಕಾಟೇರ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ನಟಿ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ನಿರ್ದೇಶಕ: ತರುಣ್ ಸುಧೀರ್ (ಕಾಟೇರ)

ಅತ್ಯುತ್ತಮ ಪೋಷಕ ನಟಿ: ಶ್ರುತಿ (ಕಾಟೇರ)

ಅತ್ಯುತ್ತಮ ಪೋಷಕ ನಟ: ಗೋಪಾಲ ಕೃಷ್ಣ ದೇಶಪಾಂಡೆ (ಸಪ್ತ ಸಾಗರದಾಚೆ ಎಲ್ಲೊ)

ಇದನ್ನೂ ಓದಿ:ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ

ಅತ್ಯುತ್ತಮ ವಿಲನ್: ಜಗಪತಿ ಬಾಬು (ಕಾಟೇರ)

ಅತ್ಯುತ್ತಮ ಸಂಗೀತ: ವಿ ಹರಿಕೃಷ್ಣ (ಕಾಟೇರ)

ಅತ್ಯುತ್ತಮ ಸಾಹಿತ್ಯ: ಧನಂಜಯ ರಂಜನ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಗಾಯಕ: ಎಂಸಿ ಬಿಜ್ಜು (ಸಪ್ತ ಸಾಗರದಾಚೆ ಎಲ್ಲೊ-ನದಿಯೇ)

ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಸಪ್ತ ಸಾಗರದಾಚೆ ಎಲ್ಲೊ)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ