700 ಬ್ಯಾಕ್ಗ್ರೌಂಡ್ ಡಾನ್ಸರ್ಗಳ ಜೊತೆ ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ
ಡ್ಯಾನ್ಸ್ ಮಾಡುವಾಗ ಸಾಮನ್ಯವಾಗಿ ಬ್ಯಾಕ್ಗ್ರೌಂಡ್ನಲ್ಲಿ ಡ್ಯಾನ್ಸರ್ಗಳು ಇರುತ್ತಾರೆ. ಈ ವೇಳೆ 50-100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ಘಟನೆಗೆ ‘ಛವ್ವಾ’ ಸಿನಿಮಾ ಸಾಕ್ಷಿ ಆಗಲಿದೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛವ್ವಾ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದರೆ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಸಿಕ್ಕಿದೆ.
ಡ್ಯಾನ್ಸ್ ಮಾಡುವಾಗ ಸಾಮನ್ಯವಾಗಿ ಬ್ಯಾಕ್ಗ್ರೌಂಡ್ನಲ್ಲಿ ಡ್ಯಾನ್ಸರ್ಗಳು ಇರುತ್ತಾರೆ. ಈ ವೇಳೆ 50-100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ಘಟನೆಗೆ ‘ಛವ್ವಾ’ ಸಿನಿಮಾ ಸಾಕ್ಷಿ ಆಗಲಿದೆ. ಎಆರ್ ರೆಹಮಾನ್ ಕಂಪೋಸ್ನಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡಿನ ಶೂಟ್ಗೆ ಸಿದ್ಧತೆ ನಡೆದಿದೆ.
ಮರಾಠಿ ಜಾನಪದ ಮ್ಯೂಸಿಕ್ನಲ್ಲಿ ಈ ಹಾಡು ಮೂಡಿ ಬರುತ್ತಿದೆ. ಈ ಹಾಡಿನ ಶೂಟ್ಗೆ ಸಿದ್ಧತೆ ನಡೆದಿದೆ. ರಾಜರ ಕಾಲವನ್ನು ರೀ ಕ್ರಿಯೇಟ್ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆ ಬ್ಯಾಕ್ಡ್ಯಾನ್ಸರ್ಗಳು ಇರಲಿದ್ದಾರೆ. ಬ್ಯಾಕ್ಗ್ರೌಂಡ್ನಲ್ಲಿ ಬರೋಬ್ಬರಿ 700ಕ್ಕೂ ಅಧಿಕ ಮಂದಿ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗಿದೆ.
ವಿಜಯ್ ಗಂಗೂಲಿ ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಅವರು ಈ ಮೊದಲು ‘ಸ್ತ್ರೀ 2’ ಸಾಂಗ್ಗಳನ್ನು ಕೊರಿಯೋಗ್ರಫಿ ಮಾಡಿದ್ದರು. ಈ ಹಾಡಿಗಾಗಿ ಸುಮಾರು 1500 ಜನರು ಒಟ್ಟಿಗೆ ಸೇರಲಿದ್ದಾರೆ. ಹಿನ್ನೆಲೆಯಲ್ಲಿ 700ಕ್ಕೂ ಅಧಿಕ ಜನರು ಕಾಣಿಸಲಿದ್ದಾರೆ.
ಇದನ್ನೂ ಓದಿ: 2.74 ಲಕ್ಷ ರೂಪಾಯಿ ಬೆಲೆಯ ಬ್ಯಾಗ್ ಹಿಡಿದು ಬಂದ ರಶ್ಮಿಕಾ ಮಂದಣ್ಣ
ಈ ಸಿನಿಮಾದ ಕಥೆ 1681ರಲ್ಲಿ ಸಾಗಲಿದೆ. ಇದಕ್ಕಾಗಿ ಬೃಹತ್ ಸೆಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಅದೇ ದಿನ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಕೂಡ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.