AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆದ್ದವರಿಗೆ ಮಾರುತಿ ಬ್ರೇಜಾ ಸಿಗಲಿದೆ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಅದೇ ರೀತಿ ಕಾರ್ತಿಕ್ ಮಹೇಶ್​​ಗೆ ಕಾರು ಸಿಕ್ಕಿತ್ತು. ಎಲ್ಲಾ ಪ್ರಕ್ರಿಯೆ ಮುಗಿದು ಕಾರು ಬರಲು ಸ್ವಲ್ಪ ತಡವಾಗಿದೆ. ಈ ಕಾರು ಬಂದ ಬಳಿ ಕಾರ್ತಿಕ್ ಮಹೇಶ್​ಗೆ ತೊಂದರೆ ಹೆಚ್ಚಿದೆಯಂತೆ.

ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ
ಕಾರು ಸಿಕ್ಕ ಬಳಿಕ ಕಾರ್ತಿಕ್ ಮಹೇಶ್​ಗೆ ಗೆಳೆಯರಿಂದ ಆಗ್ತಿರೋ ಸಮಸ್ಯೆ ಒಂದೆರಡಲ್ಲ
ರಾಜೇಶ್ ದುಗ್ಗುಮನೆ
|

Updated on:Sep 28, 2024 | 6:57 AM

Share

ನಟ ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗೆಲುವು ಕಂಡು ಹೆಸರು ಮಾಡಿದರು. ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಹೆಚ್ಚಾಯಿತು. ಅಷ್ಟೇ ಅಲ್ಲ ಅವರಿಗೆ 50 ಲಕ್ಷ ಕ್ಯಾಶ್ ಪ್ರೈಜ್ ಜೊತೆ ಕಾರ್ ಕೂಡ ಗಿಫ್ಟ್ ಆಗಿ ಸಿಕ್ಕಿತ್ತು. ಈ ಕಾರು ಮನೆಗೆ ಬಂದ ಬಳಿಕ ಕಾರ್ತಿಕ್ ಮಹೇಶ್​ಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆದ್ದವರಿಗೆ ಮಾರುತಿ ಬ್ರೇಜಾ ಸಿಗಲಿದೆ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಅದೇ ರೀತಿ ಕಾರ್ತಿಕ್ ಮಹೇಶ್​​ಗೆ ಕಾರು ಸಿಕ್ಕಿತ್ತು. ಬಿಗ್ ಬಾಸ್ ಮುಗಿದ ಹಲವು ತಿಂಗಳ ಬಳಿಕ ಅವರ ಕೈಗೆ ಕಾರು ಸೇರಿದೆ. ಎಲ್ಲಾ ಪ್ರಕ್ರಿಯೆ ಮುಗಿದು ಕಾರು ಬರಲು ಸ್ವಲ್ಪ ತಡವಾಗಿದೆ. ಈ ಕಾರು ಬಂದ ಬಳಿ ಕಾರ್ತಿಕ್ ಮಹೇಶ್​ಗೆ ತೊಂದರೆ ಹೆಚ್ಚಿದೆಯಂತೆ.

ಕಾಮಿಡಿಯನ್, ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ರಘು ವೈನ್ ಸ್ಟೋರ್ ಹಾಗೂ ಯೂಟ್ಯೂಬರ್ ದೀಪಕ್ ಜೊತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಘು ಹಾಗೂ ದೀಪಕ್ ಅವರು ಕಾರ್ತಿಕ್ ಮಹೇಶ್ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಕಾರು ಬಂದ ಬಳಿಕ ಅವರು ಆಡೋ ಆಟಗಳನ್ನು ನೋಡಿ ಕಾರ್ತಿಕ್ ಬೇಸತ್ತು ಹೋಗಿದ್ದಾರೆ.

ಇದನ್ನೂ ಓದಿ: ‘ನಾನು ರೂಲ್ಸ್​​ನ ಸೆಟ್​​ ಮಾಡ್ತೀನಿ’; ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ದೂರದಿಂದ ಬರುವಾಗ ರಘು ಹಾಗೂ ದೀಪಕ್ ಕಾರಿಗೆ ಒರಗಿ ನಿಂತಿರುತ್ತಾರೆ. ಅವರು ಹತ್ತಿರ ಬರುತ್ತಿದ್ದಂತೆ ಶರ್ಟ್ ಬಿಚ್ಚಿ ಅದನ್ನು ಒರೆಸೋಕೆ ಆರಂಭಿಸುತ್ತಾರೆ. ಮತ್ತೊಂದು ದೃಶ್ಯದಲ್ಲಿ ಕಾರ್ತಿಕ್ ಮಹೇಶ್​ಗೆ ಕರೆ ಮಾಡೋ ರಘು ತುರ್ತಾಗಿ ಕಾರು ತೆಗೆದುಕೊಂಡು ಬರುವಂತೆ ಕೋರುತ್ತಾರೆ. ಕಾರು ತೆಗೆದುಕೊಂಡು ಬಂದು ನೋಡಿದರೆ ‘ಕೊತ್ತುಂಬರಿ ಸೊಪ್ಪು ತರೋದು ಇತ್ತು ಅದಕ್ಕೆ ಕರೆಸಿದೆ’ ಎನ್ನುತ್ತಾರೆ. ಈ ರೀತಿ ಹಾಸ್ಯ ರೂಪದಲ್ಲಿ ಈ ವಿಡಿಯೋನ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Sat, 28 September 24