AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ರೂಲ್ಸ್​​ನ ಸೆಟ್​​ ಮಾಡ್ತೀನಿ’; ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಕಾರ್ತಿಕ್ ಮಹೇಶ್

‘ಬಿಗ್ ಬಾಸ್ ಕನ್ನಡ ಸೀಸನ್ 10’ ಜನವರಿ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಂಡಿತ್ತು. ಕಾರ್ತಿಕ್ ಮಹೇಶ್ ಅವರು ಸದ್ಯ ‘ರಾಮರಸ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಈ ಚಿತ್ರದ ಇಂಟ್ರೋಡಕ್ಷನ್ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈಗ ರಿಯಾಲಿಟಿ ಶೋಗೆ ಅವರು ಹೋಸ್ಟ್ ಆಗಿದ್ದಾರೆ.

‘ನಾನು ರೂಲ್ಸ್​​ನ ಸೆಟ್​​ ಮಾಡ್ತೀನಿ’; ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್
ರಾಜೇಶ್ ದುಗ್ಗುಮನೆ
|

Updated on: Sep 09, 2024 | 7:30 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ನರ್ ಕಾರ್ತಿಕ್ ಮಹೇಶ್ ಅವರು ದೊಡ್ಡ ಮಟ್ಟದ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರು ‘ರಾಮರಸ’ ಹೆಸರಿನ ಸಿನಿಮಾ ಕೂಡ ಸಹಿ ಮಾಡಿದ್ದು, ಶೂಟ್ ನಡೆಯುತ್ತಿದೆ. ಈಗ ಅವರು ರಿಯಾಲಿಟಿ ಶೋ ಒಂದಕ್ಕೆ ಹೋಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿರೋ ರಿಯಾಲಿಟಿ ಶೋನ ನೇತೃತ್ವವನ್ನು ಕಾರ್ತಿಕ್ ವಹಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಅವುಗಳ ಸಾಲಿಗೆ ಈಗ ಹೊಸ ಶೋ ಸೇರ್ಪಡೆ ಆಗಿದೆ. ಅದುವೇ ‘ಸುವರ್ಣ ಸೆಲೆಬ್ರಿಟಿ ಲೀಗ್’. ಸೆಪ್ಟೆಂಬರ್ 15ರಿಂದ ರಾತ್ರಿ 7 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಮತ್ತೊಂದು ವಿಶೇಷ ಎಂದರೆ ಕಿರುತೆರೆ ಕಲಾವಿದರ ಜೊತೆಗೆ ಕೆಲವು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಬರುತ್ತಿದ್ದಾರೆ.

ಹೌದು, ವಿನಯ್ ಗೌಡ, ತನಿಷಾ ಕುಪ್ಪಂಡ, ನಮ್ರತಾ ಗೌಡ, ರಕ್ಷಕ್ ಬುಲೆಟ್, ಪ್ರಿಯಾಂಕಾ ಈ ಶೋನಲ್ಲಿ ಇರಲಿದ್ದಾರೆ. ‘ಎದುರಾಳಿಗಳ ಹುಟ್ಟಡಗಿಸೋದಕ್ಕೆ ಆನೆ ಬರ್ತಿದೆ, ಹುಶಾರು’ ಎನ್ನುತ್ತಾರೆ ವಿನಯ್ ಗೌಡ. ‘ಜಗತ್ತಿನಲ್ಲಿ ಮೂರು ತರಹದ ಜನರು ಇರುತ್ತಾರೆ. ಒಬ್ಬರು ರೂಲ್ಸ್​ನ ಬ್ರೇಕ್ ಮಾಡೋರು, ಒಬ್ಬರು ಫಾಲೋ ಮಾಡೋರು. ಮೂರನೆಯವನು ನಾನು ರೂಲ್ಸ್​ನ ಸೆಟ್ ಮಾಡುವವನು’ ಎಂದಿದ್ದಾರೆ ಕಾರ್ತಿಕ್.

ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್​ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?

ಈ ರಿಯಾಲಿಟಿ ಶೋನಲ್ಲಿ ಎರಡು ಟೀಂ ಇದೆ. ಎರಡು ಟೀಂಗಳಿಗೆ ನಾನಾ ರೀತಿಯ ಟಾಸ್ಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಸಿದ್ಧತೆ ನಡೆಯುತ್ತಿದೆ. ಹೊಸ ರಿಯಾಲಿಟಿ ಶೋಗಾಗಿ ಬಿಗ್ ಬಾಸ್ ಮನೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಕಲರ್ಸ್ ಕನ್ನಡದಲ್ಲಿ ಪ್ರೋಮೋ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್