ಹರಿದ್ವಾರದಲ್ಲಿ ಇಮ್ರಾನ್ ಹಶ್ಮಿ ಚಿತ್ರೀಕರಣ: ಸ್ಥಳೀಯರ ವಿರೋಧ

Imran Hashmi movie: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಹರಿದ್ವಾರದಲ್ಲಿ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣದ ಸ್ಥಳದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಚಿತ್ರತಂಡವು ಸ್ಥಳೀಯ ನಿವಾಸಿಗಳೊಂದಿಗೆ ಭಾರಿ ತೊಂದರೆಯನ್ನು ಎದುರಿಸಿದೆ. ಸಿನಿಮಾ ಚಿತ್ರೀಕರಣ ಸೆಟ್​​ಗೆ ಎದುರು ಜಮಾಯಿಸಿದ ಸ್ಥಳೀಯರು ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಹರಿದ್ವಾರದಲ್ಲಿ ಇಮ್ರಾನ್ ಹಶ್ಮಿ ಚಿತ್ರೀಕರಣ: ಸ್ಥಳೀಯರ ವಿರೋಧ
Emran Hashmi

Updated on: Jun 12, 2026 | 11:42 AM

ಬಾಲಿವುಡ್​​ನ (Bollywood) ಹಲವಾರು ಸಿನಿಮಾಗಳು ಪುಣ್ಯಕ್ಷೇತ್ರಗಳಲ್ಲಿ ಶೂಟಿಂಗ್ ನಡೆಸುತ್ತವೆ. ಅದರಲ್ಲಿ ಹರಿದ್ವಾರವೂ ಒಂದು. ಇದೀಗ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಹರಿದ್ವಾರದಲ್ಲಿ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣದ ಸ್ಥಳದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಚಿತ್ರತಂಡವು ಸ್ಥಳೀಯ ನಿವಾಸಿಗಳೊಂದಿಗೆ ಭಾರಿ ತೊಂದರೆಯನ್ನು ಎದುರಿಸಿದೆ. ಸಿನಿಮಾ ಚಿತ್ರೀಕರಣ ಸೆಟ್​​ಗೆ ಎದುರು ಜಮಾಯಿಸಿದ ಸ್ಥಳೀಯರು ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಹರಿದ್ವಾರದಲ್ಲಿ ಸಿನಿಮಾದ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ತಾತ್ಕಾಲಿಕ ಸೆಟ್ ಒಂದನ್ನು ನಿರ್ಮಿಸಲಾಗಿತ್ತು. ಆ ಸೆಟ್‌ನಲ್ಲಿ ‘ಕೆಫೆ ಮತ್ತು ಬಾರ್’ ಎಂದು ಬರೆದಿದ್ದ ಸೈನ್‌ಬೋರ್ಡ್ ಅನ್ನು ಅಳವಡಿಸಲಾಗಿತ್ತು. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಯಿತು. ನಗರದ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ದೃಷ್ಟಿಯಿಂದ ಆ ಬೋರ್ಡ್ ಅನ್ನು ತಕ್ಷಣವೇ ತೆಗೆದುಹಾಕಬೇಕೆಂದು ಆಗ್ರಹಿಸಿ, ನಿವಾಸಿಗಳು ಮತ್ತು ಚಿತ್ರತಂಡದ ನಡುವೆ ತೀವ್ರ ವಾಗ್ವಾದ ನಡೆಯಿತು.

ಸ್ಥಳೀಯ ವರದಿಗಳ ಪ್ರಕಾರ ಚಿತ್ರತಂಡ ನಿರ್ಮಿಸಿದ್ದ ಕಾಲ್ಪನಿಕ ಸೆಟ್‌ನಿಂದಾಗಿ ಹರಿದ್ವಾರದಲ್ಲಿ ವಿವಾದ ಉಂಟಾಯಿತು. ದೃಶ್ಯವೊಂದಕ್ಕಾಗಿ ತಂಡವು ನಕಲಿ ರೆಸ್ಟೋರೆಂಟ್ ಅನ್ನು ನಿರ್ಮಿಸಿತ್ತು. ಆದರೆ, ಆ ಸೆಟ್‌ನಲ್ಲಿ ‘ಕೆಫೆ ಮತ್ತು ಬಾರ್’ ಎಂದು ದೊಡ್ಡದಾದ ಸೈನ್‌ಬೋರ್ಡ್ ಹಾಕಲಾಗಿತ್ತು. ವಿಡಿಯೋ ವೈರಲ್ ಆದಾಗ ಈ ಬೋರ್ಡ್ ನೋಡಿದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಚಿತ್ರತಂಡದ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ಇದನ್ನೂ ಓದಿ:ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಂಡ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ನೋವಿನಲ್ಲೂ ನಕ್ಕ ನಟಿ

ಹರಿದ್ವಾರವು ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಧಾರ್ಮಿಕ ಕಾರಣಗಳಿಂದಾಗಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಥಳೀಯರೊಟ್ಟಿಗೆ ವಾಗ್ವಾದದ ವೇಳೆ ಇದೊಂದು ಕಾಲ್ಪನಿಕ ಸೆಟ್, ನಿಜವಾದ ರೆಸ್ಟೊರೆಂಟ್ ಅಲ್ಲ ಎಂದು ಹೇಳಿದರೂ ಸಹ ‘ಬಾರ್’ ಎಂಬ ಪದವಿರುವ ಬೋರ್ಡ್ ಹಾಕುವುದು ಸೂಕ್ತವಲ್ಲ ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ. ಇದು ಪವಿತ್ರ ನಗರದ ಜನರ ಧಾರ್ಮಿಕ ಭಾವನೆಗಳಿಗೆ ಅಪಾರ ನೋವುಂಟು ಮಾಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಮತ್ತು ಹಿಂದೂಪರ ಸಂಘಟನೆಯವರು ಚಿತ್ರತಂಡದೊಂದಿಗೆ ಜಗಳ ಮಾಡುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗಿವೆ. ನಟ ಇಮ್ರಾನ್ ಹಶ್ಮಿ ಎಲ್ಲೂ ಕಾಣಿಸದಿದ್ದರೂ, ಚಿತ್ರತಂಡದ ವಕ್ತಾರರು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸ್ಥಳೀಯ ವರದಿಗಳ ಪ್ರಕಾರ, ಸೈನ್‌ಬೋರ್ಡ್‌ನಿಂದ “ಬಾರ್” ಎಂಬ ಪದವನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿಕೊಂಡ ನಂತರ ವಿವಾದವು ಬಗೆಹರಿಯಿತು.

ಇಮ್ರಾನ್ ಹಶ್ಮಿ ಮುಂದಿನ ದಿನಗಳಲ್ಲಿ ನಿರೀಕ್ಷಿತ ಸೀಕ್ವೆಲ್ ‘ಅವಾರಾಪನ್ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2007ರಲ್ಲಿ ಬಿಡುಗಡೆಯಾದ ಮೂಲ ‘ಅವಾರಾಪನ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಆಗಸ್ಟ್ 14, 2026ರಂದು ಬಿಡುಗಡೆಯಾಗಲಿದೆ. ಸಿನಿಮಾನಲ್ಲಿ ನಾಯಕಿಯಾಗಿ ದಿಶಾ ಪಟಾಣಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us