Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೇಮ್ ಚೇಂಜರ್’, ‘ಪುಷ್ಪ 2’ ನಿರ್ಮಾಪಕರಿಗೆ ಐಟಿ ಶಾಕ್; 65 ತಂಡಗಳಿಂದ ದಾಳಿ

ದಿಲ್ ರಾಜು ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ‘ಗೇಮ್ ಚೇಂಜರ್’ ಚಿತ್ರದ ನಷ್ಟದ ಬೆನ್ನಲ್ಲೇ ನಿರ್ಮಾಪಕರಿಗೆ ಈ ಶಾಕ್ ಎದುರಾಗಿದೆ. ಇನ್ನು, ‘ಪುಷ್ಪ 2’ ನಿರ್ಮಾಪಕರ ಮನೆ ಮೇಲೂ ದಾಳಿ ನಡೆದಿದೆ. 65 ತಂಡಗಳಲ್ಲಿ ದಾಳಿ ನಡೆದಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಗೇಮ್ ಚೇಂಜರ್’, ‘ಪುಷ್ಪ 2’ ನಿರ್ಮಾಪಕರಿಗೆ ಐಟಿ ಶಾಕ್; 65 ತಂಡಗಳಿಂದ ದಾಳಿ
ದಿಲ್ ರಾಜು-ಪುಷ್ಪ 2
Follow us
ರಾಜೇಶ್ ದುಗ್ಗುಮನೆ
|

Updated on:Jan 21, 2025 | 10:01 AM

ನಿರ್ಮಾಪಕ ದಿಲ್ ರಾಜು ಅವರು ಸದ್ಯ ಸೋಲಿನ ಸುಳಿಯಲ್ಲಿ ಇದ್ದಾರೆ. 450 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ರಾಮ‘ಗೇಮ್ ಚೇಂಜರ್’ ಸಿನಿಮಾ ನಷ್ಟ ಅನುಭವಿಸುತ್ತಿರುವಾಗಲೇ ತೆರಿಗೆ ಇಲಾಖೆ ತಂಡದವರು ದಿಲ್ ರಾಜು ಮನೆ, ಕಚೇರಿ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಿದೆ. ಈ ದಾಳಿ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಪುಷ್ಪ 2’ ನಿರ್ಮಾಪಕರ ಮನೆಯ ಮೇಲೂ ದಾಳಿ ಆಗಿದೆ.

ಐಟಿ ಇಲಾಖೆಯವರು ಬರೋಬ್ಬರಿ 65 ತಂಡಗಳಲ್ಲಿ ಬಂದಿದ್ದು, ದಿಲ್ ರಾಜುಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ ದಿಲ್ ರಾಜು ಅವರ ಮನೆ, ಕಚೇರಿ, ಅವರ ಸಹೋದರ ಸಿರೇಶ್ ಮಗಳು ಹನ್ಸಿತಾ ರೆಡ್ಡಿ ಮನೆಗಳು ಕೂಡ ಇವೆ. ‘ಸಂಕ್ರಾಂತಿಗೆ ವಸ್ತುನ್ನಾಮ್’​ ಚಿತ್ರದ ನಿರ್ದೇಶಕ ಅನಿಲ್ ರಾವಿಪುಡಿ ಕಚೇರಿ ಮೇಲೂ ಐಟಿ ಇಲಾಖೆ ಪರಿಶೀಲನೆ ನಡೆಸಿದೆ. ಈ ದಾಳಿ ಹಿಂದಿನ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎರಡೂ ಸಂಸ್ಥೆಗಳು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಈ ಸಂದರ್ಭದಲ್ಲಿ ಎಲ್ಲಾದರೂ ಅಕ್ರಮ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ನನ್ನ ಬಗ್ಗೆ ತಪ್ಪಾಗಿ ಬರೆದರೆ ಬಾರಿಸಿಬಿಡ್ತೀನಿ: ನಿರ್ಮಾಪಕ ದಿಲ್ ರಾಜು

ಸಂಕ್ರಾಂತಿ ವೇಳೆ ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಹಾಗೂ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರಗಳು ರಿಲೀಸ್ ಆಗಿವೆ. ‘ಗೇಮ್ ಚೇಂಜರ್’ ಸೋಲನ್ನು ಉಣಿಸಿದರೆ, ‘ಸಂಕ್ರಾಂತಿಕಿ ವಸ್ತುನಾಮ್’ ಚಿತ್ರ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಮೇಲೆ ದಾಳಿ

‘ಪುಷ್ಪ 2’ ಚಿತ್ರ ನಿರ್ಮಾಣ ಸಂಸ್ಥೆ ಮೇಲೂ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ನವೀನ್​, ಸಿಇಒ ಚರ್ರಿ ಕಚೇರಿ ಹಾಗೂ ಆಪ್ತರ ಕಚೇರಿಗಳಲ್ಲೂ ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಆಗಿದೆ. ವೆಂಕಟೇಶ್ವರ ಪ್ರೊಡಕ್ಷನ್ ಸಂಸ್ಥೆಯಲ್ಲೂ ಐಟಿ ತಂಡದವರು ದಾಖಲೆ ಪರಿಶೀಲನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Tue, 21 January 25

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ