ನನ್ನ ಬಗ್ಗೆ ತಪ್ಪಾಗಿ ಬರೆದರೆ ಬಾರಿಸಿಬಿಡ್ತೀನಿ: ನಿರ್ಮಾಪಕ ದಿಲ್ ರಾಜು

Dil Raju: ನಿರ್ಮಾಪಕ ದಿಲ್ ರಾಜು ಪತ್ರಕರ್ತರೊಬ್ಬರೊಟ್ಟಿಗೆ ಜಗಳವಾಡುತ್ತಾ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನಿದು ವಿವಾದ?

ನನ್ನ ಬಗ್ಗೆ ತಪ್ಪಾಗಿ ಬರೆದರೆ ಬಾರಿಸಿಬಿಡ್ತೀನಿ: ನಿರ್ಮಾಪಕ ದಿಲ್ ರಾಜು
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Jan 10, 2024 | 6:32 AM

ದಿಲ್ ರಾಜು (Dil Raju) ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕ. ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಭಾರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿರುವ ದಿಲ್ ರಾಜು ಸಾಕಷ್ಟು ಯಶಸ್ಸನ್ನು ಸಹ ಕಂಡಿದ್ದಾರೆ. ತೆಲುಗಿನ ಪ್ರಸ್ತುತ ಟಾಪ್ ನಿರ್ಮಾಪಕರಲ್ಲಿ ದಿಲ್ ರಾಜು ಸಹ ಒಬ್ಬರು. ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ದಿಲ್ ರಾಜು ಇತ್ತೀಚೆಗೆ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರ ಜೊತೆ ಜಗಳ ಮಾಡಿದ್ದು ಮಾತ್ರವಲ್ಲದೆ ವೇದಿಕೆ ಮೇಲಿನಿಂದ ತಮ್ಮ ಬಗ್ಗೆ ಬರೆಯುವವರಿಗೆ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ಸಂಕ್ರಾಂತಿಗೆ ಬಿಡುಗಡೆ ಆಗಲಿರುವ ‘ಹನುಮಾನ್’ ಸಿನಿಮಾದ ಬಡುಗಡೆಯನ್ನು ತಡೆಯಲು ದಿಲ್ ರಾಜು ಪ್ರಯತ್ನಿಸಿದ್ದಾರೆ ಅಲ್ಲದೆ ತಮಿಳಿನ ‘ಏಲಿಯನ್’ ಸಿನಿಮಾವನ್ನು ಆಂಧ್ರ, ತೆಲಂಗಾಣದಲ್ಲಿ ದಿಲ್ ರಾಜು ವಿತರಣೆ ಮಾಡುತ್ತಿದ್ದಾರೆ ಎಂದು ಕೆಲವು ವೆಬ್ ಸೈಟ್, ಯೂಟ್ಯೂಬ್​ಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದಿಲ್ ರಾಜು, ‘ನಿಮ್ಮ ವೆಬ್​ಸೈಟ್, ಯೂಟ್ಯೂಬ್ ಚಾನೆಲ್ ಜನಪ್ರಿಯಗೊಳಿಸಿಕೊಳ್ಳಲು ನನ್ನ ಬಗ್ಗೆ ತಪ್ಪು ತಪ್ಪಾಗಿ ಬರೆದರೆ ಬಾರಿಸಿ ಬಿಡ್ತೀನಿ’ ಎಂದಿದ್ದಾರೆ.

‘ನಾನು ‘ಹನುಮಾನ್’ ಸಿನಿಮಾ ಬಿಡುಗಡೆ ತಡೆದಿಲ್ಲ, ಜನವರಿ 14ಕ್ಕೆ ಬಿಡುಗಡೆ ಮಾಡಿಕೊಳ್ಳಿ ಎಂದಷ್ಟೆ ಹೇಳಿದ್ದೀನಿ. ಅಲ್ಲದೆ ನಾನು ಯಾವುದೇ ತಮಿಳು ಸಿನಿಮಾವನ್ನು ವಿತರಣೆ ಮಾಡುತ್ತಿಲ್ಲ. ‘ಹನುಮಾನ್’ ಚಿಕ್ಕ ಸಿನಿಮಾ. ಎಲ್ಲ ಸಿನಿಮಾಗಳು ಒಟ್ಟಿಗೆ ಬಂದರೆ ಚಿತ್ರಮಂದಿರಗಳ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ಆದ್ಯತೆ ಕೊಟ್ಟು ಅವರಿಗೆ ಚಿತ್ರಮಂದಿರ ಕೊಡಿ ಎಂದು ನಾವು ಕೇಳಿದ್ದೆವು. ಈಗ ನಿಜಾಮ್ ಏರಿಯಾದಲ್ಲಿ ನಾಗಾರ್ಜು, ವೆಂಕಟೇಶ್ ಅವರ ಸಿನಿಮಾಕ್ಕೆ ಚಿತ್ರಮಂದಿರಗಳು ಸಿಕ್ಕಿಲ್ಲ. ಅವರೇನು ಹೊಸ ನಾಯಕರೇ? ಅಂಥಹಾ ಸ್ಟಾರ್​ಗಳ ಸಿನಿಮಾಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂದರೆ ಇದು ಬೇಸರದ ಸಂಗತಿ’ ಎಂದಿದ್ದಾರೆ ದಿಲ್ ರಾಜು.

ಇದನ್ನೂ ಓದಿ:‘ಆದಿಪುರುಷ್’ ಹಣೆಬರಹ ದಿಲ್ ರಾಜುಗೆ ಮೊದಲೇ ಗೊತ್ತಿತ್ತು? ನಷ್ಟದಿಂದ ತಪ್ಪಿಸಿಕೊಂಡ ನಿರ್ಮಾಪಕ

‘ಹನುಮಾನ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿರಂಜೀವಿ, ದಿಲ್ ರಾಜು ಬಗ್ಗೆ ಮಾತನಾಡಿ, ‘ದಿಲ್ ರಾಜು ಅನುಭವಿ, ಅವರಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಗೊತ್ತಿದೆ’ ಎಂದಿದ್ದರು. ಆ ಬಗ್ಗೆಯೂ ಮಾತನಾಡಿರುವ ದಿಲ್ ರಾಜು, ‘ಚಿರಂಜೀವಿ ಅವರು ಗೌರವಯುತವಾಗಿ, ಒಳ್ಳೆಯ ಅರ್ಥದಲ್ಲಿಯೇ ಹೇಳಿದ್ದರು. ಆದರೆ ಕೆಲವು ವೆಬ್​ಸೈಟ್​ಗಳು ಅದನ್ನು ತಿರುಚಿ, ನನ್ನ ವಿರುದ್ಧ ಚಿರಂಜೀವಿ ಮಾತನಾಡಿದ್ದಾರೆ ಎಂಬರ್ಥದಲ್ಲಿ ಬರೆದರು. ಇಷ್ಟು ದಿನ ಸುಮ್ಮನಿದ್ದೆ ಆದರೆ ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ’ ಎಂದಿದ್ದಾರೆ.

‘ನಾನು ಕಷ್ಟಪಟ್ಟು ಈ ಚಿತ್ರರಂಗದಲ್ಲಿ ಮೇಲೆ ಬಂದಿದ್ದೀನಿ. ಎಲ್ಲ ಸಿನಿಮಾಗಳು ಹಿಟ್ ಆಗಲಿ, ಎಲ್ಲ ನಿರ್ಮಾಪಕರಿಗೂ ಲಾಭವಾಗಲಿ ಎಂಬುದೇ ನನ್ನ ಉದ್ದೇಶ. ಆದರೆ ಕೆಲವು ಪತ್ರಕರ್ತರು ಬೇಕೆಂದೇ ಋಣಾತ್ಮಕವಾಗಿ ಬರೆಯುತ್ತಿದ್ದಾರೆ. ದಿಲ್ ರಾಜು ಎಂಬ ಹೆಸರನ್ನು ಬ್ರ್ಯಾಂಡ್ ಆಗಿ ಬೆಳೆಸಿದ್ದೇನೆ. ಆ ಬ್ರ್ಯಾಂಡ್ ಅನ್ನು ಬಳಸಿಕೊಂಡು ಬೆಳೆಯುವ ಹಂಬಲದಲ್ಲಿ ಕೆಲವರಿದ್ದಾರೆ. ಇದು ಸರಿಯಲ್ಲ. ಇನ್ನೊಮ್ಮೆ ಹೀಗಾದರೆ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ವೇದಿಕೆ ಇಳಿದ ಬಳಿಕ ಪತ್ರಕರ್ತ ಒಬ್ಬರಿಗೆ ನೇರವಾಗಿಯೂ ಎಚ್ಚರಿಕೆ ನೀಡಿದ್ದಾರೆ ದಿಲ್ ರಾಜು, ‘ನನ್ನ ಬಗ್ಗೆ ಬಾಯಿಗೆ ಬಂದಂತೆ ಬರೆದರೆ ಸುಮ್ಮನಿರುವುದಿಲ್ಲ ಎಚ್ಚರಿಕೆ’ ಎಂದು ನೇರವಾಗಿ ಜಗಳ ಮಾಡಿದ್ದಾರೆ. ದಿಲ್ ರಾಜು ಅವರನ್ನು ತಡೆಯಲು ಬಂದ ವ್ಯಕ್ತಿಯೊಟ್ಟಿಗೂ ಸಹ ದಿಲ್ ರಾಜು ಕೋಪದಿಂದ ಮಾತನಾಡಿದ್ದಾರೆ. ದಿಲ್ ರಾಜು, ಪತ್ರಕರ್ತನಿಗೆ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಕ್ರಾಂತಿ ಹಬ್ಬಕ್ಕೆ ತೆಲುಗಿನ ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗುತ್ತಿವೆ. ಮಹೇಶ್ ಬಾಬು ನಟನೆಯ ‘ಗೂಂಟೂರು ಖಾರಂ’, ವೆಂಕಟೇಶ್ ನಟನೆಯ ‘ಸೈಂಧವ’, ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ ಸಹ ಬಿಡುಗಡೆ ಆಗುತ್ತಿದೆ. ರವಿತೇಜರ ‘ಈಗಲ್’ ಸಹ ಬಿಡುಗಡೆ ಆಗುವುದಿತ್ತು, ಆದರೆ ಅದನ್ನು ದಿಲ್ ರಾಜು ಅವರೇ ಮಾತನಾಡಿ ಅವರು ರೇಸ್​ನಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಆದರೆ ದಿಲ್​ ರಾಜು ಅವರ ಮನವಿಗೆ ‘ಹನುಮಾನ್’ ತಂಡ ಒಪ್ಪಿಲ್ಲ. ಹಾಗಾಗಿ ವಿವಾದ ಸೃಷ್ಟಿಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Tue, 9 January 24

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ