
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ನೆಲೆಸಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನುಗ್ಗಿ ಹೊಡೆದಿದೆ. ಇದಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಡಲಾಗಿದೆ. ಈ ದಾಳಿಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದವರು ಈ ದಾಳಿಯ ಬಗ್ಗೆ ಮೆಚ್ಚುಗೆ ಸೂಚಿಸಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ರಿತೇಷ್ ದೇಶ್ಮುಖ್ ಸೇರಿದಂತೆ ಅನೇಕರು ಈ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜೈ ಹಿಂದ್’ ಎಂದು ಸೋಶಿಯಲ್ ಮೀಡಿಯಾ ಮೂಲಕ ಬರೆದುಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಯಿತು. ಗನ್ ಹಿಡಿದು ಬಂದ ಉಗ್ರರು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದರು. ಈ ಬೆನ್ನಲ್ಲೇ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀಕಾರದ ಎಚ್ಚರಿಕೆ ನೀಡಿದ್ದರು. ಭಾರತೀಯ ಸೇನೆ ಪ್ರತೀಕಾರಕ್ಕಾಗಿ ನೋಡುತ್ತಾ ಇತ್ತು. ಇಂದು (ಮೇ 7) ಮುಂಜಾನೆ 3 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
ಭಾರತದ ಭದ್ರತಾ ಸಚಿವಾಲಯವು ದಾಳಿಯನ್ನು ಖಚಿತಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ನಡೆದಿದೆ ಎಂದು ಭಾರತೀಯ ಸೇನೆ ಹೇಳಿಕೊಂಡಿದೆ. ಈ ಬೆನ್ನಲ್ಲೆ ಬಾಲಿವುಡ್ ಅನೇಕರು ಈ ದಾಳಿಯನ್ನು ಪ್ರಶಂಸಿಸಿದ್ದಾರೆ. ‘ಸೇನೆಗೆ ಜೈ ಹಿಂದ್’ ಎಂದು ರಿತೇಷ್ ದೇಶ್ಮುಖ್ ಅವರು ಬರೆದುಕೊಂಡಿದ್ದಾರೆ.
Jai Hind Ki Sena … भारत माता की जय !!!! #OperationSindoor pic.twitter.com/OtjxdLJskC
— Riteish Deshmukh (@Riteishd) May 6, 2025
Our prayers are with our forces. One nation, together we stand. Jai Hind, Vande Mataram. 🇮🇳🙏 pic.twitter.com/IyiOX8hqma
— Madhur Bhandarkar (@imbhandarkar) May 6, 2025
भारत माता की जय! 🇮🇳🇮🇳🇮🇳#OperationSindoor
— Anupam Kher (@AnupamPKher) May 7, 2025
#operation_sindoor #IndianArmedForces @narendramodi ji
🙏🙏🙏🙏🙏🙏🙏🙏🙏— Paresh Rawal (@SirPareshRawal) May 7, 2025
ಈ ದಾಳಿ ವೇಳೆ ಕನಿಷ್ಠ 17 ಉಗ್ರರು ಮೃತಪಟ್ಟ ಬಗ್ಗೆ ವರದಿ ಆಗಿದೆ. 60ಕ್ಕೂ ಅಧಿಕ ಉಗ್ರರು ಗಾಯಗೊಂಡಿದ್ದಾರೆ. ಈ ದಾಳಿಯಿಂದ ಇನ್ನೂ ಸಾಕಷ್ಟು ನಷ್ಟ ಉಂಟಾಗಿರುವ ಸಾಧ್ಯತೆ ಇದ್ದು, ಆ ಬಗ್ಗೆ ಶೀಘ್ರವೇ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Wed, 7 May 25