ತಮಗೆ ಸಂಬಂಧ ಇರಲಿ ಇಲ್ಲದೇ ಇರಲಿ, ಕಂಗನಾ ರಣಾವತ್ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಶುರುವಾದ ಅವರ ಕಿರುಚಾಟಗಳು ಇಂದಿಗೂ ನಿಂತಿಲ್ಲ. ಹಲವು ವಿವಾದಗಳನ್ನು ಅವರು ತಾವಾಗಿಯೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಸದ್ಯ ದೇಶದೆಲ್ಲೆಡೆ ಹರಡಿರುವ ಕೊವಿಡ್ ಮಹಾಮಾರಿಯ ಕುರಿತಾಗಿಯೂ ಅವರು ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ, ಪದೇಪದೇ ಮೋದಿ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಈಗ ಕಂಗನಾ ಮಾಡಿರುವ ಒಂದು ಟ್ವೀಟ್ ವೈರಲ್ ಆಗುತ್ತಿದೆ.
ಕೊರೊನಾದಿಂದಾಗಿ ಭಾರತ ಮಾತ್ರವಲ್ಲದೇ ಇತರೆ ದೇಶಗಳು ಕೂಡ ಕಷ್ಟ ಅನುಭವಿಸುತ್ತಿವೆ. ಜಪಾನ್ನಲ್ಲಿಯೂ ಕೊರೊನಾ ವೈರಸ್ ಕಾಟ ಕೊಡುತ್ತಿದೆ. ಹಾಗಾಗಿ ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಪಾನ್ನ ಕೆಲವು ಪ್ರಮುಖ ನಗರಗಳಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ ಎಂಬ ಸುದ್ದಿಗೆ ಈಗ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ಮೋದಿ ಹೆಸರನ್ನು ಎಳೆದು ತಂದಿದ್ದಾರೆ.
‘ನನಗೆ ಜಪಾನ್ ಪ್ರಧಾನಿಯ ಹೆಸರು ಕೂಡ ಗೊತ್ತಿಲ್ಲ. ಯಾಕೆಂದರೆ ಅವರು ತಮ್ಮ ದೇಶವನ್ನು ಕುಗ್ಗಲು ಬಿಟ್ಟಿಲ್ಲ. ಅಂದರೆ ಜಪಾನ್ ಜನರು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಅರ್ಥ. ಭಾರತೀಯರ ರೀತಿ ಮೂರ್ಖರಲ್ಲ. ಅವರ ಸರ್ಕಾರ ತುಂಬ ಚೆನ್ನಾಗಿದೆ ಎಂಬುದಾದರೆ ಜಪಾನ್ನಲ್ಲಿ ಯಾಕೆ ಕೊವಿಡ್ ಎಮರ್ಜೆನ್ಸಿ ಜಾರಿ ಮಾಡಲಾಗಿದೆ? ಅಲ್ಲಿ ಎರಡನೇ ಅಲೆ ಎಬ್ಬಿಸಿದವರು ಯಾರು? ಮೋದಿನಾ?’ ಎಂದು ಕಂಗನಾ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
I don’t even know the name of Japanese Prime Minister because he did not let downJapan… so that means Japanese chose the right person, not dimwits like Indians ..
Their government is very good then why Covid National emergency in Japan..who did this second wave there … Modi? https://t.co/YU76wZEFJJ— Kangana Ranaut (@KanganaTeam) May 3, 2021
ಕಂಗನಾ ಅವರ ಈ ಮಾತಿಗೆ ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕಂಗನಾ ಪರವಾಗಿ ಮಾತನಾಡಿದ್ದರೆ ಮತ್ತೆ ಕೆಲವರು ಅವರನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕಂಗನಾ ಮತ್ತು ಅವರ ತಂಡಕ್ಕೆ ದಿನವಿಡೀ ಮೋದಿಯ ಚಾಕರಿ ಮಾಡುವುದೇ ಕೆಲಸ ಎಂದು ಕೆಲವರು ಕಾಲೆಳೆದಿದ್ದಾರೆ. ಸದ್ಯ ಎಲ್ಲ ಕಡೆ ಆಕ್ಸಿಜನ್ಗಾಗಿ ಹಾಹಾಕಾರ ಶುರುವಾಗಿದೆ. ಈ ಸಂದರ್ಭದಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂಬುದಾಗಿಯೂ ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡದೆ ಸುಮ್ಮನಿರುವ ಕಂಗನಾಗೆ ಕ್ಲಾಸ್
ಶಾರುಖ್ ಖಾನ್ಗಿಂತ ನಾನು ಗ್ರೇಟ್ ಎಂದ ಕಂಗನಾ ರಣಾವತ್; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
Published On - 7:57 am, Tue, 4 May 21