ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಬೇಕು ಅಂತ ಹಠ ಹಿಡಿದಿದ್ದಾರಾ ವಿಜಯ್​ ದೇವರಕೊಂಡ?

|

Updated on: May 09, 2024 | 9:55 PM

ರಶ್ಮಿಕಾ ಮಂದಣ್ಣ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಹೊಸ ಹೊಸ ಅವಕಾಶಗಳು ಹರಿದು ಬರುತ್ತಿವೆ. ವಿಜಯ್​ ದೇವರಕೊಂಡ ಜೊತೆ ಅವರು ಮತ್ತೊಮ್ಮೆ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಇಂದು (ಮೇ 9) ವಿಜಯ್​ ದೇವರಕೊಂಡ ಜನ್ಮದಿನದ ಪ್ರಯುಕ್ತ ಅನೌನ್ಸ್​ ಆಗಿರುವ ಹೊಸ ಸಿನಿಮಾಗೂ ರಶ್ಮಿಕಾ ಮಂದಣ್ಣ ನಾಯಕಿ ಆಗುವ ನಿರೀಕ್ಷೆ ಇದೆ.

ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಬೇಕು ಅಂತ ಹಠ ಹಿಡಿದಿದ್ದಾರಾ ವಿಜಯ್​ ದೇವರಕೊಂಡ?
ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ
Follow us on

ಟಾಲಿವುಡ್​ನಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು ಸೂಪರ್​ ಹಿಟ್​ ಜೋಡಿ. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಅವರಿಬ್ಬರು ಮೋಡಿ ಮಾಡಿದ್ದರು. ಆ ಬಳಿಕ ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. ಅವರನ್ನು ಮತ್ತೆ ಜೋಡಿಯಾಗಿ ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ವಿಜಯ್​ ದೇವರಕೊಂಡ (Vijay Deverakonda) ಅವರ ಹೊಸ ಸಿನಿಮಾದಲ್ಲಿ (VD14) ಆ ಆಸೆ ನೆರವೇರುವ ಸಾಧ್ಯತೆ ಇದೆ.

ಇಂದು (ಮೇ 9) ವಿಜಯ್​ ದೇವರಕೊಂಡ ಅವರ ಜನ್ಮದಿನ. ಆ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಇದು ವಿಜಯ್​ ದೇವರಕೊಂಡ ನಟನೆಯ 14ನೇ ಸಿನಿಮಾ. ‘ಟ್ಯಾಕ್ಸಿವಾಲಾ’ ಖ್ಯಾತಿಯ ನಿರ್ದೇಶಕ ರಾಹುಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಇದಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ವಿಡಿ14’ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ಪುನೀತ್​-ರಶ್ಮಿಕಾ ಮಂದಣ್ಣ ನಟನೆಯ ‘ಅಂಜನಿಪುತ್ರ’ ಮೇ 10ಕ್ಕೆ ಮರು ಬಿಡುಗಡೆ

‘ವಿಡಿ 14’ ಸಿನಿಮಾಗೆ ನಾಯಕಿ ಯಾರು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದರೆ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿಜಯ್​ ದೇವರಕೊಂಡ ಶಿಫಾರಸು ಮಾಡುತ್ತಿದ್ದಾರೆ ಎಂದು ಟಾಲಿವುಡ್​ ಅಂಗಳದಲ್ಲಿ ಸುದ್ದಿ ಹಬ್ಬಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ರಶ್ಮಿಕಾಗೆ ಖುಲಾಯಿಸಿತು ಅದೃಷ್ಟ, ಬಾಲಿವುಡ್ ಖಾನ್​ಗೆ ನಾಯಕಿ

ವಿಜಯ್​ ದೇವರಕೊಂಡ ನಟಿಸಲಿರುವ ಈ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡಲಿದೆ. ಇದರಲ್ಲಿ ಐತಿಹಾಸಿಕ ಕಹಾನಿ ಇರಲಿದೆ. 1854ರ ಕಾಲಘಟ್ಟದ ಕಥೆ ಇರಲಿದೆ ಎಂಬುದಕ್ಕೆ ಹೊಸ ಪೋಸ್ಟರ್​ನಲ್ಲಿ ಸುಳಿವು ನೀಡಲಾಗಿದೆ. ವಿಜಯ್​ ದೇವರಕೊಂಡ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಆದ ‘ಲೈಗರ್​’, ‘ಖುಷಿ’, ‘ಫ್ಯಾಮಿಲಿ ಸ್ಟಾರ್​’ ಸಿನಿಮಾಗಳಿಂದ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.