ನಟಿ ಜಾಕ್ವಲಿನ್ ಫರ್ನಾಂಡಿಸ್ ಟಾಪ್​ಲೆಸ್​ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್​ ಬೋಲ್ಡ್​

ಇನ್​ಸ್ಟಾಗ್ರಾಂನಲ್ಲಿ ಜಾಕ್ವಲಿನ್ ಈ ಫೋಟೋ ಅಪ್​ಲೋಡ್ ಮಾಡಿದ್ದಾರೆ. ಅವರು ಸೋಫಾ ಮೇಲೆ ಮಲಗಿದ್ದು, ಮೇಲ್ಭಾಗದಲ್ಲಿ ಒಂದೇ ಒಂದು ಬಟ್ಟೆ ಕೂಡ ಇಲ್ಲ.

ನಟಿ ಜಾಕ್ವಲಿನ್ ಫರ್ನಾಂಡಿಸ್ ಟಾಪ್​ಲೆಸ್​ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್​ ಬೋಲ್ಡ್​
ಟಾಪ್​ಲೆಸ್ ಅವತಾರದಲ್ಲಿ ಜಾಕ್ವಲಿನ್

Updated on: Mar 14, 2021 | 5:28 PM

ಬಾಲಿವುಡ್​ ನಟಿಯರು ಬಿಕಿನಿ ಫೋಟೋ, ಟಾಪ್​ಲೆಸ್​ ಫೋಟೋಗಳನ್ನು ಆಗಾಗ ಹಂಚಿಕೊಂಡು ಸುದ್ದಿ ಆಗುತ್ತಲೇ ಇರುತ್ತಾರೆ. ನಟಿ ಕಿಯಾರಾ ಅಡ್ವಾಣಿ ಟಾಪ್​ಲೆಸ್​ ಫೋಟೋ ಹಂಚಿಕೊಂಡು ವೈರಲ್​ ಆಗುವುದರ ಜತೆಗೆ ಟ್ರೋಲ್​ ಕೂಡ ಆಗಿದ್ದರು. ಈಗ ನಟಿ ಜಾಕ್ವಲಿನ್ ಫರ್ನಾಂಡಿಸ್ ಟಾಪ್​ಲೆಸ್​ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು, ನೋಡಿದ ಅಭಿಮಾನಿಗಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ!

ಇನ್​ಸ್ಟಾಗ್ರಾಂನಲ್ಲಿ ಜಾಕ್ವಲಿನ್ ಈ ಫೋಟೋ ಅಪ್​ಲೋಡ್ ಮಾಡಿದ್ದಾರೆ. ಅವರು ಸೋಫಾ ಮೇಲೆ ಮಲಗಿದ್ದಾರೆ. ಬೆನ್ನಿನ ಭಾಗವನ್ನು ಮಾತ್ರ ತೋರಿದ್ದು, ಮೇಲ್ಭಾಗದಲ್ಲಿ ಒಂದೇ ಒಂದು ಬಟ್ಟೆ ಕೂಡ ಇಲ್ಲ. ಇನ್ನು, ಅವರ ನೋಟ ಕೂಡ ತುಂಬಾನೇ ಮಾದಕವಾಗಿದೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ಅಕ್ಷರಶಃ ಸ್ಟನ್​ ಆಗಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳಿಗೆ ಟ್ರೋಲ್​ ಮಾಡುವುದಕ್ಕೂ ಮನಸ್ಸು ಬಂದಂತೆ ಕಾಣುತ್ತಿಲ್ಲ. ಹೀಗಾಗಿ, ಫೋಟೋದ ಬಗ್ಗೆ ಮೆಚ್ಚುಗೆಯ ಮಾತುಗಳು ಮಾತ್ರ ಹರಿದಾಡಿವೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾಕ್ವಲಿನ್ ಫರ್ನಾಂಡಿಸ್ ಕೈನಲ್ಲಿ ನಾಲ್ಕು ಸಿನಿಮಾಗಳಿವೆ. ಅಟ್ಯಾಕ್​, ಬೂತ್​ ಪೊಲೀಸ್​, ಸರ್ಕಸ್​, ಬಚ್ಚನ್​ ಪಾಂಡೇ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಚ್ಚನ್​ ಪಾಂಡೆ ಸಿನಿಮಾ 2022ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್ ಹೀರೋ. ಕೃತಿ ಸನನ್​ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದ ಮೂರು ಸಿನಿಮಾಗಳು ಇದೇ ವರ್ಷ ರಿಲೀಸ್​ ಆಗಬಹುದು.

ಇದನ್ನೂ ಓದಿ: Rihanna | ಪಾಪ್​ ತಾರೆ ರಿಹಾನ್ನಾ ಕೊರಳಲ್ಲಿ ಗಣೇಶನ ಹಾರ: ನಮ್ಮ ದೇವರಿಗೆ ಅವಮಾನ ಸಲ್ಲದು ಎಂದ ನೆಟ್ಟಿಗರು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us