‘ಜೈಲರ್’ (Jailer Movie) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಚಿತ್ರ ಈಗಾಗಲೇ 500 ಕೋಟಿ ರೂಪಾಯಿ ಕಮಾಯಿ ಮಾಡಿ ಮುನ್ನುಗ್ಗುತ್ತಿದೆ. ಇನ್ನೂ ಒಂದು ತಿಂಗಳ ಕಾಲ ಸಿನಿಮಾ ಅನಾಯಾಸವಾಗಿ ಪ್ರಸಾರ ಕಾಣಲಿದೆ. ಮೂರನೇ ವಾರದಲ್ಲೂ ಸಿನಿಮಾಗೆ ಪ್ರೇಕ್ಷಕರು ಬರುತ್ತಿದ್ದಾರೆ. ರಜನಿಕಾಂತ್ (Rajinikanth) , ಶಿವಣ್ಣನ ಫ್ಯಾನ್ಸ್ ಎರಡು ಮೂರು ಬಾರಿ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈ ಚಿತ್ರದಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಸ್ಟಾರ್ಗಳು. ಆ ಬಗ್ಗೆ ಇಲ್ಲಿದೆ ಮಾಹಿತಿ.
ರಜನಿಕಾಂತ್ ಅವರ ವಯಸ್ಸು 72 ದಾಟಿದೆ. ಈ ವಯಸ್ಸಿನಲ್ಲೂ ಅವರು ಮಾಸ್ ಸಿನಿಮಾ ಮಾಡಿ ಗಮನ ಸೆಳೆಯುತ್ತಿದ್ದಾರೆ. ‘ಜೈಲರ್’ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕಾಗಿ ಅವರು 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸಿನಿಮಾ ಉದ್ದಕ್ಕೂ ಅವರೇ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಕಾಲ್ಶೀಟ್ ನೀಡಿದ್ದರು. ಹೀಗಾಗಿ ಹೆಚ್ಚಿನ ಸಂಭಾವನೆ ನೀಡಲಾಗಿದೆ. ‘ಜೈಲರ್’ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎನ್ನುವ ಖ್ಯಾತಿ ಇವರಿಗೆ ಸಲ್ಲಿಕೆ ಆಗುತ್ತದೆ.
ಮೋಹನ್ಲಾಲ್ ಅವರು ಮಲಯಾಳಂನ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಚಿತ್ರಕ್ಕಾಗಿ ಅವರು ನಾಲ್ಕು ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಹಿಂದಿ ನಟ ಜಾಕಿ ಶ್ರಾಫ್ ಕೂಡ ಇದೇ ಮೊತ್ತ ಪಡೆದಿದ್ದಾರೆ.
ಶಿವರಾಜ್ಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದವರು. ಅವರು ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ‘ಜೈಲರ್’ ಚಿತ್ರದಲ್ಲಿ ಅವರು ಮಾಡಿದ ನರಸಿಂಹನ ಪಾತ್ರ ಗಮನ ಸೆಳೆದಿದೆ. ಕ್ಲೈಮ್ಯಾಕ್ಸ್ ವೇಳೆಗೆ ಅವರ ಎಂಟ್ರಿ ನೋಡಿ ಜನರು ಶಿಳ್ಳೆ ಹೊಡೆದಿದ್ದಾರೆ. ರಜನಿಕಾಂತ್ಗಿಂತ ಶಿವಣ್ಣನ ಪಾತ್ರವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು ನಾಲ್ಕು ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.
ನಟಿ ತಮನ್ನಾ ಭಾಟಿಯಾ ಅವರು ವಿಶೇಷ ಸಾಂಗ್ನಲ್ಲಿ ನಟಿಸಲು ಕೋಟಿ ಕೋಟಿ ಹಣ ಪಡೆಯುತ್ತಾರೆ. ‘ಜೈಲರ್’ ಸಿನಿಮಾದ ‘ಕಾವಾಲಾ..’ ಹಾಡಿನಲ್ಲಿ ಡ್ಯಾನ್ಸ್ ಮಾಡುವುದರ ಜೊತೆಗೆ ಒಂದಷ್ಟು ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಅವರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಇದನ್ನೂ ಓದಿ: ಕೊನೆಗೂ ತಪ್ಪು ಒಪ್ಪಿಕೊಂಡ ‘ಜೈಲರ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್
ತಮಿಳಿನ ಸ್ಟಾರ್ ಕಾಮಿಡಿಯನ್ ಯೋಗಿ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಕಾಮಿಡಿಯನ್ನು ಇಷ್ಟಪಡದವರೇ ಇಲ್ಲ. ಅವರು ಈ ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಪಡೆದಿದ್ದಾರೆ.
‘ಬಾಹುಬಲಿ’ ಅಂಥ ಹಿಟ್ ಚಿತ್ರಗಳನ್ನು ನೀಡಿದ ರಮ್ಯಾ ಕೃಷ್ಣ ಅವರು ‘ಜೈಲರ್’ ಚಿತ್ರದಲ್ಲಿ ರಜನಿ ಪತ್ನಿ ಪಾತ್ರ ಮಾಡಿದ್ದಾರೆ. ಅವರು ತೆರೆಮೇಲೆ ಕಾಣಿಸೋದು ಕಡಿಮೆ. ಈ ಕಾರಣಕ್ಕೆ ಅವರಿಗೆ 80 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ.
ವಿನಾಯಕನ್ ಅವರು ವಿಲನ್ ಆಗಿ ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಖಡಕ್ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರಿಗೂ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದೆ.
‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಗಳಿಕೆ 500 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಕರ್ನಾಟಕದಲ್ಲೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ