11 ದಿನ ಕಳೆದರೂ 300 ಕೋಟಿ ರೂಪಾಯಿ ತಲುಪದ ‘ಜನ ನಾಯಗನ್’ ಸಿನಿಮಾ

ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. 11 ದಿನ ಕಳೆದರೂ ಚಿತ್ರದ ವಿಶ್ವಾದ್ಯಂತ ಗಳಿಕೆ 295.92 ಕೋಟಿ ರೂಪಾಯಿಗೆ ಬಂದು ನಿಂತಿದ್ದು, ₹300 ಕೋಟಿ ಕ್ಲಬ್ ಸೇರುವುದು ಅನುಮಾನವಾಗಿದೆ. ಲಿಯೋ, ಗೋಟ್ ಚಿತ್ರಗಳಿಗೆ ಹೋಲಿಸಿದರೆ ಈ ಕಲೆಕ್ಷನ್ ತೀರಾ ಕಡಿಮೆಯಾಗಿದೆ.

11 ದಿನ ಕಳೆದರೂ 300 ಕೋಟಿ ರೂಪಾಯಿ ತಲುಪದ ‘ಜನ ನಾಯಗನ್’ ಸಿನಿಮಾ
ಜನ ನಾಯಗನ್

Updated on: Aug 03, 2026 | 7:36 AM

ಮುಖ್ಯಾಂಶಗಳು

  • 'ಲಿಯೋ', 'ಗೋಟ್' ದಾಖಲೆ ಬ್ರೇಕ್ ಮಾಡಲು ವಿಜಯ್ ಕೊನೆ ಚಿತ್ರ ವಿಫಲ
  • 11 ದಿನ ಕಳೆದರೂ 300 ಕೋಟಿ ಗಡಿ ದಾಟದ 'ಜನ ನಾಯಗನ್' ಸಿನಿಮಾ
  • ಬಾಕ್ಸ್ ಆಫೀಸ್‌ನಲ್ಲಿ ಕರಗಿದ ದಳಪತಿ ಕ್ರೇಜ್; ಕೊನೆಯ ಚಿತ್ರಕ್ಕೆ ದೊಡ್ಡ ಆಘಾತ

ದಳಪತಿ ವಿಜಯ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸುವುದು ಹೊಸದೇನಲ್ಲ. ಈ ಹಿಂದೆ ಬಿಡುಗಡೆಯಾಗಿದ್ದ ಅವರ ‘ಲಿಯೋ’ ಸಿನಿಮಾ ಬರೋಬ್ಬರಿ 623 ಕೋಟಿ ರೂಪಾಯಿ ಹಾಗೂ ‘ಗೋಟ್’ ಚಿತ್ರ 455 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದ್ದವು. ವಿಶೇಷವೆಂದರೆ, ವಿಮರ್ಶಕರಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆದ ಹೊರತಾಗಿಯೂ ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ್ದವು. ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ಗೆ (Jana Nayagan) ಮಾತ್ರ ಈಗ ದೊಡ್ಡ ಹಿನ್ನಡೆ ಎದುರಾಗಿದೆ. ಈ ಸಿನಿಮಾ ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದಲ್ಲಿ ಮನ್ನಣೆ ಗಳಿಸದೇ ಗಲ್ಲಾಪೆಟ್ಟಿಗೆಯಲ್ಲಿ ಕಷ್ಟಪಡುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ವಿಜಯ್ ಸಿನಿಮಾ ರಿಲೀಸ್ ಆಗಿ 11 ದಿನಗಳು ಕಳೆದಿವೆ. ಭಾನುವಾರ ಈ ಸಿನಿಮಾ ದೇಶಾದ್ಯಂತ ಒಟ್ಟು 4,321 ಶೋಗಳಿಂದ ಕೇವಲ 10.70 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಇದುವರೆಗಿನ ಒಟ್ಟು ಗಳಿಕೆ 204.92 ಕೋಟಿ ರೂಪಾಯಿಗೆ ಬಂದು ನಿಂತಿದ್ದು, ಒಟ್ಟು ನೆಟ್ ಕಲೆಕ್ಷನ್ 175.60 ಕೋಟಿ ರೂಪಾಯಿ ತಲುಪಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಹವಾ ತಣ್ಣಗಾಗಿದ್ದು, 11ನೇ ದಿನ ಕೇವಲ 3.00 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಇದರಿಂದಾಗಿ ಚಿತ್ರದ ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ 91.00 ಕೋಟಿ ರೂಪಾಯಿಗೆ ಮುಟ್ಟಿದೆ. ಭಾರತ ಮತ್ತು ವಿದೇಶಿ ಗಳಿಕೆಯನ್ನು ಒಟ್ಟಾಗಿ ಸೇರಿಸಿದರೂ ‘ಜನ ನಾಯಗನ್’ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ ಕೇವಲ 295.92 ಕೋಟಿ ರೂಪಾಯಿ ತಲುಪಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’ ಪ್ರದರ್ಶನ

ಸಾಮಾನ್ಯವಾಗಿ ವಿಜಯ್ ಸಿನಿಮಾಗಳು ಆರಂಭಿಕ ದಿನಗಳಲ್ಲೇ 300 ಕೋಟಿ ಕ್ಲಬ್ ಸೇರುತ್ತಿದ್ದವು. ಆದರೆ ಅವರ ಕೊನೆಯ ಸಿನಿಮಾವೇ 11 ದಿನ ಕಳೆದರೂ 300 ಕೋಟಿ ರೂಪಾಯಿ ಗಡಿಯನ್ನು ಮುಟ್ಟಲು ತಡಕಾಡುತ್ತಿರುವುದು ಮತ್ತು ಆ ಮೈಲಿಗಲ್ಲು ತಲುಪೋದು ಕೂಡ ಅನುಮಾನವಾಗಿರುವುದು ವಿಜಯ್ ಕೆರಿಯರ್‌ನಲ್ಲೇ ಅತಿ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಿನಿಮಾದ ಲೀಕ್ ಹಾಗೂ ಕಳಪೆ ವಿಮರ್ಶೆ ಸಿನಿಮಾದ ಗಳಿಕೆ ತಗ್ಗಲು ಪ್ರಮುಖ ಕಾರಣ.

ಪ್ರಶ್ನೆ: ದಳಪತಿ ವಿಜಯ್ ಕೊನೆಯ ಚಿತ್ರ ಯಾವುದು?
ಉತ್ತರ: 
ಜನ ನಾಯಗನ್

ಪ್ರಶ್ನೆ: ಜನ ನಾಯಗನ್ 11 ದಿನಗಳ ಗಳಿಕೆ ಎಷ್ಟು?
ಉತ್ತರ: 
295 ಕೋಟಿ ರೂಪಾಯಿ

ಪ್ರಶ್ನೆ: ವಿಜಯ್ ಮತ್ತೆ ಸಿನಿಮಾ ಮಾಡುವುದಿಲ್ಲವೇ?
ಉತ್ತರ: 
ಇಲ್ಲ, ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us