ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ ಮತ್ತೊಬ್ಬ ಜೂ ಎನ್​ಟಿಆರ್​

Nandamuri Family: ಮತ್ತೊಬ್ಬ ಜೂ ಎನ್​ಟಿಆರ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹೊಸದಾಗಿ ಬರುತ್ತಿರುವ ಜೂ ಎನ್​ಟಿಆರ್, ಸ್ಟಾರ್ ನಟ ಜೂ ಎನ್​ಟಿಆರ್ ಅವರ ಬಲು ಹತ್ತಿರದ ಸಂಬಂಧಿ. ಸ್ಟಾರ್ ನಟ ಜೂ ಎನ್​ಟಿಆರ್ ಅವರ ಅಣ್ಣನ ಮಗ ನಂದಮೂರಿ ತಾರಕ ರಾಮಾ ರಾವ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದ ಚಿಕ್ಕಪ್ಪನಿಗೆ ಸ್ಪರ್ಧೆ ಕೊಡುವ ಭರವಸೆಯಲ್ಲಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ ಮತ್ತೊಬ್ಬ ಜೂ ಎನ್​ಟಿಆರ್​
Jr Ntr

Updated on: May 13, 2025 | 11:12 AM

ಜೂ ಎನ್​ಟಿಆರ್ (Jr NTR) ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ, ಪವನ್ ಕಲ್ಯಾಣ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಜೂ ಎನ್​ಟಿಆರ್. ‘ಆರ್​ಆರ್​ಆರ್​’ (RRR) ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ ಎನ್​ಟಿಆರ್ ಈಗ ಪರಭಾಷೆಯ ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ. ಆದರೆ ಇದೀಗ ತೆಲುಗು ಚಿತ್ರರಂಗಕ್ಕೆ ಮತ್ತೊಬ್ಬ ಜೂ ಎನ್​ಟಿಆರ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ಅದೂ ಈಗ ಬಂದಿರುವ ಹೊಸ ಜೂ ಎನ್​ಟಿಆರ್, ಸ್ಟಾರ್ ಜೂ ಎನ್​ಟಿಆರ್ ಅವರ ಹತ್ತಿರದ ಸಂಬಂಧಿಯೇ ಆಗಿದ್ದಾರೆ.

ಸ್ಟಾರ್ ಜೂ ಎನ್​ಟಿಆರ್ ಅವರ ಅಣ್ಣ ದಿವಂಗತ ನಂದಮೂರಿ ಜಾನಕಿರಾಮ್ ಅವರ ಪುತ್ರ ನಂದಮೂರಿ ತಾರಕ ರಾಮಾ ರಾವ್ ಅವರು ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಂದಮೂರಿ ಕುಟುಂಬದ ನಾಲ್ಕನೇ ತಲೆಮಾರಿನ ನಟ ಇವರಾಗಲಿದ್ದಾರೆ. ಅತ್ತ ನಂದಮೂರಿ ಬಾಲಕೃಷ್ಣ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿರುವ ಹೊತ್ತಿನಲ್ಲಿಯೇ ಇತ್ತ ಬಾಲಕೃಷ್ಣ ಅವರ ಅಣ್ಣ ಹರಿಕೃಷ್ಣ ಅವರ ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ನಂದಮೂರಿ ತಾರಕ ರಾಮಾ ರಾವ್ ಅವರ ಸಿನಿಮಾದ ಲಾಂಚ್ ಇತ್ತೀಚೆಗಷ್ಟೆ ನಡೆದಿದ್ದು, ನಂದಮೂರಿ ಕುಟುಂಬದ ಹಲವರು ಒಟ್ಟಿಗೆ ಸೇರಿ ಶುಭ ಹಾರೈಸಿದ್ದಾರೆ. ನಂದಮೂರಿ ತಾರಕ ರಾಮಾ ರಾವ್ ಅವರ ಮೊದಲ ಸಿನಿಮಾಕ್ಕೆ ಅನುಭವಿಗಳ ತಂಡವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ‘ಸೀತಾರಾಮರಾಜು’, ‘ಲಾಹಿರಿ ಲಾಹಿರಿ ಲಾಹಿರಿ ಲೊ’, ಮಹೇಶ್ ಬಾಬು ನಟನೆಯ ‘ಯುವರಾಜು’, ರಾಮ್ ನಟನೆಯ ‘ದೇವದಾಸು’, ‘ಒಕ್ಕ ಮಗಾಡು’, ‘ರೇ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವೈವಿಎಸ್ ಚೌಧರಿ ಅವರು ನಂದಮೂರಿ ತಾರಕ ರಾಮಾ ರಾವ್ ಅವರ ಮೊದಲ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ?

ನಂದಮೂರಿ ತಾರಕ ರಾಮಾ ರಾವ್ ಅವರ ಸಿನಿಮಾ ಎಂಟ್ರಿಗೆ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸಹ ಶುಭ ಹಾರೈಸಿದ್ದಾರೆ. ಲೇಟ್ ನಂದಮೂರಿ ಜಾನಕಿರಾಮ್ ಅವರ ಪುತ್ರ ನಂದಮೂರಿ ತಾರಕ ರಾಮಾ ರಾವ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದು ಅವರಿಗೆ ಶುಭವಾಗಲಿ ಎಂದಿದ್ದಾರೆ. ನಂದಮೂರಿ ಹರಿಕೃಷ್ಣ ಅವರ ಪುತ್ರ ನಂದಮೂರಿ ಜಾನಕಿರಾವ್ ಅವರು 2014ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಹರಿಕೃಷ್ಣ ಅವರಿಗೆ ಮೂವರು ಮಕ್ಕಳು ಮೊದಲ ಹೆಂಡತಿಯಿಂದ ಜಾನಕಿರಾಮ್ ಮತ್ತು ಕಲ್ಯಾಣ್ ರಾಮ್. ಎರಡನೇ ಪತ್ನಿಯಿಂದ ಜೂ ಎನ್​ಟಿಆರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ