ನಟಿ ನಯನತಾರಾ ಈಗ ನಿರ್ದೇಶಕಿ? ಅಭಿನಯಕ್ಕೆ ವಿದಾಯ ಹೇಳುವ ಸೂಚನೆ ಕೊಟ್ರಾ ಲೇಡಿ ಸೂಪರ್​ ಸ್ಟಾರ್​?

ಈ ಫೋಟೋ ನೋಡಿದ ನೆಟ್ಟಿಗರಿಗೆ ಅನುಮಾನ ಮೂಡಿದೆ. ಮಕ್ಕಳು ಮತ್ತು ಸಂಸಾರದ ಕಡೆಗೆ ಗಮನ ಹರಿಸುತ್ತಿರುವ ನಯನತಾರಾ ಅವರು ಇನ್ಮುಂದೆ ನಟನೆಗೆ ಹೆಚ್ಚು ಸಮಯ ನೀಡುವುದಿಲ್ಲ. ಅದರ ಬದಲು ನಿರ್ದೇಶನ ಮಾಡುತ್ತಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬಗ್ಗೆ ನಯನತಾರಾ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ನಟಿ ನಯನತಾರಾ ಈಗ ನಿರ್ದೇಶಕಿ? ಅಭಿನಯಕ್ಕೆ ವಿದಾಯ ಹೇಳುವ ಸೂಚನೆ ಕೊಟ್ರಾ ಲೇಡಿ ಸೂಪರ್​ ಸ್ಟಾರ್​?
ನಯನತಾರಾ

Updated on: Nov 27, 2023 | 3:40 PM

ಹಲವು ವರ್ಷಗಳಿಂದ ನಟಿ ನಯನತಾರಾ (Nayanthara) ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರನ್ನು ವಿವಿಧ ಪಾತ್ರಗಳಲ್ಲಿ ನೋಡುವ ಮೂಲಕ ಅಭಿಮಾನಿಗಳು ಎಂಜಾಯ್​ ಮಾಡಿದ್ದಾರೆ. ಈ ವರ್ಷ ‘ಜವಾನ್​’ (Jawan) ಸಿನಿಮಾದ ಮೂಲಕ ನಯನತಾರಾ ಅವರು ಬಾಲಿವುಡ್​ಗೆ ಕಾಲಿಟ್ಟರು. ಅಲ್ಲಿಯೂ ಅವರಿಗೆ ಬ್ಲಾಕ್​ ಬಸ್ಟರ್​ ಹಿಟ್​ ಸಿಕ್ಕಿತು. ನಟಿಯಾಗಿ ಇಷ್ಟೆಲ್ಲ ಸಕ್ಸಸ್​ ಕಂಡಿರುವ ನಯನತಾರಾ ಅವರಿಗೆ ನಟನೆ ಬಗ್ಗೆ ಬೇಸರ ಮೂಡಿದೆಯಾ? ಅಭಿನಯಕ್ಕೆ ವಿದಾಯ ಹೇಳಿ ಅವರು ನಿರ್ದೇಶನ (Direction) ಮಾಡುವ ತಯಾರಿಯಲ್ಲಿದ್ದಾರಾ? ಈ ಎಲ್ಲ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ಹೊಸ ಫೋಟೋ!

ಸೋಶಿಯಲ್ ಮೀಡಿಯಾದಲ್ಲಿ ನಯನತಾರಾ ಅವರು ಅಷ್ಟೇನೂ ಆ್ಯಕ್ಟೀವ್​ ಆಗಿಲ್ಲ. ಕೆಲವೇ ತಿಂಗಳ ಹಿಂದೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಖಾತೆ ತೆರೆದರು. ಅವರು ಈಗ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕ್ಯಾಮೆರಾ ಹಿಂದೆ ನಿಂತು ನಿರ್ದೇಶನ ಮಾಡುತ್ತಿರುವ ದೃಶ್ಯ ಇದೆ. ಈ ಫೋಟೋದ ಜೊತೆ ಅವರು ಹಂಚಿಕೊಂಡಿರುವ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿದೆ. ‘ಹೊಸ ಆರಂಭದ ಮ್ಯಾಜಿಕ್​ ಬಗ್ಗೆ ನಂಬಿಕೆ ಇರಲಿ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರಿಗೆ ಅನುಮಾನ ಮೂಡಿದೆ. ಮಕ್ಕಳು ಮತ್ತು ಸಂಸಾರದ ಕಡೆಗೆ ಗಮನ ಹರಿಸುತ್ತಿರುವ ನಯನತಾರಾ ಅವರು ಇನ್ಮುಂದೆ ನಟನೆಗೆ ಹೆಚ್ಚು ಸಮಯ ನೀಡುವುದಿಲ್ಲ. ಅದರ ಬದಲಿ ನಿರ್ದೇಶನ ಮಾಡುತ್ತಾರೆ. ಆ ಕಾರಣದಿಂದಲೇ ಅವರು ಈ ರೀತಿ ಕ್ಯಾಪ್ಷನ್​ ನೀಡಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬಗ್ಗೆ ನಯನತಾರಾ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ.

ಇದನ್ನೂ ಓದಿ: Nayanthara: ‘ಅನ್ನಪೂರ್ಣಿ’ ಟೀಸರ್​ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ

ನಟಿಯಾಗಿ ನಯನತಾರಾ ಅವರಿಗೆ ಸಖತ್​ ಬೇಡಿಕೆ ಇದೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಲೇಡಿ ಸೂಪರ್​ ಸ್ಟಾರ್​’ ಎಂದು ಕರೆಯುತ್ತಾರೆ. ಅನೇಕ ಸ್ಟಾರ್​ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಇಷ್ಟ ವರ್ಷಗಳ ಕಾಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಅವರು ಈಗ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ನಟಿಯಾಗಿ ಇಷ್ಟೆಲ್ಲ ಡಿಮ್ಯಾಂಡ್ ಇರುವಾಗ ಅವರು ಅಭಿನಯಕ್ಕೆ ಗುಡ್​ಬೈ ಹೇಳಲು ಸಾಧ್ಯವೇ ಇಲ್ಲ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.