Nayanthara: ‘ಅನ್ನಪೂರ್ಣಿ’ ಟೀಸರ್ ಬಿಡುಗಡೆ; ಇದು ನಯನತಾರಾ ನಟನೆಯ 75ನೇ ಸಿನಿಮಾ
Annapoorani Teaser: ನಯನತಾರಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಅನ್ನಪೂರ್ಣಿ’ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ. ಟೀಸರ್ ನೋಡಿ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ನಯನತಾರಾ ಗೆಟಪ್ ಗಮನ ಸೆಳೆಯುತ್ತಿದೆ. ಇದು ಅವರ 75ನೇ ಸಿನಿಮಾ ಆದ್ದರಿಂದ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಚಿತ್ರರಂಗದಲ್ಲಿ ನಟಿ ನಯನತಾರಾ (Nayanthara) ಅವರಿಗೆ ಇರುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ವರ್ಷ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ಶಾರುಖ್ ಖಾನ್ ಜೊತೆ ನಯನತಾರಾ ನಟಿಸಿದ ‘ಜವಾನ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಸಿನಿಮಾದಲ್ಲಿ ಅವರು ಲೇಡಿ ಕಾಪ್ ಪಾತ್ರ ಮಾಡಿದ್ದರು. ಆ್ಯಕ್ಷನ್ ದೃಶ್ಯಗಳನ್ನೂ ಅಭಿನಯಿಸಿದ್ದರು. ಆ ಪಾತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಹಾಗಂತ ಅದೇ ರೀತಿಯ ಪಾತ್ರಕ್ಕೆ ನಯನತಾರಾ ಅವರು ಗಂಟು ಬಿದ್ದಿಲ್ಲ. ಹೊಸ ಸಿನಿಮಾದಲ್ಲಿ ಅವರು ಸಂಪೂರ್ಣ ಬೇರೆಯದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಝಲಕ್ ಹೇಗಿರಲಿದೆ ಎಂಬುದು ಈಗ ಗೊತ್ತಾಗಿದೆ. ಹೌದು, ನಯನತಾರಾ ನಟನೆಯ 75ನೇ ಸಿನಿಮಾದ (Nayanthara 75th Movie) ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ‘ಅನ್ನಪೂರ್ಣಿ’ (Annapoorani) ಎಂದು ಹೆಸರು ಇಡಲಾಗಿದೆ.
‘ಅನ್ನಪೂರ್ಣಿ’ ಸಿನಿಮಾದಲ್ಲಿ ನಯನತಾರಾ ಅವರು ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮನೆ ಹೇಗಿರುತ್ತದೆ ಎಂಬುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಇದು ಅವರ 75ನೇ ಸಿನಿಮಾ ಆದ್ದರಿಂದ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆಯುತ್ತಿದೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್ ಆಗಿದೆ. ಟೀಸರ್ನಲ್ಲಿ ಹೆಚ್ಚೇನೂ ಮಾಹಿತಿ ರಿವೀಲ್ ಆಗಿಲ್ಲವಾದರೂ ಕಥೆಯ ಬಗ್ಗೆ ಕೌತುಕ ಮೂಡಿರುವುದಂತೂ ನಿಜ.
Presenting Lady Superstar in and as #Annapoorani ❤️ – The Goddess of Food is on her way to tickle your taste buds!#Nayanthara #N75 @Actor_Jai @Nilesh_Krishnaa @zeestudiossouth @tridentartsoffl @NaadSstudios #Ravindran @Naadsstudios @SETHIJATIN @kejriwalakshay @sanjayragh… pic.twitter.com/fvoK8mIVw6
— Zee Studios South (@zeestudiossouth) October 24, 2023
ಮದುವೆ, ಮಕ್ಕಳು ಆದ ಬಳಿಕವೂ ನಯನತಾರಾ ಅವರು ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅನೇಕ ನಟಿಯರಿಗೆ ಅವರು ಮಾದರಿ ಆಗಿದ್ದಾರೆ. 75 ಸಿನಿಮಾಗಳಲ್ಲಿ ನಟಿಸುವುದು ಎಂದರೆ ಸಣ್ಣ ಮಾತಲ್ಲ. ನಾಯಕಿ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಅನ್ನಪೂರ್ಣಿ’ ಸಿನಿಮಾ ಕೂಡ ನಾಯಕಿ ಪ್ರಧಾನ ಕಥೆಯನ್ನು ಹೊಂದಿರಲಿದೆ ಎಂಬುದು ಗೊತ್ತಾಗಿದೆ. ಈ ಸಿನಿಮಾದಲ್ಲಿ ನಯನತಾರಾ ಅವರ ಜೊತೆ ಅನೇಕ ಫೇಮಸ್ ಕಲಾವಿದರು ನಟಿಸಲಿದ್ದಾರೆ.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ
ನಯನತಾರಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಅನ್ನಪೂರ್ಣಿ’ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್, ಸುರೇಶ್ ಚಕ್ರವರ್ತಿ, ಕೆ.ಎಸ್. ರವಿಕುಮಾರ್, ರೇಣುಕಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ನೀಲೇಶ್ ಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಥಮನ್ ಎಸ್. ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯನ್ ಸೂರ್ಯನ್ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಟೀಸರ್ ನೋಡಿ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.