ಕೆಟ್ಟ ಅರ್ಥ ಬರುವಂತೆ ಕುಣಿಯಲಾಗಿದೆ: ‘ಕಾವಾಲಾ’ ಹಾಡಿನ ಬಗ್ಗೆ ನಟನ ಆಕ್ಷೇಪ
Kalava Song: ತಮನ್ನಾ ಭಾಟಿಯಾ ಕುಣಿದಿರುವ 'ಕಾವಾಲ' ಹಾಡಿನ ಬಗ್ಗೆ ನಟನೊಬ್ಬ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾನೆ, ಅದೊಂದು ಅತ್ಯಂತ ಅಶ್ಲೀಲ ಹಾಡು ಎಂದಿದ್ದಾನೆ ನಟ.

ರಜನೀಕಾಂತ್ (Rajinikanth) ನಟಿಸಿರುವ ‘ಜೈಲರ್’ ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ. ಆ ಸಿನಿಮಾದ ಹಿನ್ನೆಲೆ ಸಂಗೀತ ಬಹಳ ಜನಪ್ರಿಯವಾಗಿತ್ತು, ಅದರ ಜೊತೆಗೆ ಸಿನಿಮಾದ ಐಟಂ ಹಾಡು ‘ಕಾವಾಲ’ ಅಂತೂ ಸಖತ್ ವೈರಲ್ ಆಗಿತ್ತು. ಇನ್ಸ್ಟಾ ರೀಲ್ಗಳಲ್ಲಂತೂ ‘ಕಾವಾಲ’ ಹಾಡೇ ತುಂಬಿಕೊಂಡಿತ್ತು. ತಮನ್ನಾ ಸಹ ಶಕೀರ ಮಾದರಿಯಲ್ಲಿ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದರು. ಅದರಲ್ಲಿಯೂ ಆ ಹಾಡಿನ ಹುಕ್ ಸ್ಟೆಪ್ ಸಖತ್ ಟ್ರೆಂಡ್ ಆಗಿತ್ತು. ಆದರೆ ಈಗ ತಮಿಳು ನಟನೊಬ್ಬ ಆ ಹಾಡನ್ನು ಅದರಲ್ಲಿಯೂ ಆ ಹಾಡಿನಲ್ಲಿ ತಮನ್ನಾ ಕುಣಿದಿರುವ ರೀತಿಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆಗಿರುವ ‘ಲಿಯೋ’ ಸೇರಿದಂತೆ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟ ಮನ್ಸೂಲಿ ಅಲಿ ಖಾನ್, ‘ಸರಕು’ ಹೆಸರಿನ ಸಿನಿಮಾ ಮಾಡಿದ್ದು, ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ನವರು ಹಲವು ಕಟ್ಗಳನ್ನು ಸೂಚಿಸಿದ್ದಾರೆ. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮನ್ಸೂರ್ ಅಲಿ ಖಾನ್, ‘ಕಾವಾಲ’ ಹಾಡಿನ ಉಲ್ಲೇಖ ಮಾಡಿದ್ದಾರೆ.
‘ಕಾವಾಲ’ ಹಾಡು ಬಹಳ ಕೆಟ್ಟದಾಗಿದೆ. ಆ ಹಾಡಿನಲ್ಲಿ ತಮನ್ನಾ ಭಾಟಿಯ ಚಿಕ್ಕ ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಕೈಯನ್ನು ಕೆಟ್ಟದಾಗಿ ಸೊಂಟದ ಕೆಳಗೆ ಕೊಂಡೊಯ್ದು ‘ಕಾವಾಲ’ ‘ಕಾವಾಲ’ ಎಂದು ಕೇಳುತ್ತಿದ್ದಾಳೆ. ಅಸಲಿಗೆ ಆ ಹಾಡಿನಲ್ಲಿ ತಮನ್ನಾ ಏನು ಬೇಕೆಂದು ಕೇಳುತ್ತಿದ್ದಾಳೆ, ಯಾವುದರ ಕಡೆಗೆ ಇಶಾರೆ ಮಾಡುತ್ತಿದ್ದಾಳೆ. ಆ ಹಾಡನ್ನು ಸೆನ್ಸಾರ್ನವರು ಏಕೆ ತೆಗೆಯಲಿಲ್ಲ. ಆ ಹಾಡಿನ ದೃಶ್ಯಗಳು ಅತ್ಯಂತ ಕೀಳು ಅಭಿರುಚಿಯಿಂದ ಕೂಡಿವೆ ಎಂದಿದ್ದಾರೆ ಮನ್ಸೂರ್ ಅಲಿ ಖಾನ್.
ಇದನ್ನೂ ಓದಿ:ತಮನ್ನಾ ಭಾಟಿಯಾ ಆಸ್ತಿ ಮೌಲ್ಯ ಎಷ್ಟು? ಹೊಂದಿರುವ ಐಶಾರಾಮಿ ಕಾರುಗಳು ಯಾವುವು?
‘ಜೈಲರ್’ ಸಿನಿಮಾದ ಕಾವಾಲ ಹಾಡು ಸಖತ್ ವೈರಲ್ ಆಗಿತ್ತು. ಅದರಲ್ಲಿಯೂ ಹಾಡಿನಲ್ಲಿನ ಹುಕ್ ಸ್ಟೆಪ್ ಅನ್ನು ಸೆಲೆಬ್ರಿಟಿಗಳು ಸೇರಿದಂತೆ ನೆಟ್ಟಿಗರು ರೀಕ್ರಿಯೇಟ್ ಮಾಡಿ ರೀಲ್ಸ್ಗಳನ್ನು ಮಾಡಿದ್ದರು. ಸ್ವತಃ ತಮನ್ನಾ ಸಹ ಕೆಲವು ಕಾರ್ಯಕ್ರಮಗಳಲ್ಲಿ ಆ ಹಾಡಿಗೆ ಡ್ಯಾನ್ಸ್ ಮಾಡಿ ರಂಜಿಸಿದ್ದರು. ಅತ್ಯಂತ ಜನಪ್ರಿಯತೆ ಪಡೆದಿರುವ ಹಾಡಿನ ಬಗ್ಗೆ ಅದರ ಡ್ಯಾನ್ಸ್ನ ಬಗ್ಗೆ ಮನ್ಸೂರ್ ಅಲಿ ಖಾನ್ ಕೀಳಾಗಿ ಮಾತನಾಡಿರುವುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮನ್ಸೂರ್ ಅಲಿ ಖಾನ್, ಹಲವು ವರ್ಷಗಳಿಂದಲೂ ಪೋಷಕ ನಟನಾಗಿ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಮನ್ಸೂರ್ ಅಲಿ ಖಾನ್ ನಟಿಸಿದ್ದಾರೆ. ಇದೀಗ ಅವರು ಮಾಡಿರುವ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿರುವ ಕಾರಣ ಈಗ ಅವರು ‘ಕಾವಾಲ’ ಹಾಡಿನ ಬಗ್ಗೆ ಆಕ್ಷೇಪಣೆ ಎತ್ತಿದ್ದು, ‘ಅಂಥಹಾ ಕೀಳು ಅರ್ಥ, ಸಂಜ್ಞೆಗಳು ಇರುವ ಹಾಡಿಗೆ ಸೆನ್ಸಾರ್ ಸದಸ್ಯರು ಏನೂ ಮಾಡಿಲ್ಲ, ನಮ್ಮ ಸಿನಿಮಾಕ್ಕೆ ಸಮಸ್ಯೆ ಮಾಡುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ