ಸಲ್ಮಾನ್ ಖಾನ್ ಅವರಿಂದ ಕೆನ್ನೆಗೆ ಏಟು ತಿಂದ ದುರಾದೃಷ್ಟವಂತರು ಇವರು..

ಸಲ್ಮಾನ್ ಖಾನ್ ಅವರಿಗೆ ತಾಳ್ಮೆ ಕಡಿಮೆ. ಅನೇಕ ಸಂದರ್ಭದಲ್ಲಿ ಅವರು ಟೆಂಪರ್ ಕಳೆದುಕೊಂಡಿದ್ದಿದೆ. ಅಭಿಮಾನಿಗಳು ಸೆಲ್ಫಿ ಕೇಳಲು ಬಂದಾಗ ಅವರನ್ನು ತಳ್ಳಿದ ಉದಾಹರಣೆ ಬೇಕಷ್ಟು ಸಿಗುತ್ತದೆ.

ಸಲ್ಮಾನ್ ಖಾನ್ ಅವರಿಂದ ಕೆನ್ನೆಗೆ ಏಟು ತಿಂದ ದುರಾದೃಷ್ಟವಂತರು ಇವರು..
ಸಲ್ಮಾನ್ ಖಾನ್ ಅವರಿಂದ ಕೆನ್ನೆಗೆ ಏಟು ತಿಂದ ದುರಾದೃಷ್ಟವಂತರು ಇವರು..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 27, 2023 | 2:54 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ. ‘ಟೈಗರ್ 3’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸತತ ಸೋಲು ಕಂಡಿರುವುದರಿಂದ ಈ ಸಿನಿಮಾದ ಗಳಿಕೆ ಸಲ್ಲುಗೆ ಕೊಂಚ ರಿಲೀಫ್ ನೀಡಿದೆ ಎನ್ನಬಹುದು. ಆದರೆ, ಇದು ದೊಡ್ಡ ಯಶಸ್ಸಂತೂ ಅಲ್ಲ. ಸಲ್ಮಾನ್ ಖಾನ್​ಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಸದಾ ಒಂದಿಲ್ಲೊಂದು ವಿಚಾರಕ್ಕೆ ಅವರು ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಸಲ್ಮಾನ್ ಖಾನ್ ಅವರಿಗೆ ತಾಳ್ಮೆ ಕಡಿಮೆ. ಅನೇಕ ಸಂದರ್ಭದಲ್ಲಿ ಅವರು ಟೆಂಪರ್ ಕಳೆದುಕೊಂಡಿದ್ದಿದೆ. ಅಭಿಮಾನಿಗಳು ಸೆಲ್ಫಿ ಕೇಳಲು ಬಂದಾಗ ಅವರನ್ನು ತಳ್ಳಿದ ಉದಾಹರಣೆ ಬೇಕಷ್ಟು ಸಿಗುತ್ತದೆ. ಬಿಗ್ ಬಾಸ್ ವೇದಿಕೆ ಮೇಲೆ ಅವರು ಸಾಕಷ್ಟು ಬಾರಿ ಕೋಪ ಹೊರಹಾಕಿದ್ದಾರೆ. ರಣಬೀರ್ ಕಪೂರ್, ಕತ್ರಿನಾ ಕೈಫ್ ಸೇರಿ ಅನೇಕರ ಕೆನ್ನೆಗೆ ಅವರು ಬಾರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಶಾರುಖ್ ಖಾನ್

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಡುವೆ ಭರ್ಜರಿ ಕಿತ್ತಾಟ ನಡೆದಿತ್ತು ಎನ್ನಲಾಗಿದೆ. ಅದು 2008ರ ಸಮಯ. ಕತ್ರಿನಾ ಕೈಫ್ ಬರ್ತ್​ಡೇ ಪಾರ್ಟಿಗೆ ತೆರಳಿದ್ದರು. ಈ ವೇಳೆ ಸಣ್ಣ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ. ಹಲವು ವರ್ಷಗಳ ಕಾಲ ಇವರು ಮಾತನಾಡಿಕೊಂಡಿರಲಿಲ್ಲ. ವೈಮನಸ್ಸು ಮರೆತು ಈಗ ಇಬ್ಬರೂ ಒಂದಾಗಿದ್ದಾರೆ.

ಐಶ್ವರ್ಯಾ ರೈ

ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಇವರು 2002ರಲ್ಲಿ ಬೇರೆ ಆದರು. ಇವರು ಬೇರೆ ಆಗೋಕೆ ಇವರ ಮಧ್ಯೆ ನಡೆದ ಕಿರಿಕ್ ಕಾರಣ ಎನ್ನಲಾಗಿದೆ. ಸಲ್ಮಾನ್ ಖಾನ್ ಅವರು ಐಶ್ವರ್ಯಾ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದನ್ನು ಸಲ್ಲು ಅಲ್ಲಗಳೆದಿದ್ದರು. ಒಂದೇ ಪಾರ್ಟಿಯಲ್ಲಿ ಮುಖಾಮುಖಿ ಆದರೂ ಒಬ್ಬರ ಮುಖವನ್ನು ಒಬ್ಬರು ನೋಡುವುದಿಲ್ಲ.

ರಣಬೀರ್ ಕಪೂರ್

ಪಾರ್ಟಿ ಒಂದರಲ್ಲಿ ಸಲ್ಮಾನ್ ಖಾನ್ ಅವರು ರಣಬೀರ್ ಕಪೂರ್ ಕೆನ್ನೆಗೆ ಬಾರಿಸಿದ್ದರು ಎನ್ನಲಾಗಿದೆ. ಇಬ್ಬರ ಮಧ್ಯೆ ಕಿರಿಕ್ ಆಯಿತು. ಜಗಳ ತಾರಕಕ್ಕೆ ಏರಿತು. ಸಲ್ಲು ಅವರು ಟೆಂಪರ್ ಕಳೆದುಕೊಂಡು ರಣಬೀರ್ ಕೆನ್ನೆಗೆ ಬಾರಿಸಿದರು. ಇದು ಸಾಕಷ್ಟು ಸುದ್ದಿ ಆಯಿತು. ರಣಬೀರ್ ಈ ಘಟನೆಯಿಂದ ಮುಜುಗರ ಅನುಭವಿಸಿದರು.

ಕತ್ರಿನಾ ಕೈಫ್

ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಕೆನ್ನೆಗೆ ಹೊಡೆದಿದ್ದರು ಎನ್ನಲಾಗಿದೆ. ಕತ್ರಿನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಫ್ರೆಂಡ್​ಶಿಪ್ ನೋಡಿ ಸಲ್ಲುಗೆ ಜಲಸ್ ಆಗಿತ್ತು. ಅಕ್ಷಯ್ ಹಾಗೂ ಕತ್ರಿನಾ ಕಾಫಿ ಶಾಪ್​ನಲ್ಲಿದ್ದಾಗ ಸಲ್ಲು ಕತ್ರಿನಾ ಕೆನ್ನೆಗೆ ಹೊಡೆದಿದ್ದರು ಎನ್ನಲಾಗಿದೆ.

ಸುಭಾಷ್ ಘೈ

1997ರಲ್ಲಿ ಸಲ್ಮಾನ್ ಖಾನ್ ಅವರು ಸುಭಾಷ್ ಘೈ ಅವರಿಗೆ ಹೊಡೆದಿದ್ದರು. ಇವರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆ ಬಳಿಕ ಮಗನ ಪರವಾಗಿ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರು ಕ್ಷಮೆ ಕೇಳಿದ್ದರು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಹೇಗಿದೆ ನೋಡಿ ಭದ್ರತೆ; ಸಲ್ಲು ಬಳಿ ಯಾರೂ ಸುಳಿಯುವ ಹಾಗಿಲ್ಲ..

ಅನುರಾಗ್ ಕಶ್ಯಪ್

ಹೊಸ ರೀತಿಯ ಸಿನಿಮಾಗಳನ್ನು ನೀಡುವಲ್ಲಿ ಅನುರಾಗ್ ಕಶ್ಯಪ್ ಅವರು ಮುಂದಿದ್ದಾರೆ. ಅವರು ಸಲ್ಲು ಎದೆ ಮೇಲೆ ಇರುವ ಕೂದಲನ್ನು ತೆಗೆಯುವಂತೆ ಹಾಸ್ಯದ ರೂಪದಲ್ಲಿ ಹೇಳಿದ್ದರು. ಇದನ್ನು ನೋಡಿ ಸಲ್ಲು ಸಿಟ್ಟಾಗಿ ಅನುರಾಗ್ ಕೆನ್ನೆಗೆ ಬಾರಿಸಿದ್ದರು. ಆ ಬಳಿಕ ನಿರ್ಮಾಪಕರ ಬಳಿ ಹೇಳಿ ಅನುರಾಗ್ ಅವರನ್ನು ಸಿನಿಮಾದಿಂದ ಹೊರಗೆ ಇಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್