ತಮಿಳು ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಮಧ್ಯೆ ಕಿತ್ತಾಟ ಆರಂಭ ಆಗಿದೆ. ಜಯಮ್ ರವಿಗೆ ಬೇರೆ ಗರ್ಲ್ಫ್ರೆಂಡ್ ಇರುವ ಕಾರಣದಿಂದ ನನ್ನಿಂದ ಅವರು ದೂರ ಆಗಿದ್ದಾರೆ ಎಂದು ಆರತಿ ಆರೋಪ ಮಾಡಿದ್ದಾರೆ. ಅಲ್ಲದೆ, ಜಯಂ ರವಿ ಅವರು ನನ್ನ ಕೇಳದೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಹಾಗೇನು ಇಲ್ಲ ಎಂದು ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ.
ಜಯಂ ರವಿ ಅವರು ಕೆಲ ದಿನಗಳ ಹಿಂದೆ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ್ದರು. ಆರತಿ ಇಂದ ದೂರ ಆಗುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದರು. ಈ ಮಧ್ಯೆ ಗರ್ಲ್ಫ್ರೆಂಡ್ ವಿಚಾರ ಚರ್ಚೆಗೆ ಬಂತು. ಅವರು ಕೆನೀಶಾ ಎಂಬುವವರ ಜೊತೆ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಈ ಕುರಿತು ಜಯಂ ಅವರು ಸ್ಪಷ್ಟನೆ ನೀಡಿದ್ದಾರೆ.
‘ನನಗೆ ವಿಚ್ಛೇದನ ಬೇಕು. ಆರತಿಗೆ ರಾಜಿ ಆಗಬೇಕು ಎನ್ನುವ ಉದ್ದೇಶ ಇದ್ದರೆ ಅವಳು ಏಕೆ ನನ್ನ ಭೇಟಿ ಮಾಡಿಲ್ಲ? ಎರಡು ಲೀಗಲ್ ನೋಟಿಸ್ ಕಳುಹಿಸಿದರೂ ಏಕೆ ಉತ್ತರ ನೀಡಿಲ್ಲ? ಇದು ರಾಜಿ ಮಾಡಿಕೊಳ್ಳುವವರ ಲಕ್ಷಣವೇ? ಒಂದೊಮ್ಮೆ ಇದೇ ಉದ್ದೇಶ ಇದ್ದಿದ್ದರೆ ನಾನು ಗರ್ಲ್ಫ್ರೆಂಡ್ ಹೊಂದಿದ್ದೇನೆ ಎನ್ನುವ ಸುದ್ದಿ ಹರಡಿಸುತ್ತಿದ್ದರೇ’ ಎಂದು ಅವರು ಕೇಳಿದ್ದಾರೆ.
‘ನನ್ನ ಹಾಗೂ ಕೆನೀಶಾ ಮಧ್ಯೆ ಸಂಭಂಧ ಇದೆ ಎನ್ನುವ ಸುದ್ದಿ ಹೇಗೆ ಹರಿದಾಡಿತು? ಮೂರನೇ ವ್ಯಕ್ತಿಯ ಹೆಸರನ್ನು ಏಕೆ ಎಳೆದು ತರಲಾಗುತ್ತಿದೆ. ನಾನು ಕೆನೀಶಾ ಜೊತೆ ಆಧ್ಯಾತ್ಮ ಕೇಂದ್ರ ಆರಂಭಿಸುವ ಆಲೋಚನೆ ಹೊಂದಿದ್ದೇನೆ. ಅವರಿಗೂ ವಿಚ್ಛೇದನಕ್ಕೂ ಯಾವುದೇ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ’ ಎಂದು ಜಯಂ ರವಿ ಹೇಳಿದ್ದಾರೆ.
ಇದನ್ನೂ ಓದಿ: ‘ನನ್ನ ಗಮನಕ್ಕೆ ತರದೇ ವಿಚ್ಛೇದನ ಘೋಷಿಸಿದ್ದಾರೆ’; ಜಯಂ ರವಿ ವಿರುದ್ಧ ಪತ್ನಿಯ ಆರೋಪ
‘ಮಕ್ಕಳಾದ ಆರವ್ ಹಾಗೂ ಅಯಾನ್ ಅವರು ನನಗೆ ಬೇಕು. ಹತ್ತು ವರ್ಷ ಆಗಲಿ, ಇಪ್ಪತ್ತು ವರ್ಷ ಆಗಲಿ ನಾನು ಕೋರ್ಟ್ನಲ್ಲಿ ಈ ಕೇಸ್ನ ಹೋರಾಡಲು ರೆಡಿ ಇದ್ದೇನೆ. ನನ್ನ ಮಕ್ಕಳೇ ನನ್ನ ಭವಿಷ್ಯ. ನಾನು ನನ್ನ ಮಗ ಆರವ್ಗಾಗಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಸರಿಯಾದ ಸಮಯ ನೋಡಿಕೊಂಡು ಅವನ ಲಾಂಚ್ ಮಾಡುತ್ತೇನೆ. ನಾನು ಆರು ವರ್ಷಗಳ ಹಿಂದೆ ಅವನ ಜೊತೆ ‘ಟಿಕ್ ಟಿಕ್ ಟಿಕ್’ ಹೆಸರಿನ ಸಿನಿಮಾ ಮಾಡಿದ್ದೆ. ಇದರ ಸಕ್ಸಸ್ ಮೀಟ್ನಲ್ಲಿ ಅವನ ಜೊತೆ ಇದ್ದಿದ್ದು ನಿಜಕ್ಕೂ ಖುಷಿಯ ಸಮಯ ಆಗಿತ್ತು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.