ಶಾಹಿದ್ನ ಹೊಗಳಿ ಮಾತನಾಡಿದ ಕರೀನಾ; ಮಾಜಿ ಬಾಯ್ಫ್ರೆಂಡ್ ಬಗ್ಗೆ ಏನಂದ್ರು?
ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ಬ್ರೇಕ್‌ಅಪ್ ನಂತರ ಶಾಹಿದ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಶಾಹಿದ್ ಕಪೂರ್ ಇಲ್ಲದಿದ್ದರೆ ಗೀತ್ ಪಾತ್ರ ಇಷ್ಟು ಜನಪ್ರಿಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಚಾರ ಕೇಳಿ ಅನೇಕರು ಖುಷಿ ಹೊರಹಾಕಿದ್ದಾರೆ.
ನಟಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರ ಸಂಬಂಧ ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿತ್ತು. ಅವರ ಸಂಬಂಧದ ಬಗ್ಗೆ ಎಷ್ಟು ಚರ್ಚೆಯಾಯಿತೋ ಅವರ ಬ್ರೇಕಪ್ ಕೂಡ ಅಷ್ಟೇ ಚರ್ಚೆಯಾಯಿತು. 17 ವರ್ಷಗಳ ಹಿಂದೆ ಇವರಿಬ್ಬರ ‘ಜಬ್ ವಿ ಮೆಟ್’ ಸಿನಿಮಾ ತೆರೆಕಂಡಿತ್ತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿತ್ತು. ಅಷ್ಟೇ ಅಲ್ಲ, 17 ವರ್ಷಗಳ ನಂತರವೂ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕ್ರೇಜ್ ಇದೆ. ಇದರಲ್ಲಿ ಶಾಹಿದ್ ಆದಿತ್ಯ ಪಾತ್ರದಲ್ಲಿ, ಕರೀನಾ ಗೀತ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರೇಕಪ್ ಆದ ನಂತರ ಶಾಹಿದ್ ಮತ್ತು ಕರೀನಾ ಪರಸ್ಪರರ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಂಡಿದ್ದಾರೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ಬ್ರೇಕ್‌ಅಪ್ ನಂತರ ಶಾಹಿದ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಶಾಹಿದ್ ಕಪೂರ್ ಇಲ್ಲದಿದ್ದರೆ ಗೀತ್ ಪಾತ್ರ ಇಷ್ಟು ಜನಪ್ರಿಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸಂದರ್ಶನ ಒಂದರಲ್ಲಿ ‘ಜಬ್ ವಿ ಮೆಟ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಯಿತು. ಕರೀನಾಗೆ ಚಿತ್ರ ಮತ್ತು ಅವರ ಪಾತ್ರದ ಬಗ್ಗೆ ಹೆಚ್ಚು ಇಷ್ಟವಾದದ್ದು ಏನು ಎಂದು ಕೇಳಲಾಯಿತು. ಅದಕ್ಕೆ ಅವರು ‘ಎಲ್ಲವೂ.. ನಾನು ಎಲ್ಲವನ್ನೂ ಪ್ರೀತಿಸುತ್ತಿದ್ದೆ. ಗೀತ್ ಪಾತ್ರದ ಬಗ್ಗೆ ನನಗೆ ಎಲ್ಲವೂ ಇಷ್ಟವಾಯಿತು. ಪ್ರತಿಯೊಬ್ಬರೂ ಗೀತ್ ಅವರಂತೆ ಬದುಕಲು ಬಯಸುತ್ತಾರೆ, ಅವರಂತೆ ನಟಿಸಲು ಬಯಸುತ್ತಾರೆ. ಇಂದಿಗೂ ಈ ಚಿತ್ರವನ್ನು ನೋಡಿದಾಗ ನನಗೆ ತುಂಬಾ ವಿಶೇಷ ಅನಿಸುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ದುಬಾರಿ ನಟಿ ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು
‘ಗೀತ್ ಪಾತ್ರವು ಆದಿತ್ಯ ಅವರ ಪಾತ್ರಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು. ನಾನು ಖಂಡಿತವಾಗಿಯೂ ಶಾಹಿದ್‌ಗೆ ಇಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ಯಾಕೆಂದರೆ ಅವರು ಈ ಸಿನಿಮಾದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ನಮ್ಮಿಬ್ಬರ ಕೆಮಿಸ್ಟ್ರಿ ಆ ಪಾತ್ರಗಳಿಗೆ ಪೂರಕವಾಗಿವೆ. ಅವರಿಲ್ಲದೆ ಚಿತ್ರ ಪೂರ್ಣಗೊಳ್ಳುತ್ತಿರಲಿಲ್ಲ’ ಎಂದಿದ್ದಾರೆ ಅವರು. ಜಬ್ ವಿ ಮೆಟ್ ಸಿನಿಮಾ 2007ರ ಅಕ್ಟೋಬರ್ನಲ್ಲಿ ಬಿಡುಗಡೆಯಾಯಿತು. ಈ ಚಿತ್ರ 50.9 ಕೋಟಿ ಗಳಿಸಿತ್ತು. ಹಿಂದಿಯಲ್ಲಿ ಯಶಸ್ವಿಯಾದ ನಂತರ, ಚಿತ್ರವನ್ನು ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲಾಯಿತು.
‘ಜಬ್ ವಿ ಮೆಟ್’ ಚಿತ್ರದ ಶೂಟಿಂಗ್ ನಂತರ ಶಾಹಿದ್ ಮತ್ತು ಕರೀನಾ ಬೇರ್ಪಟ್ಟರು. ಅವರು 2016ರಲ್ಲಿ ‘ಉಡ್ತಾ ಪಂಜಾಬ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇವರು ಬೇರೆ ಆದರೂ ಅದು ಕೆಲಸದ ಮೇಲೆ ಪರಿಣಾಮ ಬೀರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.