AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ರಾಜಿ ಸಂಧಾನ ಮಾಡಿಕೊಳ್ಳುವವರ ಲಕ್ಷಣವೇ?’ ಬೀದಿಗೆ ಬಂತು ಜಯಂ-ಆರತಿ ಜಗಳ

ಜಯಂ ರವಿ ಅವರು ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಅವರು ಶಾಕಿಂಗ್ ಸ್ಟೇಟ್​ಮೆಂಟ್ ಒಂದನ್ನು ನೀಡಿದ್ದರು. ತಾವು ಪತ್ನಿ ಆರತಿ ಜೊತೆ ವಿಚ್ಛೇದನ ಪಡೆಯೋದಾಗಿ ಘೋಷಿಸಿದ್ದರು. ಈಗ ಇವರ ಜಗಳ ಬೀದಿಗೆ ಬಂದಿದೆ. ಅವರು ಪತ್ನಿ ವಿರುದ್ಧ ಸ್ಪಷ್ಟನೆ ಕೊಟ್ಟಿದ್ದಾರೆ.

‘ಇದು ರಾಜಿ ಸಂಧಾನ ಮಾಡಿಕೊಳ್ಳುವವರ ಲಕ್ಷಣವೇ?’ ಬೀದಿಗೆ ಬಂತು ಜಯಂ-ಆರತಿ ಜಗಳ
ಆರತಿ-ಜಯಂ ರವಿ
ರಾಜೇಶ್ ದುಗ್ಗುಮನೆ
|

Updated on: Sep 23, 2024 | 7:34 AM

Share

ತಮಿಳು ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಮಧ್ಯೆ ಕಿತ್ತಾಟ ಆರಂಭ ಆಗಿದೆ. ಜಯಮ್ ರವಿಗೆ ಬೇರೆ ಗರ್ಲ್​ಫ್ರೆಂಡ್ ಇರುವ ಕಾರಣದಿಂದ ನನ್ನಿಂದ ಅವರು ದೂರ ಆಗಿದ್ದಾರೆ ಎಂದು ಆರತಿ ಆರೋಪ ಮಾಡಿದ್ದಾರೆ. ಅಲ್ಲದೆ, ಜಯಂ ರವಿ ಅವರು ನನ್ನ ಕೇಳದೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಹಾಗೇನು ಇಲ್ಲ ಎಂದು ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ.

ಜಯಂ ರವಿ ಅವರು ಕೆಲ ದಿನಗಳ ಹಿಂದೆ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ್ದರು. ಆರತಿ ಇಂದ ದೂರ ಆಗುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದರು. ಈ ಮಧ್ಯೆ ಗರ್ಲ್​ಫ್ರೆಂಡ್ ವಿಚಾರ ಚರ್ಚೆಗೆ ಬಂತು. ಅವರು ಕೆನೀಶಾ ಎಂಬುವವರ ಜೊತೆ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಈ ಕುರಿತು ಜಯಂ ಅವರು ಸ್ಪಷ್ಟನೆ ನೀಡಿದ್ದಾರೆ.

‘ನನಗೆ ವಿಚ್ಛೇದನ ಬೇಕು. ಆರತಿಗೆ ರಾಜಿ ಆಗಬೇಕು ಎನ್ನುವ ಉದ್ದೇಶ ಇದ್ದರೆ ಅವಳು ಏಕೆ ನನ್ನ ಭೇಟಿ ಮಾಡಿಲ್ಲ? ಎರಡು ಲೀಗಲ್ ನೋಟಿಸ್ ಕಳುಹಿಸಿದರೂ ಏಕೆ ಉತ್ತರ ನೀಡಿಲ್ಲ? ಇದು ರಾಜಿ ಮಾಡಿಕೊಳ್ಳುವವರ ಲಕ್ಷಣವೇ? ಒಂದೊಮ್ಮೆ ಇದೇ ಉದ್ದೇಶ ಇದ್ದಿದ್ದರೆ ನಾನು ಗರ್ಲ್​ಫ್ರೆಂಡ್ ಹೊಂದಿದ್ದೇನೆ ಎನ್ನುವ ಸುದ್ದಿ ಹರಡಿಸುತ್ತಿದ್ದರೇ’ ಎಂದು ಅವರು ಕೇಳಿದ್ದಾರೆ.

‘ನನ್ನ ಹಾಗೂ ಕೆನೀಶಾ ಮಧ್ಯೆ ಸಂಭಂಧ ಇದೆ ಎನ್ನುವ ಸುದ್ದಿ ಹೇಗೆ ಹರಿದಾಡಿತು? ಮೂರನೇ ವ್ಯಕ್ತಿಯ ಹೆಸರನ್ನು ಏಕೆ ಎಳೆದು ತರಲಾಗುತ್ತಿದೆ. ನಾನು ಕೆನೀಶಾ ಜೊತೆ ಆಧ್ಯಾತ್ಮ ಕೇಂದ್ರ ಆರಂಭಿಸುವ ಆಲೋಚನೆ ಹೊಂದಿದ್ದೇನೆ. ಅವರಿಗೂ ವಿಚ್ಛೇದನಕ್ಕೂ ಯಾವುದೇ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ’ ಎಂದು ಜಯಂ ರವಿ ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಗಮನಕ್ಕೆ ತರದೇ ವಿಚ್ಛೇದನ ಘೋಷಿಸಿದ್ದಾರೆ’; ಜಯಂ ರವಿ ವಿರುದ್ಧ ಪತ್ನಿಯ ಆರೋಪ

‘ಮಕ್ಕಳಾದ ಆರವ್ ಹಾಗೂ ಅಯಾನ್ ಅವರು ನನಗೆ ಬೇಕು. ಹತ್ತು ವರ್ಷ ಆಗಲಿ, ಇಪ್ಪತ್ತು ವರ್ಷ ಆಗಲಿ ನಾನು ಕೋರ್ಟ್​ನಲ್ಲಿ ಈ ಕೇಸ್​ನ ಹೋರಾಡಲು ರೆಡಿ ಇದ್ದೇನೆ. ನನ್ನ ಮಕ್ಕಳೇ ನನ್ನ ಭವಿಷ್ಯ. ನಾನು ನನ್ನ ಮಗ ಆರವ್​​ಗಾಗಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಸರಿಯಾದ ಸಮಯ ನೋಡಿಕೊಂಡು ಅವನ ಲಾಂಚ್ ಮಾಡುತ್ತೇನೆ. ನಾನು ಆರು ವರ್ಷಗಳ ಹಿಂದೆ ಅವನ ಜೊತೆ ‘ಟಿಕ್ ಟಿಕ್ ಟಿಕ್’ ಹೆಸರಿನ ಸಿನಿಮಾ ಮಾಡಿದ್ದೆ. ಇದರ ಸಕ್ಸಸ್ ಮೀಟ್​ನಲ್ಲಿ ಅವನ ಜೊತೆ ಇದ್ದಿದ್ದು ನಿಜಕ್ಕೂ ಖುಷಿಯ ಸಮಯ ಆಗಿತ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ