ಜಿಯೋ ಹಾಟ್​ಸ್ಟಾರ್​ನಲ್ಲಿರೋ ಸಿನಿಮಾ, ಸೀರಿಸ್​ಗಳಲ್ಲಿ ಇರಲ್ಲ ‘ಆ’ ದೃಶ್ಯಗಳು

ಜಿಯೋ ಹಾಟ್‌ಸ್ಟಾರ್ ತನ್ನ ವೇದಿಕೆಯಲ್ಲಿ ಪ್ರಸಾರವಾಗುವ ಚಲನಚಿತ್ರ ಮತ್ತು ಸರಣಿಗಳಲ್ಲಿನ ಬೋಲ್ಡ್ ದೃಶ್ಯಗಳಿಗೆ ಸೆನ್ಸಾರ್ ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಈ ನಿರ್ಧಾರವು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೆನ್ಸಾರ್‌ಶಿಪ್ ಕಡಿಮೆ ಇರುವುದರಿಂದ ಇದು ಗಮನಾರ್ಹ ಬದಲಾವಣೆಯಾಗಿದೆ. ‘ಗೇಮ್ ಆಫ್ ಥ್ರೋನ್ಸ್’ನಂತಹ ಸರಣಿಗಳ ಮೇಲೆ ಈ ನೀತಿ ಪರಿಣಾಮ ಬೀರಬಹುದು.

ಜಿಯೋ ಹಾಟ್​ಸ್ಟಾರ್​ನಲ್ಲಿರೋ ಸಿನಿಮಾ, ಸೀರಿಸ್​ಗಳಲ್ಲಿ ಇರಲ್ಲ ‘ಆ’ ದೃಶ್ಯಗಳು
ಜಿಯೋ ಹಾಟ್​ಸ್ಟಾರ್

Updated on: Feb 23, 2025 | 8:44 AM

ಇತ್ತೀಚೆಗೆ ಹಾಟ್​ ಸ್ಟಾರ್​ನ ಮುಕೇಶ್​ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ. ಈ ಮೂಲಕ ಹಾಟ್​ಸ್ಟಾರ್​ನ ‘ಜಿಯೋ ಹಾಟ್​ಸ್ಟಾರ್’ ಎಂದು ಬದಲಿಸಲಾಗಿದೆ. ಇದರಲ್ಲಿ ವಿವಿಧ ಸೀರಿಸ್​ಗಳನ್ನು ನೋಡಬಹುದು ಎಂದು ಎಲ್ಲರೂ ಎಗ್ಸೈಟ್ ಆಗಿದ್ದರು. ಜಿಯೋದವರು ಹಾಟ್​ಸ್ಟಾರ್​​ನ ಖರೀದಿ ಮಾಡಿರುವುದರಿಂದ ಎಚ್​​ಬಿಒ, ಹುಲು ಸೇರಿ ಅನೇಕ ಕಂಟೆಟ್​​ಗಳು ಇದರಲ್ಲಿ ಸಿಗಲಿವೆ ಎಂದು ಹೇಳಲಾಗಿತ್ತು. ಆದರೆ, ಈಗ ಒಂದು ಜಿಯೋ ಹಾಟ್​ಸ್ಟಾರ್ ಒಂದು ಗಟ್ಟಿ ನಿರ್ಧಾರ ಮಾಡಿದೆ.

ಇಂಗ್ಲಿಷ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಮಾನ್ಯ. ಅದೇ ರೀತಿ ಭಾರತದ ಅನೇಕ ಚಿತ್ರಗಳಲ್ಲೂ ಹಸಿ ಬಿಸಿ ದೃಶ್ಯಗಳು ಇವೆ. ಇನ್ನು, ಅವಾಚ್ಯ ಶಬ್ದಗಳಿಂದ ಬಯ್ಯೋ ದೃಶ್ಯಗಳಿಗೂ ಏನೂ ಬರವಿಲ್ಲ. ಇವುಗಳಿಗೆ ಬ್ರೇಕ್ ಹಾಕಲು ಜಿಯೋ ಹಾಟ್​ಸ್ಟಾರ್ ಮುಂದಾಗಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಸಾರ ಕಾಣಬೇಕು ಎಂದರೆ ಸೆನ್ಸಾರ್ ಆಗಲೇಬೇಕು. ಆದರೆ, ಒಟಿಟಿಯಲ್ಲಿ ಆ ರೀತಿ ಇಲ್ಲ. ಇಲ್ಲಿ ಸೆನ್ಸಾರ್ ಆಗದೆ ಎಲ್ಲಾ ಸಿನಿಮಾ ಹಾಗೂ ಸೀರಿಸ್​ಗಳು ಪ್ರಸಾರ ಕಾಣುತ್ತವೆ. ಹೀಗಾಗಿ, ಅನೇಕ ದೃಶ್ಯಗಳು ರಾ ರೂಪದಲ್ಲಿ ಸಿಗುತ್ತವೆ. ಆದರೆ, ಇನ್ನುಮುಂದೆ ಇದಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ. ಮುಂಬರುವ ಭಾರತದ ಹಾಗೂ ಅಂತಾರಾಷ್ಟ್ರೀಯ ಸಿನಿಮಾ ಹಾಗೂ ಸೀರಿಸ್​ಗಳಿಗೆ ಸೆನ್ಸಾರ್ ಮಾಡಲು ಜಿಯೋ ಹಾಟ್​ಸ್ಟಾರ್ ನಿರ್ಧರಿಸಿದೆ ಎನ್ನಲಾಗಿದೆ.  ಇದರಿಂದ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತುಗಳು ಬರುತ್ತಾ?: ಪರಿಹಾರ ಇಲ್ಲಿದೆ

‘ಗೇಮ್ ಆಫ್ ಥ್ರೋನ್ಸ್’ ರೀತಿಯ ಸೀರಿಸ್​​ಗಳಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇವೆ. ಇವುಗಳಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಇಡೀ ಸೀರಿಸ್ ಹಾಗೂ ಚಿತ್ರದ ಮೇಲೆ ಸಾಕಷ್ಟು ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.