ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಅವರು ಟಾಲಿವುಡ್ ಸ್ಟಾರ್ ಹೀರೋ ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡಿದರು. ಈಗ ಅದರ 2ನೇ ಪಾರ್ಟ್ಗೆ ತಯಾರಿ ನಡೆದಿದೆ. ಅಲ್ಲದೇ, ಜೂನಿಯರ್ ಎನ್ಟಿಆರ್ (Jr NTR) ಅವರ ಜೊತೆಗೂ ಪ್ರಶಾಂತ್ ನೀಲ್ ಅವರು ಒಂದು ಸಿನಿಮಾ ಮಾಡಲಿದ್ದಾರೆ. ಆ ಬಗ್ಗೆ ಇಂದು (ಮೇ 20) ಸೂಪರ್ ಅಪ್ಡೇಟ್ ಸಿಕ್ಕಿದೆ. ಜೂನಿಯರ್ ಎನ್ಟಿಆರ್ ಅವರ ಬರ್ತ್ಡೇ (Jr NTR Birthday) ಪ್ರಯುಕ್ತ ನಿರ್ಮಾಣ ಸಂಸ್ಥೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ನ ಸಿನಿಮಾ ಅನೌನ್ಸ್ ಆಗಿ ಬಹಳ ತಿಂಗಳು ಕಳೆದಿವೆ. ಆದರೆ ಯಾವಾಗ ಇದರ ಶೂಟಿಂಗ್ ಆರಂಭ ಆಗಲಿದೆ ಎಂಬುದು ತಿಳಿದಿರಲಿಲ್ಲ. ಈಗ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಕಡೆಯಿಂದ ಅಪ್ಡೇಟ್ ನೀಡಲಾಗಿದೆ. ಆಗಸ್ಟ್ ತಿಂಗಳಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
Happy Birthday to the ‘MAN OF MASSES’ @tarak9999 ❤🔥
-Team #NTRNeel
Shoot begins from August 2024.
Brace yourself for a powerhouse project 🔥#HappyBirthdayNTR#PrashanthNeel @NTRArtsOfficial pic.twitter.com/UcXsyzKVhd
— Mythri Movie Makers (@MythriOfficial) May 20, 2024
ಟಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಜೂನಿಯರ್ ಎನ್ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ‘ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್ಟಿಆರ್ ಅವರಿಗೆ ಹ್ಯಾಪಿ ಬರ್ತ್ಡೇ. 2024ರ ಆಗಸ್ಟ್ನಿಂದ ಶೂಟಿಂಗ್ ಆರಂಭ ಆಗಲಿದೆ. ಪವರ್ಹೌಸ್ ಪ್ರಾಜೆಕ್ಟ್ಗಾಗಿ ಸಿದ್ಧರಾಗಿ’ ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಪ್ರಶಾಂತ್ ನೀಲ್, ಜೂ. ಎನ್ಟಿಆರ್ಗೆ ‘ಡ್ರ್ಯಾಗನ್’ ಟೈಟಲ್ ಕೊಟ್ಟಿದ್ದು ಕರಣ್ ಜೋಹರ್?
ಶೂಟಿಂಗ್ ಶುರುವಾಗುವ ಸಮಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಈ ಸಿನಿಮಾಗೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಡ್ರ್ಯಾಗನ್’ ಶೀರ್ಷಿಕೆಯನ್ನು ಹಿಂದಿಯಲ್ಲಿ ಕರಣ್ ಜೋಹರ್ ಅವರು ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.