ಜೂನಿಯರ್ ಎನ್ಟಿಆರ್ (Jr NTR) ಅವರು ಸದ್ಯ ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಭಾರೀ ನಿರೀಕ್ಷೆಗಳಿವೆ. ಈ ಚಿತ್ರದ ಬಗ್ಗೆ ನಿರ್ಮಾಪಕರು ಈಗಾಗಲೇ ಹಲವು ಅಪ್ಡೇಟ್ಗಳನ್ನು ನೀಡುತ್ತಿದ್ದಾರೆ. ಈ ಮಧ್ಯೆ ಜೂನಿಯರ್ ಎನ್ಟಿಆರ್ ಅವರು ಕುಟುಂಬದ ಜೊತೆ ಜಪಾನ್ಗೆ ತೆರಳಿದ್ದರು. ಅಲ್ಲಿ ಭೂಕಂಪ ಆದ ಬಳಿಕ ಅವರು ಭಾರತಕ್ಕೆ ಮರಳಿದ್ದಾರೆ. ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಕ್ರಿಸ್ಮಸ್ ಸಂದರ್ಭದಲ್ಲಿ ಜಪಾನ್ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಭೂಕಂಪ ಸಂಭವಿಸಿದೆ. ಇದು ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿತ್ತು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಸುರಕ್ಷಿತವಾಗಿ ಭಾರತಕ್ಕೆ ಮರಳಿರುವುದಾಗಿ ತಾರಕ್ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
‘ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್ನಲ್ಲಿ ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್’ ಎಂದು ಜೂನಿಯರ್ ಎನ್ಟಿಆರ್ ಬರೆದುಕೊಂಡಿದ್ದಾರೆ.
Back home today from Japan and deeply shocked by the earthquakes hitting. Spent the entire last week there, and my heart goes out to everyone affected.
Grateful for the resilience of the people and hoping for a swift recovery. Stay strong, Japan 🇯🇵— Jr NTR (@tarak9999) January 1, 2024
ಇದನ್ನೂ ಓದಿ: ಭಾರಿ ಉತ್ಸಾಹದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಟ್ರೋಲ್ ಆದ ‘ದೇವರ’ ಚಿತ್ರತಂಡ
‘ದೇವರ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಜೂನಿಯರ್ ಎನ್ಟಿಆರ್ಗೆ ಜೊತೆಯಾಗಿ ಜಾನ್ವಿ ಕಪೂರ್ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮುದ್ರದ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗುತ್ತದೆ. ಈ ಚಿತ್ರದ ಗ್ಲಿಂಪ್ಸ್ ಜನವರಿ 8ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ