ಭಾರಿ ಉತ್ಸಾಹದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಟ್ರೋಲ್ ಆದ ‘ದೇವರ’ ಚಿತ್ರತಂಡ
ಸ್ಟಾರ್ ಹೀರೋಗಳ ಹೊಸ ಸಿನಿಮಾದಿಂದ ಯಾವುದೇ ಅಪ್ಡೇಟ್ ಸಿಕ್ಕರೂ ಜನರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ‘ದೇವರ’ ಸಿನಿಮಾದ ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯಾಕೆಂದರೆ ಈ ಪೋಸ್ಟರ್ನಲ್ಲಿ ಯಾವುದೇ ವಿಶೇಷತೆ ಕಾಣಿಸಿಲ್ಲ. ಹೊಸತನ ಕೂಡ ಇಲ್ಲ. ಹಾಗಾಗಿ ಭಾರಿ ಟೀಕೆಗೆ ಒಳಗಾಗುತ್ತಿದೆ.
ನಟ ಜೂನಿಯರ್ ಎನ್ಟಿಆರ್ (Jr NTR) ಅವರು ‘ದೇವರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಜೂನಿಯರ್ ಎನ್ಟಿಆರ್ ಅವರು ಕೈಗೆತ್ತಿಕೊಂಡ ಚಿತ್ರ ಎಂಬ ಕಾರಣಕ್ಕೆ ಈ ಸಿನಿಮಾಗೆ ಹೆಚ್ಚು ಹೈಪ್ ಸೃಷ್ಟಿ ಆಗಿದೆ. ‘ದೇವರ’ (Devara) ಚಿತ್ರದ ಹೊಸ ಪೋಸ್ಟರ್ ಅನ್ನು ನ್ಯೂ ಇಯರ್ ಪ್ರಯುಕ್ತ ಭಾರಿ ಉತ್ಸಾಹದಿಂದ ಬಿಡುಗಡೆ ಮಾಡಲಾಯಿತು. ಆದರೆ ಅಭಿಮಾನಿಗಳಿಗೆ ಇದು ಇಷ್ಟ ಆಗಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಸ್ಟಾರ್ ಹೀರೋಗಳ ಹೊಸ ಸಿನಿಮಾದಿಂದ ಯಾವುದೇ ಅಪ್ಡೇಟ್ ಸಿಕ್ಕರೂ ಜನರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ‘ದೇವರ’ ಸಿನಿಮಾದ ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯಾಕೆಂದರೆ ಈ ಪೋಸ್ಟರ್ನಲ್ಲಿ ಯಾವುದೇ ವಿಶೇಷತೆ ಕಾಣಿಸಿಲ್ಲ. ಹೊಸತನ ಕೂಡ ಇಲ್ಲ. ಹಾಗಾಗಿ ಈ ಪೋಸ್ಟರ್ ಭಾರಿ ಟೀಕೆಗೆ ಒಳಗಾಗುತ್ತಿದೆ.
ಜೂ ಎನ್ಟಿಆರ್ ಸಹೋದರನ ಸಿನಿಮಾ ವಿವಾದದಲ್ಲಿ: ನಿರ್ದೇಶಕನ ದೀರ್ಘ ಪತ್ರ
ಹೊಸ ಪೋಸ್ಟರ್ನಲ್ಲಿ ಜೂನಿಯರ್ ಎನ್ಟಿಆರ್ ಅವರು ಸಮುದ್ರದಲ್ಲಿ ದೋಣಿಯ ಮೇಲೆ ನಿಂತು ಪೋಸ್ ನೀಡಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳ ಪೋಸ್ಟರ್ಗಳು ಇದೇ ರೀತಿ ವಿನ್ಯಾಸಗೊಂಡಿದ್ದವು. ಹಾಗಾಗಿ ಜೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳಿಗೆ ಈ ಪೋಸ್ಟರ್ ಕಿಂಚಿತ್ತೂ ಇಷ್ಟ ಆಗಿಲ್ಲ. ಬೇರೆ ನಟರ ಸಿನಿಮಾದ ಪೋಸ್ಟರ್ಗಳಿಗೆ ಇದನ್ನು ಹೋಲಿಕೆ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
అందరికీ నూతన సంవత్సర శుభాకాంక్షలు! Wishing you all a very Happy New Year.
Can’t wait for you all to experience the glimpse of #Devara on Jan 8th. pic.twitter.com/RIgwmVA6e0
— Jr NTR (@tarak9999) January 1, 2024
ಈ ಪೋಸ್ಟರ್ ನೋಡಿ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಬೇಸರ ಮಾಡಿಕೊಂಡಿರಬಹುದು. ಆದರೆ ಭರವಸೆ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಜನವರಿ 8ರಂದು ‘ದೇವರ’ ಸಿನಿಮಾದಿಂದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಅದು ಅಭಿಮಾನಿಗಳನ್ನು ಖುಷಿಪಡಿಸಲಿದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಅವರು ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ