AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರ’ ಸಿನಿಮಾ ಕಡೆಯಿಂದ ಸರ್​ಪ್ರೈಸ್; ಹೊಸ ಪೋಸ್ಟರ್ ಜೊತೆ ಅಪ್​ಡೇಟ್ ಕೊಟ್ಟ ತಂಡ

ಹೊಸ ವರ್ಷದ ಸಂದರ್ಭದಲ್ಲಿ ಹಲವು ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡುತ್ತಿವೆ. ಅದೇ ರೀತಿ ಜೂನಿಯರ್ ಎನ್​ಟಿಆರ್ ಅವರ ನಟನೆಯ ‘ದೇವರ’ ತಂಡ ಕೂಡ ಪೋಸ್ಟರ್ ಬಿಡುಗಡೆ ಮಾಡಿದೆ. ಸಮುದ್ರದ ಮಧ್ಯದಲ್ಲಿ ದೋಣಿಯ ಮೇಲೆ ಜೂನಿಯರ್ ಎನ್​ಟಿಆರ್ ನಿಂತಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ.

‘ದೇವರ’ ಸಿನಿಮಾ ಕಡೆಯಿಂದ ಸರ್​ಪ್ರೈಸ್; ಹೊಸ ಪೋಸ್ಟರ್ ಜೊತೆ ಅಪ್​ಡೇಟ್ ಕೊಟ್ಟ ತಂಡ
ಜೂನಿಯರ್​ ಎನ್​ಟಿಆರ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 01, 2024 | 5:32 PM

Share

‘ಆರ್​ಆರ್​ಆರ್’ ಸಿನಿಮಾದ ದೊಡ್ಡ ಗೆಲುವಿನ ಬಳಿಕ ಜೂನಿಯರ್ ಎನ್​ಟಿಆರ್ (Jr NTR) ಅವರು ‘ದೇವರ’ (Devara) ಸಿನಿಮಾ  ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಕೊರಟಾಲ ಶಿವ (Koratala Siva) ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ಒಂದು ಒಳ್ಳೆಯ ಸುದ್ದಿಯನ್ನು ತಂಡ ನೀಡಿದೆ. ಸಿನಿಮಾದ ಮೊದಲ ಗ್ಲಿಂಪ್ಸ್ ಯಾವಾಗ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಎಲ್ಲ ಕಡೆಗಳಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಹಲವು ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡುತ್ತಿವೆ. ಅದೇ ರೀತಿ ಜೂನಿಯರ್ ಎನ್​ಟಿಆರ್ ಅವರ ನಟನೆಯ ‘ದೇವರ’ ತಂಡ ಕೂಡ ಪೋಸ್ಟರ್ ಬಿಡುಗಡೆ ಮಾಡಿದೆ. ಸಮುದ್ರದ ಮಧ್ಯದಲ್ಲಿ ದೋಣಿಯ ಮೇಲೆ ಜೂನಿಯರ್ ಎನ್​ಟಿಆರ್ ನಿಂತಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ಮೊದಲ ಗ್ಲಿಂಪ್ಸ್ ರಿಲೀಸ್ ಆಗೋದು ಯಾವಾಗ ಎನ್ನುವ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿದೆ. ಜನವರಿ 8ರಂದು ‘ದೇವರ’ ಚಿತ್ರದ ಝಲಕ್ ಸಿಗಲಿದೆ. ಅಂದು ಯಶ್ ಅವರ ಜನ್ಮದಿನ. ‘ಟಾಕ್ಸಿಕ್’ ಚಿತ್ರದಿಂದಲೂ ಗ್ಲಿಂಪ್ಸ್ ರಿಲೀಸ್ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೂಲಕ ಸಿನಿಪ್ರಿಯರಿಗೆ ಒಂದೇ ದಿನ ಎರಡು ಖುಷಿ ಸುದ್ದಿ ಸಿಗುತ್ತಿದೆ.

ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಸೋತಿದೆ. ಈ ಚಿತ್ರದ ಬಳಿಕ ‘ದೇವರ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆದರು. ಈ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ‘ದೇವರ’ ಚಿತ್ರಕ್ಕೆ ಅನಿರುದ್ಧ್​ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಮುದ್ರ ತೀರದಲ್ಲಿ ಚಿತ್ರದ ಕಥೆ ಸಾಗುತ್ತದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿ. ಇದೇ ಮೊದಲ ಬಾರಿಗೆ ಅವರು ಟಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: ಜೂ ಎನ್​ಟಿಆರ್ ಸಹೋದರನ ಸಿನಿಮಾ ವಿವಾದದಲ್ಲಿ: ನಿರ್ದೇಶಕನ ದೀರ್ಘ ಪತ್ರ

ಏಪ್ರಿಲ್ ತಿಂಗಳಲ್ಲಿ ‘ದೇವರ’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಬಳಿಕ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಇದು ಬಾಲಿವುಡ್ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ. ಇದಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್ ನಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.