AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್ ನೀಲ್

Prashanth Neel-Jr NTR: ಜೂ ಎನ್​ಟಿಆರ್​ ಅವರ ಹೊಸ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ಬಗ್ಗೆ ಪ್ರಮುಖ ಅಪ್​ಡೇಟ್ ಒಂದನ್ನು ನೀಲ್ ಹಂಚಿಕೊಂಡಿದ್ದಾರೆ.

ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್ ನೀಲ್
ನೀಲ್-ಎನ್​ಟಿಆರ್
ಮಂಜುನಾಥ ಸಿ.
|

Updated on: Dec 21, 2023 | 7:55 PM

Share

ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿ ಪ್ರಭಾಸ್ ನಟಿಸಿರುವ ‘ಸಲಾರ್’ (Salaar) ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಮೊದಲ ಮೂರು ದಿನದ ಟಿಕೆಟ್​ಗಳು ಬಹುತೇಕ ಮಾರಾಟವಾಗಿವೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎನ್ನಲಾಗುತ್ತಿದೆ. ಸತತ ಫ್ಲಾಪ್ ನೀಡಿದ್ದ ಪ್ರಭಾಸ್​ರನ್ನು ಈ ಸಿನಿಮಾ ಗೆಲುವಿನ ಹಾದಿಗೆ ಮರಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆ ಪ್ರಶಾಂತ್​ ನೀಲ್​ರ ಮುಂದಿನ ಸಿನಿಮಾ ಬಗ್ಗೆ ಪ್ರಮುಖ ಅಪ್​ಡೇಟ್ ಒಂದು ಹೊರಬಿದ್ದಿದೆ.

ಪ್ರಭಾಸ್ ಜೊತೆಗಿನ ‘ಸಲಾರ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಪ್ರಶಾಂತ್ ನೀಲ್, ತಮ್ಮ ಮುಂದಿನ ಸಿನಿಮಾ ಜೂ ಎನ್​ಟಿಆರ್ ಜೊತೆಗೆ ಇರಲಿದೆ ಎಂದು ಘೋಷಿಸಿದ್ದರು. ಮಾತ್ರವಲ್ಲದೆ ಸಿನಿಮಾದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದರು. ಆದರೆ ಆ ಬಳಿಕ ಆ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್ ಹೊರಬಿದ್ದಿರಲಿಲ್ಲ. ಇದೀಗ ‘ಸಲಾರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಪ್ರಶಾಂತ್ ನೀಲ್, ಇದೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ.

‘‘ಈಗಾಗಲೇ ಜೂ ಎನ್​ಟಿಆರ್ ಜೊತೆಗಿನ ಸಿನಿಮಾದ ಮೇಲೆ ಕೆಲಸ ಆರಂಭಿಸಿದ್ದೇನೆ. ಆದರೆ ಜೂ ಎನ್​ಟಿಆರ್, ತೆಲುಗಿನ ‘ದೇವರ’ ಹಾಗೂ ಹಿಂದಿಯ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ನಾನು ಅವರೊಟ್ಟಿಗೆ ಮಾಡುವ ಸಿನಿಮಾದ ಸಮಯವನ್ನು ಸರಿಯಾಗಿ ಕಾದು ಆಯ್ಕೆ ಮಾಡಿಕೊಳ್ಳಬೇಕಿದೆ. ಸದ್ಯಕ್ಕೆ ಆ ಬಗ್ಗೆ ಹೆಚ್ಚಿಗೇನೂ ಮಾತನಾಡಲಾರೆ, ನನ್ನ ಗಮನವೆಲ್ಲ ‘ಸಲಾರ್’ ಸಿನಿಮಾವನ್ನು ಬಿಡುಗಡೆ ಮಾಡುವ ಕಡೆಗಿದೆ’’ ಎಂದಿದ್ದಾರೆ.

ಇದನ್ನೂ ಓದಿ:‘ಸಲಾರ್’ಗೆ ನೋ ಅನ್ನಲು ರೆಡಿಯಾಗಿದ್ದ ಪ್ರಭಾಸ್ ನಿರ್ಣಯ ಬದಲಿಸಿದ್ದು ಏಕೆ?

ಮುಂದುವರೆದು, ‘‘ಜೂ ಎನ್​ಟಿಆರ್, ಈ ವರೆಗೆ ಮಾಡಿರದ ಪಾತ್ರ, ಕತೆಯನ್ನು ಅವರಿಗಾಗಿ ಸಿನಿಮಾ ಮಾಡಲಿದ್ದೇನೆ. ಜೂ ಎನ್​ಟಿಆರ್ ಸಹ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಲಿದ್ದಾರೆ. ಈ ಕತೆ ನನ್ನ ಮಾಮೂಲಿ ಸ್ಟೈಲ್​ನಲ್ಲಿ ಇರುವುದಿಲ್ಲ ಬದಲಿಗೆ ಸಿನಿಮಾದಲ್ಲಿ ಭಾವುಕತೆಯೇ ಪ್ರಧಾನ ಅಂಶವಾಗಿರಲಿದೆ’’ ಎಂದಿದ್ದಾರೆ. ಜೂ ಎನ್​ಟಿಆರ್​ಗಾಗಿ ಪಕ್ಕಾ ಆಕ್ಷನ್ ಸಿನಿಮಾವನ್ನು ನೀಲ್ ನಿರ್ದೇಶಿಸಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿತ್ತು, ಆದರೆ ನೀಲ್, ಭಾವುಕ ಕತೆಯನ್ನು ಕಟ್ಟಿಕೊಡಲು ತಯಾರಾಗಿದ್ದಾರೆ.

ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ಜಾನ್ಹವಿ ಕಪೂರ್. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾಕ್ಕೆ ಹಾಲಿವುಡ್​ನ ಆಕ್ಷನ್ ಕೊರಿಯೋಗ್ರಾಫರ್ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಬಳಿಕ ಹೃತಿಕ್ ರೋಷನ್ ಜೊತೆಗೆ ಹೊಸ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಆ ಸಿನಿಮಾವನ್ನು ಬಾಲಿವುಡ್​ನ ಆಕ್ಷನ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಬಳಿಕವಷ್ಟೆ ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಕಾಂಬಿನೇಷನ್ ಸಿನಿಮಾ ಪ್ರಾರಂಭವಾಗಲಿದೆ. ಆ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ