JR NTR: ಅಮೆರಿಕದಲ್ಲಿ ಜೂ.ಎನ್​ಟಿಆರ್​​ನ​​ ಭೇಟಿ ಮಾಡಲು ಫ್ಯಾನ್ಸ್ ಮುತ್ತಿಗೆ; ವಿಡಿಯೋ ವೈರಲ್

ಗೋಲ್ಡನ್ ಗ್ಲೋಬ್ ಅವಾರ್ಡ್​​ ಜನವರಿ 11ರಂದು ನಡೆಯುತ್ತಿದೆ. ಎರಡು ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಿದೆ. ಗೋಲ್ಡನ್ ಗ್ಲೋಬ್ ಅವಾರ್ಡ್ಸ್​​ ಕಾರ್ಯಕ್ರಮದಲ್ಲಿ ಜೂ.ಎನ್​ಟಿಆರ್ ಭಾಗಿ ಆಗಲಿದ್ದಾರೆ.

JR NTR: ಅಮೆರಿಕದಲ್ಲಿ ಜೂ.ಎನ್​ಟಿಆರ್​​ನ​​ ಭೇಟಿ ಮಾಡಲು ಫ್ಯಾನ್ಸ್ ಮುತ್ತಿಗೆ; ವಿಡಿಯೋ ವೈರಲ್
ಅಮೆರಿಕದಲ್ಲಿ ಜೂ.ಎನ್​ಟಿಆರ್ ಕಾಣಿಸಿದ್ದು ಹೀಗೆ
Edited By:

Updated on: Jan 10, 2023 | 12:00 PM

ಎಸ್​​.ಎಸ್​.ರಾಜಮೌಳಿ (SS Rajamouli) ನಿರ್ದೇಶನದ ‘ಆರ್​​ಆರ್​ಆರ್​’ ಸಿನಿಮಾ 2022ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಈ ಚಿತ್ರ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ರಾಜಮೌಳಿ ಅವರು ತಮ್ಮ ಕಸುಬನ್ನು ತೋರಿಸಿದ್ದಾರೆ. ಈ ಚಿತ್ರ ಈಗ ಆಸ್ಕರ್​ ರೇಸ್​ನಲ್ಲಿದೆ. ಭಾರತದ ಈ ಚಿತ್ರಕ್ಕೆ ಆಸ್ಕರ್ ಸಿಗಲಿ ಎಂದು ಎಲ್ಲರೂ ಕೋರಿಕೊಳ್ಳುತ್ತಿದ್ದಾರೆ. ಸದ್ಯ ರಾಜಮೌಳಿ ಹಾಗೂ ಜೂ.ಎನ್​ಟಿಆರ್ (JR. NTR) ವಿದೇಶದಲ್ಲಿದ್ದಾರೆ. ಅಮೆರಿಕದ ಲಾಸ್ ಎಂಜಲೀಸ್​ನಲ್ಲಿ ಜೂ.ಎನ್​ಟಿಆರ್​ ಅವರನ್ನು ಭೇಟಿ ಮಾಡಲು ಫ್ಯಾನ್ಸ್ ಮುತ್ತಿದ್ದಾರೆ.

ಗೋಲ್ಡನ್ ಗ್ಲೋಬ್ ಅವಾರ್ಡ್​​ ಜನವರಿ 11ರಂದು ನಡೆಯುತ್ತಿದೆ. ಎರಡು ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಿದೆ. ಗೋಲ್ಡನ್ ಗ್ಲೋಬ್ ಅವಾರ್ಡ್ಸ್​​ ಕಾರ್ಯಕ್ರಮದಲ್ಲಿ ಜೂ.ಎನ್​ಟಿಆರ್ ಭಾಗಿ ಆಗಲಿದ್ದಾರೆ. ಅದಕ್ಕೂ ಮುನ್ನ ಲಾಸ್ ಎಂಜಲೀಸ್​ನ ಜನಪ್ರಿಯ ಚೈನೀಸ್ ಥಿಯೇಟರ್​ಗೆ ಜೂ.ಎನ್​ಟಿಆರ್ ಭೇಟಿ ಕೊಟ್ಟಿದ್ದರು. ಈ ವೇಳೆ ಅವರನ್ನು ಫ್ಯಾನ್ಸ್ ಮುತ್ತಿದ್ದಾರೆ.

‘ಆರ್​ಆರ್​​ಆರ್​ಗೆ ಆಸ್ಕರ್ ಸಿಗಲಿದೆ’

‘ಆರ್​ಆರ್​ಆರ್​’ ಚಿತ್ರಕ್ಕೆ ಆಸ್ಕರ್ ಸಿಗಲಿದೆ ಎಂದು ಹಾಲಿವುಡ್ ನಿರ್ಮಾಪಕ ಜೇಸನ್ ಬ್ಲಮ್ ಅವರು ಭವಿಷ್ಯ ನುಡಿದಿದ್ದಾರೆ. ಹಾಲಿವುಡ್​ನ ಬ್ಲಮ್​ಹೌಸ್​ ಸ್ಟುಡಿಯೋನ ಜೇಸನ್ ನಡೆಸುತ್ತಿದ್ದಾರೆ. ‘ಗೆಟ್​ ಔಟ್​’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದು, ಈ ಸಿನಿಮಾ ಆಸ್ಕರ್ ರೇಸ್​ನಲ್ಲಿದೆ. ಇದು ಹಾರರ್ ಸಿನಿಮಾ. ‘ಈ ವರ್ಷದ ಆಸ್ಕರ್​ ಸಮಾರಂಭದಲ್ಲಿ ‘ಆರ್​ಆರ್​ಆರ್​’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಗಲಿದೆ. ದಯವಿಟ್ಟು ಇದನ್ನು ಬರೆದಿಟ್ಟುಕೊಳ್ಳಿ’ ಎಂದಿದ್ದಾರೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಆರ್​ಆರ್​ಆರ್​’ ಸಿನಿಮಾದಲ್ಲಿ ಜೂ.ಎನ್​ಟಿಆರ್​, ರಾಮ್ ಚರಣ್​ ಅಜಯ್​ ದೇವಗನ್​, ಆಲಿಯಾ ಭಟ್, ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ. ರಾಜಮೌಳಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರು ಸದ್ಯ ವಿದೇಶದಲ್ಲಿದ್ದಾರೆ. ವಿದೇಶದ ನಾನಾ ಸಿನಿಮೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.

ಹೊಸ ಸಿನಿಮಾಗೆ ಸ್ಕ್ರಿಪ್ಟ್ ಫೈನಲ್ ಮಾಡಿದ ರಾಜಮೌಳಿ

‘ಆರ್​ಆರ್​​ಆರ್​’ ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದಿದೆ. ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಮಹೇಶ್ ಬಾಬು ಜತೆ ರಾಜಮೌಳಿ ಸಿನಿಮಾ ಮಾಡುವವರಿದ್ದಾರೆ. ಅದಕ್ಕೂ ಮೊದಲು ಮಹೇಶ್ ಬಾಬು ಅವರು ತ್ರಿವಿಕ್ರಂ ಶ್ರೀನಿವಾಸ್ ಜತೆ ಒಪ್ಪಿಕೊಂಡ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಈಗ ರಾಜಮೌಳಿ ಅವರು ಸ್ಕ್ರಿಪ್ಟ್ ಫೈನಲ್ ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಆರ್​ಆರ್​​ಆರ್’ ಚಿತ್ರಕ್ಕೆ ಸೀಕ್ವೆಲ್ ಬರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ರಾಜಮೌಳಿ ಅವರು ಸ್ಕ್ರಿಪ್ಟ್ ಪೂರ್ಣಗೊಳಿಸಿರುವುದು ‘ಆರ್​ಆರ್​ಆರ್​’ ಸೀಕ್ವೆಲ್​ಗೋ ಅಥವಾ ಮಹೇಶ್ ಬಾಬು ಜತೆಗೆ ಮಾಡಲಿರುವ ಸಿನಿಮಾಗೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Tue, 10 January 23