ಕೋರ್ಟ್ ಕಟಕಟೆ ಏರಿದ ನಟ ಜೂನಿಯರ್ ಎನ್​ಟಿಆರ್​; ವಿಡಿಯೋ ವೈರಲ್

ಕಮರ್ಷಿಯಲ್ ಶೂಟ್​ನಲ್ಲಿ ಜೂನಿಯರ್ ಎನ್​ಟಿಆರ್​ ಅವರು ಭಾಗಿ ಆಗಿದ್ದಾರೆ. ಇದರಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕಟಕಟೆ ಮಾದರಿಯ ಜಾಗದಲ್ಲಿ ನಿಂತು ಕ್ಯಾಮೆರಾ ಎದುರಿಸಿದ್ದಾರೆ.

ಕೋರ್ಟ್ ಕಟಕಟೆ ಏರಿದ ನಟ ಜೂನಿಯರ್ ಎನ್​ಟಿಆರ್​; ವಿಡಿಯೋ ವೈರಲ್
ಜೂನಿಯರ್ ಎನ್​ಟಿಆರ್
TV9kannada Web Team

| Edited By: Rajesh Duggumane

Nov 23, 2022 | 2:35 PM

ನಟ ಜೂನಿಯರ್ ಎನ್​ಟಿಆರ್ (Jr. NTR) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವರ್ಷ ತೆರೆಗೆ ಬಂದ ‘ಆರ್​ಆರ್​ಆರ್​’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರದಿಂದ ವಿಶ್ವ ಮಟ್ಟದಲ್ಲಿ ಅವರಿಗಿದ್ದ ಖ್ಯಾತಿ ದ್ವಿಗುಣ ಆಗಿದೆ. ಈಗ ಜೂನಿಯರ್ ಎನ್​ಟಿಆರ್ ಅವರು ಕಟಕಟೆ ಎದುರು ನಿಂತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಅವರು ಈ ರೀತಿ ಕಟಕಟೆ ಏರಿದ್ದು ಕಮರ್ಷಿಯಲ್ ಶೂಟ್​ಗೋಸ್ಕರ.

ಕಮರ್ಷಿಯಲ್ ಶೂಟ್​ನಲ್ಲಿ ಜೂನಿಯರ್ ಎನ್​ಟಿಆರ್​ ಅವರು ಭಾಗಿ ಆಗಿದ್ದಾರೆ. ಇದರಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕಟಕಟೆ ಮಾದರಿಯ ಜಾಗದಲ್ಲಿ ನಿಂತು ಕ್ಯಾಮೆರಾ ಎದುರಿಸಿದ್ದಾರೆ. ಕಮರ್ಷಿಯಲ್ ಶೂಟ್​ನ ಮೇಕಿಂಗ್ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸೆಲೆಬ್ರಿಟಿ ಹೇರ್​ಸ್ಟೈಲಿಸ್ಟ್​ ಆಲಿಮ್ ಹಕೀಮ್ ಕೂಡ ಈ ಶೂಟ್​ನಲ್ಲಿ ಭಾಗಿ ಆಗಿದ್ದಾರೆ. ಜ್ಯೂ.ಎನ್​ಟಿಆರ್​ಗೆ ಅವರೇ ಹೇರ್​ ಸ್ಟೈಲ್ ಮಾಡಿದ್ದಾರೆ.

ಜ್ಯೂ.ಎನ್​ಟಿಆರ್​ ಕೈಯಲ್ಲಿ ಎರಡು ದೊಡ್ಡ ಬಜೆಟ್ ಚಿತ್ರಗಳಿವೆ. ಕೊರಟಾಲ ಶಿವ ಅವರು ಜ್ಯೂ.ಎನ್​ಟಿಆರ್​ 30ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಕಷ್ಟು ಮಾಸ್ ರೀತಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎನ್ನಲಾಗಿದೆ. ಅನಿರುದ್ಧ್​ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳಲಿದೆ. 2016ರಲ್ಲಿ ತೆರೆಗೆ ಬಂದ ‘ಜನತಾ ಗ್ಯಾರೇಜ್​’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಕೊರಟಾಲ ಶಿವ ಒಟ್ಟಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: Jr NTR: ಜೂನಿಯರ್​ ಎನ್​ಟಿಆರ್​ ಬೆಂಗಳೂರಿಗೆ ಬಂದುಹೋದ ಬೆನ್ನಲ್ಲೇ ಕೇಳಿಬಂತು ಹೊಸ ಸಿನಿಮಾ ಸುದ್ದಿ

ಇದನ್ನೂ ಓದಿ

ಜೂನಿಯರ್ ಎನ್​ಟಿಆರ್ ಅವರ 31ನೇ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾಗೆ ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಜೂನಿಯರ್ ಎನ್​ಟಿಆರ್​ ಅವರ 30ನೇ ಸಿನಿಮಾ ಪೂರ್ಣಗೊಂಡ ಬಳಿಕ ಈ ಚಿತ್ರದ ಕೆಲಸಗಳು ಆರಂಭ ಆಗಲಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada