Jr NTR: ಜೂನಿಯರ್​ ಎನ್​ಟಿಆರ್​ ಮನೆಯಲ್ಲಿ ಅಪ್ಪು ಫೋಟೋ; ಕರುನಾಡ ಗೆಳೆಯನಿಗೆ ತೆಲುಗು​ ನಟನ ಗೌರವ

TV9kannada Web Team

TV9kannada Web Team | Edited By: Madan Kumar

Updated on: Oct 30, 2022 | 3:56 PM

Karnataka Ratna | Puneeth Rajkumar: ಜೂನಿಯರ್​ ಎನ್​ಟಿಆರ್​ ಅವರ ಮನಸ್ಸಿನಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಎಷ್ಟು ಗೌರವ ಇದೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಆಗಿದೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ವೈರಲ್​ ಆಗಿವೆ.

Jr NTR: ಜೂನಿಯರ್​ ಎನ್​ಟಿಆರ್​ ಮನೆಯಲ್ಲಿ ಅಪ್ಪು ಫೋಟೋ; ಕರುನಾಡ ಗೆಳೆಯನಿಗೆ ತೆಲುಗು​ ನಟನ ಗೌರವ
ಪುನೀತ್​, ಎನ್​ಟಿಆರ್

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಸ್ನೇಹಜೀವಿ ಆಗಿದ್ದರು. ಕರುನಾಡಿನಲ್ಲಿ ಮಾತ್ರವಲ್ಲದೇ ಪರಭಾಷೆಯ ಅನೇಕ ಸ್ಟಾರ್​ ಕಲಾವಿದರ ಜೊತೆಗೆ ಅವರಿಗೆ ಆಪ್ತತೆ ಇತ್ತು. ಟಾಲಿವುಡ್​ (Tollywood) ನಟ ಜೂನಿಯರ್​ ಎನ್​ಟಿಆರ್​ ಮತ್ತು ಪುನೀತ್​ ರಾಜ್​ಕುಮಾರ್​ ಅವರು ಸ್ನೇಹಿತರಾಗಿದ್ದರು. ಅಪ್ಪು ನಟಿಸಿದ್ದ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯ.. ಗೆಳೆಯ..’ ಹಾಡಿಗೆ ಜೂನಿಯರ್​ ಎನ್​ಟಿಆರ್​ (Jr NTR) ಧ್ವನಿ ನೀಡಿದ್ದರು. ಆದರೆ ಇಂದು ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ಜೂನಿಯರ್​ ಎನ್​ಟಿಆರ್​ ಅವರ ಮನದಲ್ಲೂ ಈ ಬಗ್ಗೆ ನೋವಿದೆ. ಅವರ ಮನೆಯಲ್ಲಿ ಪುನೀತ್​ ರಾಜ್​ಕುಮಾರ್​ ಫೋಟೋ ರಾರಾಜಿಸುತ್ತಿದೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿವೆ.

ಜೂನಿಯರ್​ ಎನ್​ಟಿಆರ್​ ಅವರದ್ದು ಫಿಲ್ಮಿ ಕುಟುಂಬ. ಅವರ ತಾತ ನಂದಮೂರಿ ತಾರಕ ರಾಮ ರಾವ್​ ಅವರು ಸೂಪರ್​ ಸ್ಟಾರ್​ ಆಗಿದ್ದರು. ತಾತನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಜೂನಿಯರ್​ ಎನ್​ಟಿಆರ್​ ಅವರು ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರಕ್ಕೂ ಜಾಗ ನೀಡಿದ್ದಾರೆ. ಅವರ ಮನಸ್ಸಿನಲ್ಲಿ ಅಪ್ಪು ಬಗ್ಗೆ ಎಷ್ಟು ಗೌರವ ಇದೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಆಗಿದೆ.

ತಾಜಾ ಸುದ್ದಿ

‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎನ್​ಟಿಆರ್​ ಅತಿಥಿ:

ನವೆಂಬರ್ 1ರಂದು ಪುನೀತ್​ ರಾಜ್​ಕುಮಾರ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಕೆ ಆಗುತ್ತಿದೆ. ಈ ಸಮಾರಂಭಕ್ಕೆ ಸಾಕ್ಷಿಯಾಗಲು ನಟ ಜೂನಿಯರ್​ ಎನ್​ಟಿಆರ್​ ಹಾಗೂ ರಜನಿಕಾಂತ್ ಅವರು ಆಗಮಿಸುವುದು ಖಚಿತ ಆಗಿದೆ. ಕರ್ನಾಟಕ ಸರ್ಕಾರದಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ.

ಅಪ್ಪು​ ಪರವಾಗಿ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಸಾಕ್ಷಿ ಆಗಲಿದ್ದಾರೆ. ಈ ಕ್ಷಣವನ್ನು ಸಂಭ್ರಮಿಸಲು ಅಪ್ಪು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada