ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ

|

Updated on: Aug 17, 2024 | 12:53 PM

ಜೂ ಎನ್​ಟಿಆರ್ ನಟಿಸಲಿರುವ ‘ದೇವರ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಖಡಕ್ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ
Follow us on

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ದೊಡ್ಡ ನಿರೀಕ್ಷೆಗಳನ್ನು ಮೂಡಿಸಿರುವ ದಕ್ಷಿಣದ ಸಿನಿಮಾಗಳಲ್ಲಿ ಒಂದು. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ ಎನ್​ಟಿಆರ್, ‘RRR’ ಬಳಿಕ ನಟಿಸುತ್ತಿರುವ ಮೊದಲ ಸಿನಿಮಾ ಇದು. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸಿನಿಮಾಕ್ಕಾಗಿ ಭಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ. ವಿದೇಶಿ ತಂತ್ರಜ್ಞರನ್ನು ಕರೆಸಿ ದುಡಿಸಿಕೊಳ್ಳಲಾಗಿದೆ. ಸಿನಿಮಾದ ಕೆಲವು ಪೋಸ್ಟರ್, ಮೇಕಿಂಗ್ ದೃಶ್ಯಗಳು ಬಿಡುಗಡೆ ಆಗಿವೆ. ಕೆಲವು ದಿನಗಳ ಹಿಂದಷ್ಟೆ ಜೂ ಎನ್​ಟಿಆರ್-ಜಾನ್ಹವಿಯ ಹಾಡಿನ ಬಿಟ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ವಿಲನ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಈವರೆಗೆ ಬಿಡುಗಡೆ ಆಗಿರುವ ಅಪ್​ಡೇಟ್​ಗಳಲ್ಲಿಯೇ ಅದ್ಭುತವಾಗಿದೆ.

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸೈಫ್ ಪಾತ್ರದ ಹೆಸರು ಭೈರ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ, ಕುಸ್ತಿ ಪಂದ್ಯಾವಳಿಯ ಅಖಾಡದಲ್ಲಿ ಭಾರಿ ದೇಹಾಕಾರದ, ಭಾರಿ ಜನಬೆಂಬಲ ಹೊಂದಿರುವ ವ್ಯಕ್ತಿಯೊಬ್ಬನನ್ನು ಸೈಫ್ ಅಲಿ ಖಾನ್ ಸುಲಭವಾಗಿ ಹೊಡೆದು ಉರುಳಿಸುವ ದೃಶ್ಯವಿದೆ. ಮಾತ್ರವಲ್ಲ ಭೈರನ ಸ್ಟೈಲ್, ಆತನ ಬಾಡಿ ಲಾಂಗ್ವೇಜ್, ಕ್ರೂರತನವನ್ನು ಪ್ರದರ್ಶಿಸುವ ಕೆಲವು ದೃಶ್ಯಗಳನ್ನು ಸಹ ಟೀಸರ್​ನಲ್ಲಿ ಸೇರಿಸಲಾಗಿದೆ. ‘ದೇವರ’ ಪಾತ್ರಕ್ಕೆ ತಕ್ಕದಾದ ಎದುರಾಳಿ ಎನಿಸುವಂತೆ ಸೈಫ್ ಅಲಿ ಖಾನ್​ರ ಪಾತ್ರದ ಪರಿಚಯ ಮಾಡಿಸಲಾಗಿದೆ.

ಇದನ್ನೂ ಓದಿ:ಅವಾರ್ಡ್​ ಫಂಕ್ಷನ್​ಗಳ ಬಗ್ಗೆ ಸೈಫ್ ಅಲಿ ಖಾನ್ ಟೀಕೆ: ಹೇಳಿದ್ದೇನು?

‘ದೇವರ’ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಎರಡೂ ಭಾಗಗಳಲ್ಲಿ ಸೈಫ್ ಅಲಿ ಖಾನ್ ವಿಲನ್ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವುದು ಸಿನಿಮಾದ ಮೊದಲ ಭಾಗದ ಸಣ್ಣ ಟೀಸರ್ ಮಾತ್ರ. ಟೀಸರ್​ನಲ್ಲಿ ಸೈಫ್ ಅಲಿ ಖಾನ್ ಪಾತ್ರವನ್ನು ಒಳ್ಳೆಯ ಫೈಟರ್ ಆಗಿ, ಚಾಲಾಕಿಯಾಗಿ ಜೊತೆಗೆ ಕ್ರೂರಿಯಾಗಿಯೂ ತೋರಿಸಲಾಗಿದೆ. ‘ದೇವರ’ ಮುಖ್ಯ ಪಾತ್ರಕ್ಕೆ ಒಳ್ಳೆಯ ವಿಲನ್ ಆಗುವ ಎಲ್ಲ ಲಕ್ಷಣವೂ ಸೈಫ್ ಪಾತ್ರದಲ್ಲಿ ಎದ್ದು ತೋರುತ್ತಿದೆ.

‘ದೇವರ’ ಸಿನಿಮಾ ಸೆಪ್ಟೆಂಬರ್ 9 ರಂದು ದೇಶದಾದ್ಯಂತ ಒಟ್ಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಬೇರೆ ಕೆಲವು ನಟಿಯರು ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎನ್​ಟಿಆರ್ ಸಹೋದರ ಬಂಡವಾಳ ಹೂಡಿದ್ದು, ಜೂ ಎನ್​ಟಿಆರ್ ಸಹ ನಿರ್ಮಾಣ ಮಾಡಿದ್ದಾರೆ. ಜೂ ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ. ‘ದೇವರ’ ಜೊತೆಗೆ ಹಿಂದಿಯ ‘ವಾರ್ 2’ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ಸಹ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ