ತೆಲುಗಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳಲ್ಲಿ ಹೊಂದಿರುವ ಕೆಲವೇ ನಟರಲ್ಲಿ ಜೂ ಎನ್ಟಿಆರ್ ಸಹ ಒಬ್ಬರು. ಜೂ ಎನ್ಟಿಆರ್ ಅಭಿಮಾನಿಗಳು ಬರೀ ಅಭಿಮಾನಿಗಳಲ್ಲ, ವೀರಾಭಿಮಾನಿಗಳು. ಇದೀಗ ಕೆಲವೇ ದಿನಗಳಲ್ಲಿ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಲಿದೆ. ಅಭಿಮಾನಿಗಳು, ಸಿನಿಮಾವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ಜೂ ಎನ್ಟಿಆರ್ ಅಭಿಮಾನಿಯೊಬ್ಬ, ‘ದೇವರ’ ಸಿನಿಮಾ ನೋಡಬೇಕೆಂಬ ಕೊನೆ ಆಸೆ ವ್ಯಕ್ತಪಡಿಸಿದ್ದಾನೆ. ಆ ಅಭಿಮಾನಿಯೊಟ್ಟಿಗೆ ಸ್ವತಃ ‘ದೇವರ’ ಮಾತನಾಡಿದ್ದಾನೆ.
ತಿರುಪತಿಯ ಕೌಶಿಕ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಶಿಕ್ ಜೀವ ಸಹಿತ ಉಳಿಯುವುದು ಅನುಮಾನ ಎನ್ನಲಾಗುತ್ತಿದ್ದು, ಆತ, ತನ್ನ ಪೋಷಕರ ಬಳಿ, ‘ದೇವರ’ ಸಿನಿಮಾ ಬಿಡುಗಡೆ ಆಗುವವರೆಗೆ ನನ್ನನ್ನು ಉಳಿಸಿಕೊಳ್ಳಿ, ಆ ಸಿನಿಮಾ ನೋಡಿದ ಬಳಿಕ ಸಾಯುತ್ತೇನೆ ಎಂದು ಮನವಿ ಮಾಡಿದ್ದಾನೆ. ಈ ವಿಷಯವನ್ನು ಕೌಶಿಕ್ನ ಪೋಷಕರು ಮಾಧ್ಯಮಗಳ ಬಳಿ ಹೇಳಿದ್ದರು. ಈ ವಿಷಯ ಜೂ ಎನ್ಟಿಆರ್ಗೆ ತಲುಪಬೇಕೆಂದು ಸುದ್ದಿಗೋಷ್ಠಿ ಮಾಡುತ್ತಿರುವುದಾಗಿ ಹೇಳಿದ್ದರು.
ಇದನ್ನೂ ಓದಿ:ಮತ್ತೆ ಪ್ರಾರಂಭ ಕಪಿಲ್ ಶೋ, ಜೂ ಎನ್ಟಿಆರ್ ಸೇರಿ ಹಲವು ಅತಿಥಿಗಳು, ಇಲ್ಲಿದೆ ಪಟ್ಟಿ
ಇದೀಗ ಸ್ವತಃ ಜೂ ಎನ್ಟಿಆರ್, ಸಾವಿನ ಮನೆಯ ಬಾಗಿಲು ಬಡಿಯುತ್ತಿರುವ ತನ್ನ ಅಭಿಮಾನಿ ಕೌಶಿಕ್ ಜೊತೆ ಮಾತನಾಡಿದ್ದಾರೆ. ಕೌಶಿಕ್ಗೆ ವಿಡಿಯೋ ಕಾಲ್ ಮಾಡಿದ್ದ ಜೂ ಎನ್ಟಿಆರ್, ಕೌಶಿಕ್ಗೆ ಧೈರ್ಯ ಹೇಳಿದ್ದಾರೆ. ಅವರ ತಾಯಿಯೊಟ್ಟಿಗೂ ಸಹ ಮಾತನಾಡಿದ್ದಾರೆ. ಕೌಶಿಕ್ಗೆ ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿದ್ದು, ವೈದ್ಯರು ಅನುಮತಿ ನೀಡಿದರೆ ಸಿನಿಮಾ ತೋರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಜೂ ಎನ್ಟಿಆರ್, ಕೌಶಿಕ್ ಜೊತೆಗೆ ಮಾತನಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಎರಡು ಶೇಡ್ಗಳಲ್ಲಿ ಜೂ ಎನ್ಟಿಆರ್ ನಟಿಸಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಜೂ ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್. ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ, ಸೈಫ್ ಅಲಿ ಖಾನ್ ವಿಲನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Sat, 14 September 24