ಗಂಡನಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜ್ಯೋತಿಕಾ: ಈಗ 30 ಪಟ್ಟು ಕಡಿಮೆ

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಜ್ಯೋತಿಕಾ ಹಾಗೂ ನಟ ಸೂರ್ಯ ಅವರು ತಮ್ಮ ಹಳೆಯ ದಿನಗಳ ನೆನಪುಗಳನ್ನು ಹಾಗೂ ತಮ್ಮ ವೈವಾಹಿಕ ಜೀವನದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಜ್ಯೋತಿಕಾ ಅವರು ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದರು.

ಗಂಡನಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜ್ಯೋತಿಕಾ: ಈಗ 30 ಪಟ್ಟು ಕಡಿಮೆ
Jyotika, Suriya

Updated on: Aug 05, 2026 | 5:02 PM

ದಕ್ಷಿಣ ಭಾರತದ ಸೂಪರ್‌ಹಿಟ್ ಜೋಡಿಗಳಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ (Jyotika) ದಂಪತಿ ಪ್ರಮುಖರು. 1999ರಲ್ಲಿ ತೆರೆಕಂಡ ‘ಪೂವೆಲ್ಲಾಂ ಕೇಟ್ಟುಪ್ಪಾರ್’ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ, 2003ರ ‘ಕಾಖಾ ಕಾಖಾ’ ಚಿತ್ರದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. 2006ರ ಸೆಪ್ಟೆಂಬರ್ 11ರಂದು ಚೆನ್ನೈನಲ್ಲಿ ವಿವಾಹವಾದ ಈ ದಂಪತಿ, ಶೀಘ್ರದಲ್ಲೇ ತಮ್ಮ 20ನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸುಂದರ ದಂಪತಿಗೆ ದಿಯಾ ಎಂಬ ಮಗಳು ಹಾಗೂ ದೇವ್ ಎಂಬ ಮಗನಿದ್ದಾನೆ. ಸೂರ್ಯ (Suriya) ಮತ್ತು ಜ್ಯೋತಿಕಾ ಅವರ ಸಂಭಾವನೆ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಇಲ್ಲಿದೆ.

‘ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದೆ’

2003ರಲ್ಲಿ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಕಾಖಾ ಕಾಖಾ’ ಸಿನಿಮಾ ಸೆಟ್ಟೇರಿದಾಗ ಜ್ಯೋತಿಕಾ ಆಗಲೇ ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿದ್ದರು. ಆ ಸಮಯದಲ್ಲಿ ಜ್ಯೋತಿಕಾ ಅವರು ಸೂರ್ಯ ಅವರಿಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ನಟಿಯೊಬ್ಬಳು ತಮಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರೆ ಪುರುಷ ನಟರಿಗೆ ಅಹಂ ಅಡ್ಡ ಬರುವುದು ಸಹಜ. ಆದರೆ ಸೂರ್ಯ ಅವರಿಗೆ ಆ ರೀತಿಯ ಯಾವುದೇ ಅಹಂ ಇರಲಿಲ್ಲ.

ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ನಕ್ಕ ಜ್ಯೋತಿಕಾ, ‘ಆಗ ನಾನು ಅವರಿಗಿಂತ 3 ಪಟ್ಟು ಹೆಚ್ಚು ಗಳಿಸುತ್ತಿದ್ದೆ, ಆದರೆ ಈಗ ನನ್ನ ಸಂಭಾವನೆ ಅವರ ಗಳಿಕೆಗಿಂತ 30 ಪಟ್ಟು ಕಡಿಮೆಯಾಗಿದೆ’ ಎಂದು ಹೇಳಿದರು. ಈಗಲೂ ಜ್ಯೋತಿಕಾ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಒಟಿಟಿಯಲ್ಲೂ ಅವರು ಮಿಂಚುತ್ತಿದ್ದಾರೆ.

ಪತಿಯನ್ನು ಹೊಗಳಿದ ಜ್ಯೋತಿಕಾ:

ಸೂರ್ಯ ಅವರ ಸರಳತೆ ಮತ್ತು ಸಮಾನತೆಯ ಮನೋಭಾವವನ್ನು ಮೆಚ್ಚಿಕೊಂಡ ಜ್ಯೋತಿಕಾ, ‘ಸೂರ್ಯ ಒಬ್ಬ ನಟನಾಗಿ ಎಲ್ಲರಿಗೂ ಗೊತ್ತು. ಆದರೆ ಒಬ್ಬ ಪತಿಯಾಗಿ, ಗಂಡಸಾಗಿ ಅವರು ಅದ್ಭುತ ವ್ಯಕ್ತಿ. ಅವರ ಮನಸ್ಸಿನಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲ, ಸಮಾನತೆಯಿದೆ. ಅದು ವ್ಯಕ್ತಿಯ ಒಳಗಿನಿಂದಲೇ ಬರಬೇಕು. ಮನೆಯಲ್ಲೂ ನಾವಿಬ್ಬರೂ ಸಮಾನರು. ಅವರು ನನ್ನನ್ನು ಸದಾ ತಮಗೆ ಸಮಾನವಾಗಿ ಕಾಣುತ್ತಾರೆ’ ಎಂದು ಪತಿಯ ಗುಣವನ್ನು ಹೊಗಳಿದರು.

ಇದನ್ನೂ ಓದಿ: 47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್

ಪ್ರೀತಿಯ ಬಗ್ಗೆ ಸೂರ್ಯ ನೀಡಿದ ಮಹತ್ವದ ಸಲಹೆ

ಇತ್ತೀಚೆಗೆ ತಮ್ಮ ಮುಂಬರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಸೂರ್ಯ, ‘ಮದುವೆಯಾದ ತಕ್ಷಣ ಪ್ರೀತಿ ಮುಗಿದುಹೋಗಬಾರದು. 20 ವರ್ಷಗಳಾದರೂ ಪ್ರತಿದಿನ ಪ್ರೀತಿಸುತ್ತಿರಬೇಕು. ವಯಸ್ಸಾದಂತೆ ನಮ್ಮ ಆಲೋಚನೆಗಳು, ಆದ್ಯತೆಗಳು ಬದಲಾಗಬಹುದು. ಆದರೆ ಪರಸ್ಪರ ಗೌರವ ಮತ್ತು ಪ್ರೀತಿ ಎಂದಿಗೂ ಬದಲಾಗಬಾರದು. ಪ್ರೀತಿಯ ವಿಷಯದಲ್ಲಿ ನಾನು ನೀಡುವ ಏಕೈಕ ಸಲಹೆ ಎಂದರೆ ಪರಸ್ಪರ ಗೌರವಿಸುವುದು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us