ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಈಗಲೂ ಅಷ್ಟೇ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ಮದುವೆ ಬಳಿಕ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನಿಲ್ಲಿಸಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಹಾಗೆ ಆಗಲಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಈಗ ಅವರು ನಟಿಸಿರುವ ‘ಸತ್ಯಭಾಮಾ’ ಸಿನಿಮಾ (Sathyabhama Movie) ತಂಡದಿಂದ ಒಂದು ಅಪ್ಡೇಟ್ ಸಿಕ್ಕಿದೆ. ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಅದರ ಜೊತೆಗೆ ಒಂದು ಮಾಸ್ ಟೀಸರ್ (Sathyabhama Teaser) ಕೂಡ ಬಿಡುಗಡೆ ಆಗಿದೆ.
‘ಸತ್ಯಭಾಮಾ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಅವರು ಹಿಂದೆಂದಿಗಿಂತಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರ ಇದೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಅವರು ಗನ್ ಹಿಡಿದು ಅಬ್ಬರಿಸಿದ್ದಾರೆ. ಅವರ ಗತ್ತು ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾದಿದ್ದಾರೆ.
Gear up to celebrate ‘The Queen of Masses’ @MSKajalAggarwal like never before on the big screens ❤️🔥❤️🔥#Satyabhama in theatres worldwide on May 17th 🎯
▶️ https://t.co/TbBMJ0g6QY@MSKajalAggarwal @Naveenc212 @AurumArtsoffl @sumanchikkala @sashitikka @SriCharanpakala @bobytikka… pic.twitter.com/svK00yfv0y
— Aurum Arts Official (@AurumArtsOffl) April 22, 2024
ಟೀಸರ್ ಮೂಲಕ ‘ಸತ್ಯಭಾಮಾ’ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸಲಾಗಿದೆ. ಈ ಸಿನಿಮಾ ಮೇ 17ರಂದು ಬಿಡುಗಡೆ ಆಗಲಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಸಿನಿಮಾದಲ್ಲಿ ಎಸಿಪಿ ಸತ್ಯಭಾಮಾ ಎಂಬ ಪಾತ್ರಕ್ಕೆ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್
ವಿಶೇಷ ಏನೆಂದರೆ, ಈ ಟೀಸರ್ ಹಂಚಿಕೊಂಡಿರುವ ನಿರ್ಮಾಪಕರು ಕಾಜಲ್ಗೆ ಒಂದು ಬಿರುದು ನೀಡಿದ್ದಾರೆ. ಕಾಜಲ್ ಅವರನ್ನು ‘ಕ್ವೀನ್ ಆಫ್ ಮಾಸಸ್’ ಎಂದು ಕರೆಯಲಾಗಿದೆ. ಈ ಬಿರುದು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಇದಲ್ಲದೇ ಕಾಜಲ್ ಅಗರ್ವಾಲ್ ಅವರು ‘ಇಂಡಿಯನ್ 2’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಒಟ್ಟಿನಲ್ಲಿ, ‘ಸತ್ಯಭಾಮಾ’, ‘ಇಂಡಿಯನ್ 2’ ಸಿನಿಮಾಗಳ ಮೂಲಕ ಅವರ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.