ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಇಷ್ಟೊಂದು ಹಣ ಖರ್ಚಾಗಿದ್ದು ಏಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಈ ಪಟ್ಟಿಯಲ್ಲಿ ಈ ಚಿತ್ರದಲ್ಲಿ ಬಳಕೆಯಾದ ಕಾರು ಕೂಡ ಸೇರಿದೆ. ವಿಶೇಷವಾಗಿ ತಯಾರಿಸಿದ ಈ ಕಾರು ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಕಾರಿನ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಪ್ರಭಾಸ್ ಅವರು ‘ಬುಜ್ಜಿ’ನ ಪರಿಚಯಿಸಿದ್ದರು. ಬುಜ್ಜಿ ಎಂದರೆ ಕಾರು. ಈ ಸಿನಿಮಾದಲ್ಲಿ ಬುಜ್ಜಿ ಪ್ರಭಾಸ್ನ ಗೆಳೆಯನಂತೆ ಇರಲಿದೆ. ಈ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಕಾರನ್ನು ಭಾರತದ ಸಂಸ್ಥೆ ಮಹಿಂದ್ರಾ ಹಾಗೂ ಜಯೇಮ್ ಆಟೋಮೇಟಿವ್ ಕೊಯಿಮತ್ತೂರಿನಲ್ಲಿ ಸಿದ್ಧಪಡಿಸಿದೆ. ಇದು ಫ್ಯೂಚರ್ ಕಾರು ಎನ್ನುವ ಕಾನ್ಸೆಪ್ಟ್ನಲ್ಲಿ ಸಿದ್ಧಪಡಿಸಲಾಗಿದೆ. ಸಾಮಾನ್ಯ ವ್ಯಕ್ತಿಯ ಭುಜಕ್ಕೆ ಈ ಕಾರಿನ ಟೈಯರ್ ಬರುತ್ತದೆ. ಈ ಕಾರಿನ ಉದ್ದ 6070 ಮಿಲಿ ಮೀಟರ್, ಅಗಲ 3380 ಮಿಲಿ ಮೀಟರ್ ಹಾಗೂ ಎತ್ತರ 2186 ಮಿಲಿ ಮೀಟರ್ ಇದೆ.
ಈ ಕಾರಿನ ವೀಲ್ಸ್ ಸಾಕಷ್ಟು ಗಮನ ಸೆಳೆದಿದೆ. ಇದನ್ನು CEAT ಟೈಯರ್ಸ್ನವರು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಈ ಕಾರಿನ ತೂಕ 6 ಟನ್ ಇದೆ. ‘ಕಲ್ಕಿ 2898 ಎಡಿ’ ಚಿತ್ರ ಭವಿಷ್ಯದ ಕಥೆಯನ್ನು ಹೊಂದಿದೆ. ಹೀಗಾಗಿ, ಇದು ಭವಿಷ್ಯದ ಕಾರು ಎನ್ನುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಸಿನಿಮಾದಲ್ಲಿ ಪ್ರಭಾಸ್ ಅವರೇ ತಮ್ಮ ಕೈಯ್ಯಾರೆ ಈ ಕಾರನ್ನು ಸಿದ್ಧಪಡಿಸೋ ರೀತಿಯಲ್ಲಿ ತೋರಿಸಲಾಗಿದೆಯಂತೆ. ಈ ಕಾರಿನ ಟೈಯರ್ಗಳು ಎಲ್ಲಾ ದಿಕ್ಕಿನಲ್ಲೂ ತಿರುಗುತ್ತವೆ.
🚨 For the first time in India, a massive 6 tonne futuristic car was built by Mahindra and Jayem Autmotive for upcoming sci-fi action film @Kalki2898AD
(📹-@autocarindiamag) pic.twitter.com/4YdNF9YzBj
— Indian Tech & Infra (@IndianTechGuide) May 23, 2024
‘ಕಲ್ಕಿ 2898 ಎಡಿ’ ಚಿತ್ರದ ಪ್ರಚಾರಕ್ಕೆ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಾರನ್ನು ಪ್ರಮೋಷನ್ ಮಾಡಲು ತಂಡ ಮುಂದಾಗಿದೆ. ಈ ಕಾರು ಹೆಚ್ಚೆಚ್ಚು ಹೈಲೈಟ್ ಆದರೆ ತಂಡಕ್ಕೆ ಸಹಕಾರಿ ಆಗಲಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಕಾರನ್ನು ಪರಿಚಯಿಸಲಾಗಿದೆ.
ಮಹಿಂದ್ರಾ ಕಂಪನಿಯ ಮಾಲೀಕ ಆನಂದ್ ಮಹಿಂದ್ರಾ ಅವರು ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗ್ ಅಶ್ವಿನ್ ಅವರು ದೊಡ್ಡದಾಗಿ ಆಲೋಚಿಸುತ್ತಾರೆ ಎಂದಿದ್ದಾರೆ. ಕಾರಿನ ವಿಶೇಷತೆಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೆಗೆಟಿವ್ ‘ಬುಜ್ಜಿ’ ಜೊತೆ ಪಾಸಿಟಿವ್ ‘ಭೈರವ’, ಬಿಡುಗಡೆ ಆಯ್ತು ‘ಕಲ್ಕಿ’ ಹೊಸ ಟೀಸರ್
‘ಕಲ್ಕಿ 2898 ಎಡಿ’ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಜೂನ್ 27ರಂದು ರಿಲೀಸ್ ಆಗಲಿದೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Fri, 24 May 24