Updated on: May 24, 2024 | 8:56 AM
ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.
ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.
‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.
ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.
ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.