‘ಕಲ್ಕಿ 2898 ಎಡಿ’ ಸಿನಿಮಾದ (Kalki 2898 AD) ಟ್ರೇಲರ್ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗ್ಗೆ ಇರೋ ನಿರೀಕ್ಷೆ ಹೆಚ್ಚಿದೆ. ಈ ಚಿತ್ರವನ್ನು ತಯಾರಿಸಲು ಯಾಕಿಷ್ಟು ದೀರ್ಘ ಸಮಯ ಹಿಡಿಯಿತು ಎಂಬುದು ಟ್ರೇಲರ್ ನೋಡಿದ ಬಳಿಕ ಮನದಟ್ಟಾಗುತ್ತದೆ. ಎಲ್ಲರೂ ಟ್ರೇಲರ್ ನೋಡಿ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಮೊದಲಾದವರ ಪಾತ್ರದ ಝಲಕ್ ನೀಡಲಾಗಿದೆ.
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಹಾಭಾರತದಿಂದ ಕಥೆ ಆರಂಭ ಆಗುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ‘ಈ ಭೂಮಿಯ ಮೊದಲ ನಗರ ಹಾಗೂ ಕೊನೆಯ ನಗರ ಕಾಶಿ. ಮೇಲೆ ನೀರು ಇರುತ್ತದೆಯಂತೆ. ಭೂಮಿನ ಪೂರ್ತಿ ನಾಶ ಮಾಡಿದರೆ ಎಲ್ಲರೂ ಅಲ್ಲೇ ಇರುತ್ತಾರೆ’ ಎನ್ನುವ ಧ್ವನಿ ಬರುತ್ತದೆ.
𝐓𝐇𝐄 𝐁𝐀𝐓𝐓𝐋𝐄 𝐁𝐄𝐆𝐈𝐍𝐒 𝐍𝐎𝐖 💥
Presenting #Kalki2898ADTrailer to you all!
– https://t.co/McNEh16Nv5
#Kalki2898AD @SrBachchan @ikamalhaasan #Prabhas @deepikapadukone @nagashwin7 @DishPatani @Music_Santhosh @VyjayanthiFilms @Kalki2898AD @saregamaglobal… pic.twitter.com/WogoJqJx9e— Kalki 2898 AD (@Kalki2898AD) June 10, 2024
‘Kalki 2829 AD’ Trailer: Watch Prabhas, Deepika Padukone, Amitabh Bachchan & More Bring Nag Ashwin’s Anticipated Indian Sci-Fi Epic To Life https://t.co/blAP8H8O1R
— Deadline Hollywood (@DEADLINE) June 10, 2024
ಸಿನಿಮಾದ ಗ್ರಾಫಿಕ್ಸ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರ ಸೂಪರ್ ಹೀರೋ ಮಾದರಿಯಲ್ಲಿ ಮೂಡಿ ಬಂದಿದೆ. ಇಲ್ಲಿ ಬರೋ ವಾಹನಗಳು ಗಮನ ಸೆಳೆದಿವೆ. ಸಿನಿಮಾದಲ್ಲಿ ಭರ್ಜರಿ ಫೈಟ್ಗಳನ್ನು ಇಡಲಾಗಿದೆ. ಪ್ರಭಾಸ್ ಅವರು ಭೈರವನಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ‘ಭರವಸೆಯ ಬೆಳಕು’ ಕಲ್ಕಿ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊಸ ಪೋಸ್ಟರ್ ಬಿಡುಗಡೆ
‘ಕಲ್ಕಿ 2898 ಎಡಿ’ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ. ಈ ಚಿತ್ರದ ಗ್ರಾಫಿಕ್ಸ್ಗೆ ಹೆಚ್ಚಿನ ಹಣ ಬಳಕೆ ಆಗಿದೆ. ಥಿಯೇಟರ್ನಲ್ಲಿ ಸಿನಿಮಾ ನೋಡಿದರೆ ಎಲ್ಲರೂ ಥ್ರಿಲ್ ಆಗೋದು ಗ್ಯಾರಂಟಿ ಎಂದು ಅನೇಕರು ಹೇಳಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನ್ ದತ್ ಅವರು ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.