ದಕ್ಷಿಣದ ಸೂಪರ್‌ಸ್ಟಾರ್ ಕಮಲ್ ಹಾಸನ್ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ನಟನೆಯ ಸಿನಿಮಾವೊಂದು ಒಂದು, ಎರಡು ಅಥವಾ 12 ತಿಂಗಳಲ್ಲ ಎರಡು ವರ್ಷಗಳ ಕಾಲ ನಿರಂತರವಾಗಿ ಥಿಯೇಟರ್‌ಗಳಲ್ಲಿ ಓಡಿತ್ತು. ಆ ಚಿತ್ರದ ಹೆಸರು ‘ಏಕ್ ದುಜೆ ಕೆ ಲಿಯೆ’. ಇದು ಹಿಂದಿ ಚಿತ್ರರಂಗದಲ್ಲಿ ಅವರ ಮೊದಲ ಸಿನಿಮಾ ಆಗಿತ್ತು.
1981ರಲ್ಲಿ ರೊಮ್ಯಾಂಟಿಕ್ ಸಿನಿಮಾ ‘ಏಕ್ ದುಜೆ ಕೆ ಲಿಯೆ’ ಬಿಡುಗಡೆಯಾಯಿತು. ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದಾರೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಎಂದು ಸಾಬೀತಾಯಿತು. 10 ಲಕ್ಷ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಕಮಲ್ ಹಾಸನ್ ಜೊತೆಗೆ ರತಿ ಅಗ್ನಿಹೋತ್ರಿ ಮತ್ತು ಮಾಧವಿ ಕೂಡ ‘ಏಕ್ ದುಜೆ ಕೆ ಲಿಯೇ’ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ಈ ಇಬ್ಬರೂ ನಟಿಯರ ಮೊದಲ ಚಿತ್ರ ಇದಾಗಿದೆ. ಪ್ರೇಕ್ಷಕರು ಈ ಚಿತ್ರವನ್ನು ತುಂಬಾ ಇಷ್ಟಪಟ್ಟರು. ಅದು ಹಲವಾರು ದಿನಗಳವರೆಗೆ ನಿರಂತರವಾಗಿ ಓಡಿತು. IMDB ಪ್ರಕಾರ, ಈ ಚಿತ್ರವು ಬೆಂಗಳೂರಿನ ಕಲ್ಪನಾ ಥಿಯೇಟರ್‌ನಲ್ಲಿ 693 ದಿನಗಳ ಕಾಲ ಓಡಿತು. ಬಾಲಿವುಡ್ನ ಹಿರಿಯ ನಟ ರಾಜ್ ಕಪೂರ್ ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.
ಈ ಚಿತ್ರವನ್ನು ನೋಡಿದ ನಂತರ ರಾಜ್ ಕಪೂರ್ ನಿರ್ದೇಶಕರಿಗೆ ಸಲಹೆ ನೀಡಿದರು. ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸುವಂತೆ ಹೇಳಿದರು. ಸಿನಿಮಾದ ಕ್ಲೈಮ್ಯಾಕ್ಸ್ ಸುಖಾಂತ್ಯ ಕಾಣಬೇಕು ಎಂದರು. ಆದರೆ, ಇದನ್ನು ಕೇಳಿದ ನಂತರವೂ ನಿರ್ದೇಶಕರು ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಂತರ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಎಂದು ಸಾಬೀತಾಯಿತು.
ಇದನ್ನೂ ಓದಿ: ಕಲ್ಕಿ 2898 ಎಡಿ: 7 ನಿಮಿಷಕ್ಕೆ 20 ಕೋಟಿ ಹಣ ಪಡೆದ ಕಮಲ್ ಹಾಸನ್
‘ಏಕ್ ದುಜೆ ಕೆ ಲಿಯೇ’ ಕಥೆಯ ಹೊರತಾಗಿ, ಅದರ ಹಾಡುಗಳು ಕೂಡ ಹಿಟ್ ಎಂದು ಸಾಬೀತಾಯಿತು. ವರ್ಷಗಳ ನಂತರವೂ ಜನರು ಈ ಚಿತ್ರದ ಹಾಡುಗಳನ್ನು ಗುನುಗುತ್ತಾರೆ. ಈ ಚಿತ್ರದ ಹಾಡುಗಳಿಗೆ ಸಂಬಂಧಿಸಿದ ಒಂದು ಘಟನೆಯೂ ಇದೆ. ‘ಟಾಕ್ಸಿಕ್’ ಎಂಬ ಇಂಗ್ಲಿಷ್ ಹಾಡು 2003ರಲ್ಲಿ ಬಂದಿತ್ತು. ಈ ಹಾಡಿನ ಟ್ಯೂನ್ ‘ಏಕ್ ದುಜೆ ಕೆ ಲಿಯೇ’ ಚಿತ್ರದ ‘ತೇರೆ ಮೇರೆ ಬೀಚ್’ ಹಾಡಿನಂತೆಯೇ ಇತ್ತು. ಆ ಸಮಯದಲ್ಲಿ ಈ ಹಾಡಿನ ಟ್ಯೂನ್ ಅನ್ನು ‘ಏಕ್ ದುಜೆ ಕೆ ಲಿಯೇ’ ನಿಂದ ಕಾಪಿ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.