71ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಕಮಲ್ ಹಾಸನ್; ಆರೋಗ್ಯದ ಗುಟ್ಟೇನು?

ಕಮಲ್ ಹಾಸನ್ ಅವರು 71ನೇ ವಯಸ್ಸಿನಲ್ಲಿಯೂ ಅಸಾಧಾರಣ ಫಿಟ್ನೆಸ್ ಹೊಂದಿದ್ದಾರೆ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಹಸ್ಯವೆಂದರೆ ಕಟ್ಟುನಿಟ್ಟಾದ ಡಯಟ್ ಪ್ಲಾನ್ ಮತ್ತು ನಿರಂತರ ವರ್ಕೌಟ್. ಪ್ರತಿದಿನ ಜಿಮ್, ಯೋಗ, 14 ಕಿ.ಮೀ ನಡಿಗೆ ಮತ್ತು ಸಮತೋಲಿತ ಆಹಾರ ಪದ್ಧತಿ ಅವರ ಯೌವನದ ಗುಟ್ಟು.

71ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಕಮಲ್ ಹಾಸನ್; ಆರೋಗ್ಯದ ಗುಟ್ಟೇನು?
ಕಮಲ್
Updated By: ರಾಜೇಶ್ ದುಗ್ಗುಮನೆ

Updated on: Nov 07, 2025 | 8:12 AM

ಕಮಲ್ ಹಾಸನ್ ಅವರಿಗೆ ಈಗ 71 ವರ್ಷ ವಯಸ್ಸಾಗಿದೆ. ಅವರು ಈ ವಯಸ್ಸಿನಲ್ಲೂ ಸಾಕಷ್ಟು ಫಿಟ್ ಆಗಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅವರು ತಪ್ಪದೆ ಡಯಟ್ ಮಾಡುತ್ತಾರೆ. ಅವರು ಈ ವಯಸ್ಸಿನಲ್ಲೂ ಇಷ್ಟು ಫಿಟ್ ಆಗಿರಲು ಕಾರಣ ಆಗಿದ್ದು, ಅವರ ಡಯಟ್ ಪ್ಲ್ಯಾನ್ ಹಾಗೂ ವರ್ಕೌಟ್. ಅದರ ವಿವರ ಇಲ್ಲಿದೆ.

ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಜನ್ಮದಿನ. ಅವರು ಸಾಕಷ್ಟು ಫಿಟ್ ಹಾಗೂ ಎನರ್ಜಟಿಕ್ ಆಗಿದ್ದಾರೆ. ಈ ವಯಸ್ಸಿನಲ್ಲೂ ಇಷ್ಟು ಆ್ಯಕ್ಟೀವ್ ಆಗಿರುವ ನಟರಲ್ಲಿ ಇವರೂ ಒಬ್ಬರು. ಕಮಲ್ ಹಾಸನ್ ಅವರು ನಿತ್ಯ 1-2 ಗಂಟೆ ಜಿಮ್ ಮಾಡುತ್ತಾರೆ. ಇದರಲ್ಲಿ ಜಿಮ್ ಟ್ರೇನಿಂಗ್ ಜೊತೆ ವೇಟ್ ಲಿಫ್ಟಿಂಗ್, ಭುಜವನ್ನು ಸ್ಟ್ರಾಂಗ್ ಮಾಡೋ ವ್ಯಾಯಾಮವೂ ಸೇರಿದೆ.

ಕಮಲ್ ಹಾಸನ್ ಅವರು ವರ್ಷದ ಹಲವು ದಿನ ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತಾರೆ. ಈ ಸಂದರ್ಭದಲ್ಲೂ ಅವರು ವರ್ಕೌಟ್ ಮಿಸ್ ಮಾಡುವುದೇ ಇಲ್ಲವಂತೆ. ಇದು ಅವರ ಬದ್ಧತೆಯನ್ನು ತೋರಿಸುತ್ತದೆ. ಜಿಮ್ ಜೊತೆ 30 ನಿಮಿಷ ಯೋಗ ಕೂಡ ಮಾಡುತ್ತಾರೆ ಅವರು. ಇದು ಅವರ ಆರೋಗ್ಯವಾಗಿರಲು ಕಾರಣವಾಗಿದೆ.

ಕಮಲ್ ಹಾಸನ್ ಅವರು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಅವರು ಯಾವಾಗಲೂ ಕೂಲ್ ಆಗಿರಲು ಪ್ರಯತ್ನಿಸುತ್ತಾರೆ.  ಕಮಲ್ ಹಾಸನ್ ಅವರು 14 ಕಿಮೀ ವಾಕ್ ಮಾಡುತ್ತಾರೆ.  ಕಮಲ್ ಹಾಸನ್ ಅವರು ಸಮತೋಲನ ಆಹಾರ ಫಾಲೋ ಮಾಡುತ್ತಾರೆ. ಅವರ ಊಟದಲ್ಲಿ ಪ್ರೋಟಿನ್, ಫೈಬರ್ ಹಾಗೂ ಆರೋಗ್ಯಕರ ಫ್ಯಾಟ್ ಇರುತ್ತದೆ. ಅವರು ಪ್ರೊಸೆಸ್ ಫುಡ್, ಸಕ್ಕರೆ ಹಾಗೂ ಆಲ್ಕೋಹಾಲ್​ನ ಮುಟ್ಟೋದಿಲ್ಲ.

ಇದನ್ನೂ ಓದಿ: ಕಮಲ್ ಹಾಸನ್ ಜನ್ಮದಿನ; ಈ ನಟನ ಒಟ್ಟೂ ಆಸ್ತಿ ಎಷ್ಟು?

ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಂಪೂರ್ಣವಾಗಿ ಸೋತಿತು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ ಹೊರತಾಗಿಯೂ ಸಿನಿಮಾ ಸೋತಿದೆ. ಸದ್ಯ ಅವರ ಬಳಿ ‘ಇಂಡಿಯನ್ 3’ ಸಿನಿಮಾ ಇದೆ. ಈ ಚಿತ್ರದ ಮೇಲೆ ನಿರೀಕ್ಷೆ ಏನು ಇಲ್ಲ. ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:10 am, Fri, 7 November 25