‘ಬಿಗ್ ಬಾಸ್​ ಸೀಸನ್​ 5’ ಕಮಲ್​ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?

ರಾಜಕೀಯ ಕೆಲಸಗಳ ಮಧ್ಯೆಯೂ ಕಮಲ್​ ಹಾಸನ್​ ನಾಲ್ಕನೇ ಸೀಸನ್​ ಹೋಸ್ಟ್​ ಮಾಡಲು ಒಪ್ಪಿಕೊಂಡಿದ್ದರು. ಅಂತೆಯೇ ಯಶಸ್ವಿಯಾಗಿ ಅದನ್ನು ನಿರ್ವಹಿಸಿದ್ದರು ಕೂಡ.

‘ಬಿಗ್ ಬಾಸ್​ ಸೀಸನ್​ 5’ ಕಮಲ್​ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?
ಕಮಲ್​ ಹಾಸನ್​

Updated on: May 27, 2021 | 9:28 PM

 ತಮಿಳು ಬಿಗ್​ ಬಾಸ್​ ಯಶಸ್ವಿಯಾಗಿ ನಾಲ್ಕು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈ ನಾಲ್ಕೂ ಸೀಸನ್​ಗಳನ್ನು ನಡೆಸಿಕೊಟ್ಟಿದ್ದು ಖ್ಯಾತ ನಟ ಕಮಲ್​ ಹಾಸನ್​. ಮುಂಬರುವ ಐದನೇ ಸೀಸನ್​ಅನ್ನು ಕೂಡ ಕಮಲ್​ ಹಾಸನ್​ ಅವರೇ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಅವರು ಬಿಗ್​ ಬಾಸ್​ ಸಂಭಾವನೆ ಹೆಚ್ಚಿಸಿಕೊಂಡ ಬಗ್ಗೆ ವರದಿಗಳು ಹರಿದಾಡುತ್ತಿವೆ. 

ತಮಿಳು ಬಿಗ್​ ಬಾಸ್​ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್​ ಎರಡನೇ ಅಲೆ ಇನ್ನೂ ಹಾಗೆಯೇ ಇದೆ. ಜುಲೈ ವೇಳೆಗೆ ಇದರ ಅಬ್ಬರ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ವರ್ಷಾಂತ್ಯಕ್ಕೆ ತಮಿಳು ಬಿಗ್​ ಬಾಸ್​ ಸೀಸನ್-5ಅನ್ನು ಆರಂಭಿಸುವ ಆಲೋಚನೆಯನ್ನು ವಾಹಿನಿ ಹೊಂದಿದೆ.

ರಾಜಕೀಯ ಕೆಲಸಗಳ ಮಧ್ಯೆಯೂ ಕಮಲ್​ ಹಾಸನ್​ ನಾಲ್ಕನೇ ಸೀಸನ್​ ಹೋಸ್ಟ್​ ಮಾಡಲು ಒಪ್ಪಿಕೊಂಡಿದ್ದರು. ಅಂತೆಯೇ ಯಶಸ್ವಿಯಾಗಿ ಅದನ್ನು ನಿರ್ವಹಿಸಿದ್ದರು ಕೂಡ. ಈಗ ಅವರು ಪಕ್ಷದ ಕೆಲಸದಲ್ಲಿ ಬ್ಯುಸಿಯಿದ್ದು, ಮತ್ತೆ ಬಿಗ್​ ಬಾಸ್​ನತ್ತ ಮುಖ ಮಾಡುವುದಿಲ್ಲ ಎನ್ನಲಾಗಿತ್ತು. ಆದರೆ, ಈಗ ರಾಜಕೀಯದಲ್ಲಿ ಯಶಸ್ಸು ಸಿಗದ ಕಾರಣ ಸಿನಿಮಾ ಕೆಲಸಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ಈ ಮಧ್ಯೆ ಕಮಲ್​ ಹಾಸನ್​ ಬಿಗ್​ ಬಾಸ್​ಗಾಗಿ​ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಕಮಲ್​ ಹಾಸನ್​ ಬಿಗ್​ ಬಾಸ್​​ಗಾಗಿ​ 4.80 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದರಂತೆ.ಅಂದರೆ ಪ್ರತಿ ಎಪಿಸೋಡ್​ಗೆ ಸುಮಾರು 16 ಲಕ್ಷ. ಈ ಬಾರಿ ಅವರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಮಲ್​ ಹಾಸನ್​ ‘ವಿಕ್ರಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಳಪತಿ ವಿಜಯ್​ ನಟನೆಯ ಮಾಸ್ಟರ್​ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್​ ಕನಗರಾಜ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇಂಡಿಯನ್​ 2 ಸಿನಿಮಾದಲ್ಲೂ ಕಮಲ್​ ನಟಿಸುತ್ತಿದ್ದಾರೆ.

ಇದನ್ನೂ ಒದಿ: ಕಮಲ್ ಹಾಸನ್ ಪಕ್ಷದಿಂದ ಹೊರನಡೆದ ಇನ್ನಿಬ್ಬರು ಮುಖಂಡರು; ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ರಾಜೀನಾಮೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us