AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿರೋಧಿ’ಗಳೊಟ್ಟಿಗೆ ವೇದಿಕೆ ಏರಿ ಡ್ಯಾನ್ಸ್ ಮಾಡಿದ ಕಂಗನಾ ರನೌತ್

Kangana Ranaut dance: ರಾಜಕಾರಣಿಗಳು ಪರಸ್ಪರ ಕಚ್ಚಾಡುತ್ತಾ, ಪರಸ್ಪರರ ನಿಂದಿಸುತ್ತಾ ಇರುತ್ತಾರೆ. ಮಾಧ್ಯಮಗಳ ಮುಂದಂತೂ ಹಾವು-ಮುಂಗುಸಿಯಂತೆ ಕಿತ್ತಾಡುತ್ತಾರೆ. ಆದರೆ ಖಾಸಗಿಯಾಗಿ ಈ ಎಲ್ಲ ರಾಜಕಾರಣಿಗಳು ಪರಸ್ಪರ ಗೆಳೆಯರೇ ಆಗಿರುತ್ತಾರೆ. ಲೋಕಸಭೆಯಲ್ಲಿ ಪರಸ್ಪರ ಕಿತ್ತಾಡುವ ಟಿಎಂಸಿ, ಎನ್​​ಸಿಪಿ, ಬಿಜೆಪಿ ನಾಯಕಿಯರು ಈಗ ಒಂದೇ ವೇದಿಕೆ ಏರಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ನೋಡಿ...

‘ವಿರೋಧಿ’ಗಳೊಟ್ಟಿಗೆ ವೇದಿಕೆ ಏರಿ ಡ್ಯಾನ್ಸ್ ಮಾಡಿದ ಕಂಗನಾ ರನೌತ್
Kangana Ranaut
ಮಂಜುನಾಥ ಸಿ.
|

Updated on: Dec 07, 2025 | 5:53 PM

Share

ರಾಜಕಾರಣಿಗಳು (Politicians) ಎದುರಾಳಿಗಳನ್ನು ಮೂದಲಿಸುವುದು, ಹೀಗಳೆಯುವುದು, ಅವಕಾಶ ಸಿಕ್ಕಾಗೆಲ್ಲ ವ್ಯಂಗ್ಯ ಮಾಡುವುದು ಈಗಿನ ರಾಜಕೀಯದಲ್ಲಿ ಸಾಮಾನ್ಯ. ಆದರೆ ಈ ಮೂದಲಿಕೆ, ವಿರೋಧ ಎಲ್ಲವೂ ಚುನಾವಣೆ ಸಮಯದಲ್ಲಿ, ಮಾಧ್ಯಮದ ಮೈಕ್​​ಗಳು ಎದುರಿದ್ದಾಗ ಮತ್ತು ಶಾಸನ ಸಭೆಯಲ್ಲಿ ಮಾತ್ರ. ಮಾಧ್ಯಮಗಳ ಮುಂದೆ ಹಾವು-ಮುಂಗುಸಿಯಂತೆ ಕಿತ್ತಾಡುವ ರಾಜಕೀಯ ನಾಯಕರುಗಳು ತೆರೆ ಮರೆಯಲ್ಲಿ ಗಳಸ್ಯ-ಕಂಠಸ್ಯ ಎನ್ನುವಂತಿರುತ್ತಾರೆ. ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್, ಫೈರ್ ಬ್ರ್ಯಾಂಡ್ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ವಿಪಕ್ಷದವರನ್ನು ಕಟು ಶಬ್ದಗಳ ಬಳಸಿ ಟೀಕಿಸುತ್ತಾರೆ. ಆದರೆ ಈಗ ‘ವಿರೋಧಿ’ಗಳೊಟ್ಟಿಗೆ ವೇದಿಕೆ ಏರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಟಿಎಂಸಿ, ಎನ್​​ಸಿಪಿ ಮತ್ತು ಬಿಜೆಪಿ ಪರಸ್ಪರ ಎದುರಾಳಿ ಪಕ್ಷಗಳಾಗಿವೆ. ಟಿಎಂಸಿಯ ಸಂಸದೆ ಮಹುವಾ ಮೋಯಿತ್ರಾ ಮತ್ತು ಎನ್​​ಪಿಪಿಯ ಸುಪ್ರಿಯಾ ಸುಳೆ ಅವಕಾಶ ಸಿಕ್ಕಾಗೆಲ್ಲ ಆಡಳಿತಾರೂಢ ಬಿಜೆಪಿಯ ಟೀಕೆ ಮಾಡುತ್ತಲೇ ಇರುತ್ತಾರೆ. ಲೋಕಸಭೆಯಲ್ಲಿ ಹಲವು ಬಾರಿ ಈ ಇಬ್ಬರು ಆಡಳಿತ ಪಕ್ಷದ ವಿರುದ್ಧ ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ನಟಿ, ಸಂಸದೆ ಕಂಗನಾ ರನೌತ್ ಸಹ ವಿಪಕ್ಷಗಳ ಬಗ್ಗೆ ವಿಪಕ್ಷದ ನಾಯಕರುಗಳ ಬಗ್ಗೆ ಕಟು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಈಗ ಈ ಮೂವರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಬಿಜೆಪಿ ಸಂಸದ ಹಾಗೂ ಖ್ಯಾತ ಉದ್ಯಮಿಯೂ ಆಗಿರುವ ನವೀನ್ ಜಿಂದಾಲ್ ಅವರ ಪುತ್ರಿಯ ವಿವಾಹ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಟಿಎಂಸಿಯ ಸಂಸದೆ ಮಹುವಾ ಮೋಯಿತ್ರಾ, ಎನ್​​ಪಿಪಿಯ ಸುಪ್ರಿಯಾ ಸುಳೆ ಮತ್ತು ಕಂಗನಾ ರನೌತ್ ಅವರು ಒಟ್ಟಿಗೆ ವೇದಿಕೆ ಮೇಲೆ ಹತ್ತಿ ಬಾಲಿವುಡ್ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಇವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.

ಇದನ್ನೂ ಓದಿ:‘ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್

ನವೀನ್ ಜಿಂದಾಲ್ ಅವರ ಪುತ್ರಿ ಯಶಸ್ವಿನಿ ಅವರು ಶಾಶ್ವತ್ ಅವರೊಟ್ಟಿಗೆ ವಿವಾಹವಾಗಿದ್ದು ವಿವಾಹ ಸಮಾರಂಭ ಬಲು ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ ಪ್ರಮುಖರು ಭಾಗಿ ಆಗಿದ್ದಾರೆ. ಮಹುವಾ ಮೋಯಿತ್ರಾ, ಎನ್​​ಪಿಪಿಯ ಸುಪ್ರಿಯಾ ಸುಳೆ ಮತ್ತು ಕಂಗನಾ ರನೌತ್ ಅವರುಗಳು ವಿವಾಹದ ಮೆಹಂದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಂ’ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಕಮೆಂಟುಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More