ನಟಿ ಕಂಗನಾ ರಣಾವತ್ ಯಾವುದೇ ಹಿನ್ನೆಲೆ ಇಲ್ಲದೆ ಬಾಲಿವುಡ್ಗೆ ಕಾಲಿಟ್ಟವರು. ಅವರ ಮೊದಲ ಸಿನಿಮಾ ಗ್ಯಾಂಗ್ಸ್ಟರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರ ತೆರೆಕಂಡು 15 ವರ್ಷ ಕಳೆದಿದೆ. ಈ ಖುಷಿಗೆ ಕಂಗನಾ ಸರಣಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮನ್ನು ತಾವು ಶಾರುಖ್ ಖಾನ್ ಜತೆ ಹೋಲಿಕೆ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಕಂಗನಾ ಅವರನ್ನು ಹೊಗಳಿದ್ದಾರೆ.
2006ರಲ್ಲಿ ತೆರೆಗೆ ಬಂದ ಗ್ಯಾಂಗ್ಸ್ಟರ್ ಸಿನಿಮಾ ಮೂಲಕ ಬಣ್ಣ ಬದುಕು ಆರಂಭಿಸಿದವರು ಕಂಗನಾ. ಇಮ್ರಾನ್ ಹಶ್ಮಿ ಈ ಚಿತ್ರದ ಹೀರೋ. ಅಂದಿನ ಕಾಲದಲ್ಲಿ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತ್ತು. ನಂತರ ಕಂಗನಾಗೆ ಸಾಲು ಸಾಲು ಸಿನಿಮಾ ಆಫರ್ಗಳು ಬರೋಕೆ ಪ್ರಾರಂಭವಾದವು. 15 ವರ್ಷಗಳ ಜರ್ನಿಯಲ್ಲಿ ಕಂಗನಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.
15 ವರ್ಷಗಳ ಹಿಂದೆ ಗ್ಯಾಂಗ್ಸ್ಟರ್ ರಿಲೀಸ್ ಆಗಿತ್ತು. ನನ್ನದು ಹಾಗೂ ಶಾರುಖ್ ಖಾನ್ ಇಬ್ಬರದ್ದೂ ದೊಡ್ಡ ಸಕ್ಸಸ್ ಸ್ಟೋರಿಗಳಿವೆ. ನಮ್ಮಿಬ್ಬರಿಗೆ ವ್ಯತ್ಯಾಸ ಇಷ್ಟೆ. ಶಾರುಖ್ ದೆಹಲಿಯಿಂದ ಬಂದವರು. ಕಾನ್ವೆಂಟ್ನಲ್ಲಿ ಓದಿದವರು. ಅವರ ಪಾಲಕರು ಸಿನಿಮಾ ಇಂಡಸ್ಟ್ರಿಯನ್ನು ಹತ್ತಿರದಿಂದ ಕಂಡವರು. ಆದರೆ, ನನಗೆ ಒಂದಕ್ಷರ ಇಂಗ್ಲಿಷ್ ಬರುತ್ತಿರಲಿಲ್ಲ. ಹಿಮಾಚಲ ಪ್ರದೇಶದ ಕುಗ್ರಾಮದಿಂದ ಬಂದವಳು ನಾನು. ನನ್ನ ಪ್ರತಿ ದಿನವೂ ಹೋರಾಟವೇ ಆಗಿತ್ತು ಎಂದು ಕಂಗನಾ ಹೇಳಿಕೊಂಡಿದ್ದಾರೆ.
15 years ago Gangster released today, Shahrukh Khan ji and mine are the biggest success stories ever but SRK was from Delhi, convent educated and his parents were involved in films, I did not know a single word of English, no education, came from a remote village of HP and 1/2 pic.twitter.com/CEw72pvtds
— Kangana Ranaut (@KanganaTeam) April 28, 2021
ಕಂಗನಾ ತಮ್ಮನ್ನು ತಾವು ಶಾರುಖ್ ಖಾನ್ಗೆ ಹೋಲಿಕೆ ಮಾಡಿಕೊಂಡಿದ್ದು, ಪರೋಕ್ಷವಾಗಿ ಶಾರುಖ್ ಖಾನ್ಗಿಂತ ತಾವು ಗ್ರೇಟ್ ಎಂದು ಹೇಳಿಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ. ಇದನ್ನು ಸಾಕಷ್ಟು ಜನರು ಟ್ರೋಲ್ ಮಾಡಿದ್ದಾರೆ. ಶಾರುಖ್ ತಂದೆ-ತಾಯಿಗೂ ಚಿತ್ರರಂಗಕ್ಕೂ ಎಲ್ಲಿ ಸಂಬಂಧ ಇತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Srk parents are involved in films but ye to batao ki kya karte the unke papa canteen chalate the theatre main aona ghar chalane ke liye and srk parents never seen his success bcz they died jab srk young tha bohot his story is next level inspiring
— Kabir (@srkwarrior555) April 28, 2021
ಕೊರೊನಾ ವೈರಸ್ ಎರಡನೇ ಅಲೆಗೆ ಸಿನಿಮಾ ರಂಗ ಮತ್ತೆ ತೊಂದರೆಗೆ ಸಿಲುಕಿದೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೆಲವೆಡೆ ಚಿತ್ರಮಂದಿರ ಮುಚ್ಚಲಾಗಿದೆ ಇದರಿಂದಾಗಿ ಅನೇಕ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಿದೆ. ಈ ಸಾಲಿಗೆ ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾ ಕೂಡ ಸೇರ್ಪಡೆ ಆಗಿತ್ತು. ಚಿತ್ರತಂಡದಿಂದ ಮುಂದಿನ ರಿಲೀಸ್ ದಿನಾಂಕ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಕೊರೊನಾ ಪ್ರಕರಣಗಳು ಕಡಿಮೆ ಆದ ನಂತರದಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್ ಖಾನ್ಗೂ ಇತ್ತು ಆಹ್ವಾನ