ವಿವಾದಕ್ಕೆ ಸಿಲುಕಿದ ಕಂಗನಾ ರನೌತ್ ಸಿನಿಮಾ, 250 ಕೋಟಿ ಮೊಕದ್ದಮೆ ದಾಖಲು

Kangana Ranaut movie: ಅತಿ ಹೆಚ್ಚು ಬಾರಿ ರಾಷ್ಟ್ರಪ್ರಶಸ್ತಿ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಕಂಗನಾ. ಇದೀಗ ಸಂಸದೆಯೂ ಆಗಿರುವ ಕಂಗನಾ, ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಸತತವಾಗಿ ಸೋಲುತ್ತಿವೆ. ಕಂಗನಾ ನಟಿಸಿದ ಸುಮಾರು ಐದಾರು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಇದೀಗ ಕಂಗನಾ ತಮ್ಮದೇ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ವಿವಾದಕ್ಕೆ ಸಿಲುಕಿಕೊಂಡಿದೆ.

ವಿವಾದಕ್ಕೆ ಸಿಲುಕಿದ ಕಂಗನಾ ರನೌತ್ ಸಿನಿಮಾ, 250 ಕೋಟಿ ಮೊಕದ್ದಮೆ ದಾಖಲು
Kangana Ranaut

Updated on: Jul 07, 2026 | 11:38 AM

ಕಂಗನಾ ರನೌತ್ (Kangana Ranauat), ಭಾರತೀಯ ಚಿತ್ರರಂಗದ ಅದ್ಭುತ ನಟಿಯರಲ್ಲಿ ಪ್ರಮುಖರು. ನಟನೆಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಭಾರತೀಯ ನಟಿ. ಅತಿ ಹೆಚ್ಚು ಬಾರಿ ರಾಷ್ಟ್ರಪ್ರಶಸ್ತಿ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಕಂಗನಾ. ಇದೀಗ ಸಂಸದೆಯೂ ಆಗಿರುವ ಕಂಗನಾ, ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಸತತವಾಗಿ ಸೋಲುತ್ತಿವೆ. ಕಂಗನಾ ನಟಿಸಿದ ಸುಮಾರು ಐದಾರು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಇದೀಗ ಕಂಗನಾ ತಮ್ಮದೇ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ವಿವಾದಕ್ಕೆ ಸಿಲುಕಿಕೊಂಡಿದೆ.

ಕಂಗನಾ ರನೌತ್ ಅವರ ನಟನಾ ಪ್ರತಿಭೆಯನ್ನು ಸಾರಿದ ಸಿನಿಮಾ ‘ಕ್ವೀನ್’. ಒಳ್ಳೆಯ ಕತೆಯ ಜೊತೆಗೆ ಕಂಗನಾರ ಅದ್ಭುತ ನಟನೆಯಿಂದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. 2014 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದ ಸೀಕ್ವೆಲ್​​ನಲ್ಲಿ ಕಂಗನಾ ಇದೀಗ ನಟಿಸಿದ್ದಾರೆ. ಸಿನಿಮಾವನ್ನು ಜಿಯೋ ನಿರ್ಮಾಣ ಮಾಡಿದೆ. 2014ರ ‘ಕ್ವೀನ್’ ನಿರ್ದೇಶಿಸಿದ್ದ ವಿಕಾಸ್ ಭಾಲ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಸಹ ಆಗಲಿತ್ತು, ಆದರೆ ಇದೀಗ ಸಂಕಷ್ಟವೊಂದು ಎದುರಾಗಿದೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

‘ಕ್ವೀನ್ 2’ ಸಿನಿಮಾದ ಮೇಲೆ ಪ್ಯಾಂಟಮ್ ಸ್ಟುಡಿಯೋಸ್ ದಾವೆ ಹೂಡಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಹಣವನ್ನು ದಂಡವಾಗಿ ಪಾವತಿಸಬೇಕು ಎಂದು ಒತ್ತಾಯಿಸಿದೆ. 2014 ರಲ್ಲಿ ಬಿಡುಗಡೆ ಆಗಿದ್ದ ‘ಕ್ವೀನ್’ ಸಿನಿಮಾವನ್ನು ಪ್ಯಾಂಟಮ್ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಆದರೆ ಈಗ ‘ಕ್ವೀನ್ 2’ ಸಿನಿಮಾವನ್ನು ಜಿಯೋ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾವನ್ನು ಅನಧಿಕೃತ ಸೀಕ್ವೆಲ್ ಎಂದು ಕರೆದಿರುವ ಪ್ಯಾಂಟಮ್, ತಮ್ಮ ಬೌದ್ಧಿಕ ಆಸ್ತಿ (ಇಂಟೆಲೆಕ್ಚುಲ್ ಪ್ರಾಪರ್ಟಿ)ಯನ್ನು ಅನುಮತಿ ಇಲ್ಲದೆ ತೆಗೆದುಕೊಂಡಿದ್ದಾರೆಂದು ದಾವೆ ಹೂಡಿದ್ದು, 250 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us