ದಾಖಲೆ ಬರೆದ ‘ಕಾಂತಾರ: ಚಾಪ್ಟರ್ 1’ ಹಿಂದಿ ಆವೃತ್ತಿ: ಕಲೆಕ್ಷನ್ ಎಷ್ಟು?

Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 818 ಕೋಟಿಗೂ ಹೆಚ್ಚು ಮೊತ್ತವನ್ನು ಈಗಾಗಲೇ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿಯೂ ಸಿನಿಮಾದ ಕಲೆಕ್ಷನ್ ಬಲು ಜೋರಾಗಿದೆ. ಅದರಲ್ಲೂ ಸಿನಿಮಾದ ಹಿಂದಿ ಆವೃತ್ತಿ ಗಳಿಕೆಯಲ್ಲಿ ದಾಖಲೆಯನ್ನೇ ಬರೆಯುತ್ತಿದೆ.

ದಾಖಲೆ ಬರೆದ ‘ಕಾಂತಾರ: ಚಾಪ್ಟರ್ 1’ ಹಿಂದಿ ಆವೃತ್ತಿ: ಕಲೆಕ್ಷನ್ ಎಷ್ಟು?
ಕಾಂತಾರ

Updated on: Oct 26, 2025 | 9:20 AM

ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ 25 ದಿನಗಳಾಗಿವೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ನೀಡಿರುವ ಲೆಕ್ಕಾಚಾರದ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 818 ಕೋಟಿಗೂ ಹೆಚ್ಚು ಮೊತ್ತವನ್ನು ಈಗಾಗಲೇ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿಯೂ ಸಿನಿಮಾದ ಕಲೆಕ್ಷನ್ ಬಲು ಜೋರಾಗಿದೆ. ಅದರಲ್ಲೂ ಸಿನಿಮಾದ ಹಿಂದಿ ಆವೃತ್ತಿ ಗಳಿಕೆಯಲ್ಲಿ ದಾಖಲೆಯನ್ನೇ ಬರೆಯುತ್ತಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಈ ವರ್ಷ ಈ ವರೆಗೆ ಬಿಡುಗಡೆ ಆದ ಯಾವುದೇ ಸಿನಿಮಾಕ್ಕಿಂತಲೂ ಹೆಚ್ಚಿನ ಗಳಿಕೆಯನ್ನು ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ ಮಾಡಿದೆ. ಈ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಮೊತ್ತ ಗಳಿಸಿದ ಸಿನಿಮಾ ಎನಿಸಿಕೊಂಡಿದೆ ‘ಕಾಂತಾರ: ಚಾಪ್ಟರ್ 1’. ಸಿನಿಮಾ ಅತಿ ಶೀಘ್ರದಲ್ಲಿಯೇ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿ ಕಲೆಕ್ಷನ್ ಮಾಡಲಿರುವುದು ಪಕ್ಕಾ ಆಗಿದೆ. ಆ ಮೂಲಕ 1000 ಕೋಟಿ ಕ್ಲಬ್ ಸೇರಿದ ಎರಡನೇ ಕನ್ನಡ ಸಿನಿಮಾ ಎನಿಸಿಕೊಳ್ಳಲಿದೆ. 1000 ಕೋಟಿ ಗಳಿಸಿರುವ ಭಾರತದ ಕೆಲವೇ ಸಿನಿಮಾಗಳ ಪಟ್ಟಿಯನ್ನು ಸೇರಿಕೊಳ್ಳಲಿದೆ.

ಇನ್ನು ಸಿನಿಮಾದ ಹಿಂದಿ ಆವೃತ್ತಿಯ ಕಲೆಕ್ಷನ್ ಸಹ ಬಲು ಜೋರಾಗಿದೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರವೇ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ ದೋಚಿದೆ. ಪರಭಾಷಾ ಸಿನಿಮಾ ಒಂದು ಹಿಂದಿ ಪ್ರದೇಶದಲ್ಲಿ 200 ಕೋಟಿ ಗಳಿಸುವುದು ಅದೂ ಒಂದು ತಿಂಗಳ ಮುಂಚೆಯೇ ಸಾಮಾನ್ಯ ಸಾಧನೆಯಲ್ಲ. ‘ಪುಷ್ಪ 2’ ಹೊರತುಪಡಿಸಿದರೆ ಇತ್ತೀಚೆಗಿನ ಇನ್ಯಾವ ಸಿನಿಮಾ ಸಹ ಈ ಸಾಧನೆ ಮಾಡಿಲ್ಲ.

ಇದನ್ನೂ ಓದಿ:ಗಾಯಕಿ ಉಷಾ ಉತ್ತಪ್​​ಗೆ ‘ಕಾಂತಾರ’ ಹಾಡು ಕಲಿಸಿದ ಗಾಯಕ

‘ಪುಷ್ಪ 2’, ‘ಬಾಹುಬಲಿ’, ‘ಕೆಜಿಎಫ್ 2’ ಸಿನಿಮಾಗಳ ಹೊರತಾಗಿ ಹಿಂದಿ ಪ್ರದೇಶದಲ್ಲಿ 200 ಅಥವಾ ಅದಕ್ಕಿಂತಲೂ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳು ಯಾವುವೂ ಇರಲಿಲ್ಲ. ಇದೀಗ ‘ಕಾಂತಾರ: ಚಾಪ್ಟರ್ 1’ ಸಹ ಈ ಪಟ್ಟಿಗೆ ಸೇರ್ಪಡೆ ಆಗಿದೆ. 2022 ರಲ್ಲಿ ಬಿಡುಗಡೆ ಆದ ‘ಕಾಂತಾರ’ ಸಿನಿಮಾಕ್ಕೂ ಸಹ ಹಿಂದಿ ಭಾಷಿಕರು ಭರಪೂರ ಪ್ರೀತಿಯನ್ನು, ಗೌರವವನ್ನು ನೀಡಿದ್ದರು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಸಹ ಭರಪೂರ ಪ್ರೀತಿಯನ್ನು ನೀಡುತ್ತಿದ್ದಾರೆ.

ಇನ್ನು ಅಕ್ಟೋಬರ್ 31 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಇಂಗ್ಲೀಷ್ ಆವೃತ್ತಿ ಸಹ ಬಿಡುಗಡೆ ಆಗಲಿಕ್ಕಿದೆ. ಇಂಗ್ಲೀಷ್ ಆವೃತ್ತಿ ಭಾರತದ ಕೆಲ ಮೆಟ್ರೊ ಸಿಟಿಗಳ ಜೊತೆಗೆ ವಿದೇಶಗಳಲ್ಲಿಯೂ ಬಿಡುಗಡೆ ಆಗಲಿದೆ. ಇದರಿಂದ ಸಿನಿಮಾದ ಗ್ಲೋಬಲ್ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಇಂಗ್ಲೀಷ್ ಆವೃತ್ತಿಯ ಬಿಡುಗಡೆಗಾಗಿ ರಿಷಬ್ ಶೆಟ್ಟಿ ವಿದೇಶಗಳಿಗೆ ಪ್ರಚಾರಕ್ಕೆ ತೆರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ