ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

|

Updated on: May 24, 2021 | 9:12 PM

Karan Johar: ಅದು 2018ರ ಸಮಯ. ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆದಿದ್ದವು. ಹಿಂದಿ ರಿಯಾಲಿಟಿ ಶೋ ಒಂದಕ್ಕೆ ‘ಜೀರೋ’ ಚಿತ್ರದ ಪ್ರಮೋಷನ್​ಗೆ ಕತ್ರಿನಾ ಕೈಫ್​ ಹಾಗೂ ಅನುಷ್ಕಾ ಬಂದಿದ್ದರು.

ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು
ಅನುಷ್ಕಾ-ವಿರಾಟ್​ ದಂಪತಿ ಹಾಗೂ ಕರಣ್​
Follow us on

ಕರಣ್​ ಜೋಹರ್​ ಬಾಲಿವುಡ್​ನ ಖ್ಯಾತ ನಿರ್ಮಾಪಕ. ಸಾಕಷ್ಟು ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರಿಗಿದೆ. ಅಷ್ಟೇ ಅಲ್ಲ, ಅವರು ಸಾಕಷ್ಟು ಸ್ಟಾರ್​ಗಳ ಮಕ್ಕಳನ್ನು ಬಾಲಿವುಡ್​ಗೆ ಪರಿಚಯ ಮಾಡಿದ್ದಾರೆ. ಇನ್ನು, ಕರಣ್​ ವಿವಾದದ ಮೂಲಕವೂ ಆಗಾಗ ಸುದ್ದಿಯಾಗುತ್ತಾರೆ. ಅವರು ನಟಿ ಅನುಷ್ಕಾ ಶರ್ಮಾಗೆ ಬಳಸಿದ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಅದು 2018ರ ಸಮಯ. ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆದಿದ್ದವು. ಹಿಂದಿ ರಿಯಾಲಿಟಿ ಶೋ ಒಂದಕ್ಕೆ ‘ಜೀರೋ’ ಚಿತ್ರದ ಪ್ರಮೋಷನ್​ಗೆ ಕತ್ರಿನಾ ಕೈಫ್​ ಹಾಗೂ ಅನುಷ್ಕಾ ಬಂದಿದ್ದರು. ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಕರಣ್​.

ಈ ವೇಳೆ ಗೇಮ್​ ಒಂದನ್ನು ಆಡಿಸಲಾಗಿತ್ತು. ಈ ಆಟದಲ್ಲಿ ಕರಣ್​, ‘ಕೋಯಿ ಮಿಲ್​ ಗಯಾ’ ಚಿತ್ರದ ಸಾಂಗ್​ ವಿಚಾರವಾಗಿ ಪ್ರಶ್ನೆಯೊಂದನ್ನು ಕೇಳಿದ್ದರು. ಈ ಪ್ರಶ್ನೆಗೆ ಕತ್ರಿನಾ ಕೈಫ್​ ಸರಿಯಾಗಿ ಉತ್ತರ ನೀಡಿದರು.

ಕರಣ್​ ಕೇಳಿದ ಮುಂದಿನ ಪ್ರಶ್ನೆಗೆ ಅನುಷ್ಕಾ ತಕ್ಷಣಕ್ಕೆ ಉತ್ತರ ನೀಡಿದರು. ಆಗ ಕತ್ರಿನಾ, ‘ನನಗೆ ಅವಕಾಶವನ್ನೇ ನೀಡಿಲ್ಲ’ ಎಂದು ದೂರಿದ್ದರು. ‘ನಾನು ಅವಕಾಶವನ್ನು ಬಾಚಿಕೊಂಡೆ’ ಎಂದು ಹೇಳುತ್ತಲೇ ಫೋರ್​ ಎಂದಿದ್ದರು ಅನುಷ್ಕಾ. ಆಗ ಕರಣ್​, ‘ನಮ್ಮ ಹುಡುಗಿ ತುಂಬಾನೇ ದೊಡ್ಡವಳಾಗಿದ್ದಾರೆ. ಕ್ರಿಕೆಟ್​ ಜೋಕ್​ಗಳನ್ನು ಹೇಳುತ್ತಿದ್ದಾರೆ. ಅನುಷ್ಕಾ ದೇಶದ ಸೊಸೆ’ ಎಂದು ಹೇಳಿದ್ದರು.

 

ವಿರಾಟ್​ ಟೀಂ ಇಂಡಿಯಾದ ನಾಯಕ. ಹೀಗಾಗಿ, ಅನುಷ್ಕಾಗೆ ದೇಶದ ಸೊಸೆ ಎಂಬಪದವನ್ನು  ಕರಣ್​ ಬಳಸಿದ್ದರು. ಇದನ್ನು ಸಾಕಷ್ಟು ಜನರು ಪ್ರಶ್ನೆ ಮಾಡಿದ್ದರು.

ಅನುಷ್ಕಾ ಹಾಗೂ ವಿರಾಟ್​ 2017ರ ಡಿಸೆಂಬರ್​ನಲ್ಲಿ ಇಟಲಿಗೆ ತೆರಳಿ ಮದುವೆ ಆದರು. ಹಲವು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಈ ವರ್ಷ ಜನವರಿಯಲ್ಲಿ ವಮಿಕಾ ಹೆಸರಿನ ಮಗು ಅವರಿಗೆ ಜನಿಸಿತು. ಕೊವಿಡ್​ ಸಂಕಷ್ಟದ ಸಮಯದಲ್ಲಿ ಅನುಷ್ಕಾ ಹಾಗೂ ವಿರಾಟ್​ ಸಹಾಯಕ್ಕೆ ನಿಂತಿದ್ದಾರೆ. ಕೊವಿಡ್​-19 ರಿಲೀಫ್​ ಫಂಡ್​ಗೆ 2 ಕೋಟಿ ನೀಡಿದ್ದರು. ಅಲ್ಲದೆ, ಜನರಿಂದಲೂ ಹಣ ಪಡೆದು ಅಗತ್ಯ ಇರುವವರಿಗೆ ನೀಡಿದ್ದರು.

ಇದನ್ನೂ ಓದಿ: ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ