ಕತ್ರಿನಾ ಕೈಫ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅವರಿಗೆ ಇಂದು (ಜುಲೈ 16) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಬ್ರಿಟಿಷ್ ಹಿನ್ನೆಲೆ ಇದೆ. ಈ ಕಾರಣದಿಂದಲೇ ಅವರು ಬ್ರಿಟನ್ ಇಂಗ್ಲಿಷನ್ನ ಸ್ವಚ್ಛವಾಗಿ ಮಾತನಾಡುತ್ತಾರೆ. ಕತ್ರಿನಾ ಕೈಫ್ ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಅಕ್ಷಯ್ ಕುಮಾರ್ ಹಾಗೂ ಸಲ್ಲು ಜೊತೆ ನಟಿಸಿ ಫೇಮಸ್ ಆಗಿದ್ದಾರೆ.
ಕತ್ರಿನಾ ಕೈಫ್ ಅವರಿಗೆ ಈಗ 41 ವರ್ಷ. ಅವರು ಜನಸಿದ್ದು 1983ರಲ್ಲಿ. ಅವರು ಮಾಧ್ಯಮದಿಂದ ಎಲ್ಲವನ್ನೂ ಹೆಚ್ಚು ಮುಚ್ಚಿಡಲು ಬಯಸುತ್ತಾರೆ. ಕತ್ರಿನಾ ತಂದೆ ಕಾಶ್ಮೀರಿ. ಅವರ ಹೆಸರು ಮೊಹ್ಮದ್ ಕೈಫ್. ಅವರ ತಾಯಿ ಸುಸಾನ. ಅವರು ಕ್ರೈಸ್ತ ಸಮುದಾಯದವರು. ಲಂಡನ್ ಮೂಲದವರು. ಕತ್ರಿನಾ ಜನಿಸಿದ್ದು ಹಾಂಗ್ ಕಾಂಗ್ನಲ್ಲಿ.
ಕತ್ರಿನಾ ಕೈಫ್ ಅವರ ಸಣ್ಣ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿದರು. ಅವರು ಮಾಡೆಲಿಂಗ್ ಮುಂದುವರಿಸಲು ಲಂಡನ್ಗೆ ತೆರಳಿದರು. ಅವರು ಲಂಡನ್ನಲ್ಲೇ ಕಾಲೇಜ್ ಓದಿದರು. ಅಲ್ಲಿ ಮೂರ್ನಾಲ್ಕು ವರ್ಷ ಸಮಯ ಕಳೆದರು. ಆ ಬಳಿಕ ಬಾಲಿವುಡ್ನಲ್ಲಿ ಸೆಟಲ್ ಆಗಬೇಕು ಎನ್ನುವ ಕಾರಣಕ್ಕೆ ಅವರು ಮರಳಿ ಭಾರತಕ್ಕೆ ಆಗಮಿಸಿದರು. ಕತ್ರಿನಾ ಬಳಿ ಭಾರತೀಯ ನಾಗರಿಕತ್ವ ಇಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ.
ಕತ್ರಿನಾ ಕೈಫ್ ಅವರು ‘ಲಂಡನ್ ಫ್ಯಾಷನ್ ವೀಕ್’ನಲ್ಲಿ ಭಾಗಿ ಆಗಿದ್ದರು. ನಿರ್ದೇಶಕ ಖೈಜಾದ್ ಅವರು ಕತ್ರಿನಾ ಅವರ ಪ್ರಯತ್ನವನ್ನು ಮೆಚ್ಚಿದರು. ಜೊತೆಗೆ ‘ಬೂಮ್’ ಸಿನಿಮಾದಲ್ಲಿ ಅವಕಾಶ ನೀಡಿದರು. ಅವರು ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಮಿತಾಭ್ ಬಚ್ಚನ್, ಗುಲ್ಶನ್ ಗ್ರೋವರ್ ಈ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾ 2003ರಲ್ಲಿ ನಟಿಸಿ ಮಿಶ್ರ ಪ್ರತಿಕ್ರಿಯೆ ಪಡೆಯಿತು.
‘ಬೂಮ್’ ಚಿತ್ರಕ್ಕೆ ಕತ್ರಿನಾ ಅವರೇ ಡಬ್ ಮಾಡಿದ್ದರು ಎನ್ನಲಾಗಿದೆ. ಅವರಿಗೆ ಸರಿಯಾಗಿ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಸಿನಿಮಾ ಫ್ಲಾಪ್ ಆಯಿತು ಎನ್ನಲಾಗಿದೆ. ‘ಮಲ್ಲಿಶ್ವರಿ’ ಹೆಸರಿನ ತೆಲುಗು ಸಿನಿಮಾದಲ್ಲಿ ಕೂಡ ನಟಿಸಿದರು. ಆ ಬಳಿಕ ಅವರಿಗೆ ಕೆಲವು ತೆಲುಗು ಆಫರ್ಗಳು ಬಂದವು. ಕೆಲವೇ ಸಿನಿಮಾಗಳ ಬಳಿಕಾ ಕತ್ರಿನಾ ಚಿತ್ರ ಒಂದಕ್ಕೆ 70 ಲಕ್ಷ ರೂಪಾಯಿ ಪಡೆದಿದ್ದರು.
ಕತ್ರಿನಾ ಅವರು 2005ರಲ್ಲಿ ‘ಮೆನೇ ಪ್ಯಾರ್ ಕ್ಯು ಕಿಯಾ?’ ಚಿತ್ರದಲ್ಲಿ ನಟಿಸಿದರು. ಇದು ಸಲ್ಲು ನಟನೆಯ ಸಿನಿಮಾ. ಈ ಸಿನಿಮಾ ಕತ್ರಿನಾಗೆ ದೊಡ್ಡ ಹೆಸರು ನೀಡಿತು. ಆ ಬಳಿಕ ಕತ್ರಿನಾಗೆ ಹಲವು ಆಫರ್ಗಳು ಬಂದವು. ನಂತರ ಕತ್ರಿನಾ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟು ಬಂದರು.
ಇದನ್ನೂ ಓದಿ: ಜನ್ಮದಿನಕ್ಕೂ ಮುನ್ನ ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್ ಭೇಟಿ
ಸದ್ಯ ಕತ್ರಿನಾ ಹಿಂದಿಯಲ್ಲೂ ಬ್ಯುಸಿ ಇದ್ದಾರೆ. ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಕ್ಕಿ ಕೌಶಲ್ ಜೊತೆ ಅವರು ವಿವಾಹ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.